ಕಲಬುರಗಿ:ಮನೆಯಲ್ಲಿ ಯಾರು ಇಲ್ಲದೇ ವೇಳೆ ಮನೆ ಬೇಗ ಮುರಿದು 1 ಲಕ್ಷ ನಗದು, ಚಿನ್ನ ಭರಣ, ಆಟೋ ಮತ್ತು ಬೆಂಕಿ ಬೈಕ್ ಗೆ ಬೆಂಕಿ ಹಚ್ಚಿ ದರೋಡೆ ಮಾಡಿರುವ ಘಟನೆ ನಗರದ ಎಂ ಗುಲಶನ್ ಎ ಅರ್ಫಾತ್ ಕಾಲೋನಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.
ಗುಲಶನ್ ಅರ್ಫಾತ್ ಕಾಲೋನಿಯ ನಿವಾಸಿ ಮೊಹ್ಮದ್ ಯೂನುಸ್ ಸೇರಿದ ಮನೆಯಾಗಿದೆ. ಯೂನುಸ್ ಲಾರಿ ಚಾಲಕನಾಗಿದ್ದಾರೆ. ನಿನ್ನೆ ಮೋಹರಮ್ ಹಬ್ಬದ್ ನಿಯಮಿತ ಮನೆಯ ಎಲ್ಲಾ ಸದಸ್ಯರು ದರ್ಗಾಕ್ಕೆ ತೆರಳಿದ್ದು, ಮನೆಯಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ, ಖದೀಮರು ಮನೆಯ ಬೀಗ ಮುರಿದು 1 ಲಕ್ಷ ನಗದು, ಎರಡು ತೋಲಿ ಚಿನ್ನ, ಮನೆಯಲ್ಲಿದ ಕೋಳಿಗಳನ್ನು ಕೊಲೆ ಮಾಡಿ, ಬಡಾವಣೆಯ ಆಟೋ ಮತ್ತು ಬೈಕ್ ಒಂದಕ್ಕೆ ಬೆಂಕಿ ಇಟ್ಟು ಪರಾರಿಯಾಗಿದ್ದಾರೆ ಎಂದು ಯುನೂಸ್ ತಿಳಿಸಿದ್ದಾರೆ.
ಅಲ್ಲದೇ ಬಡಾವಣೆಯಲ್ಲಿ ಮತ್ತೊಂದು ಬೈಕ್ ಕಳ್ಳತನವಾಗಿದೆ ಎಂಬ ಮಾಹಿತಿ ಕೇಳಿಬಂದಿದ್ದು, ಸ್ಥಳಕ್ಕೆ ಎ.ಎಸ್.ಐ ಅಣ್ಣಾಪ್ಪ, ಸುಲ್ತಾನ್, ರಾಜಕುಮಾರ, ಪ್ರಭಾಕರ್ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಡಾವಣೆಯಲ್ಲಿ ಈ ಕೃತ್ಯ ಭಿತ್ತಿ ಮುಡಿಸಿದೆ, ನಿವಾಸಿಗಳು ಆತಂಕದಲ್ಲಿ ಇದ್ದಾರೆ. ಕೃತ್ಯ ನಡೆಸಿದ ಆರೋಪಗಳನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳಬೇಕು. ನಷ್ಟ ಅನುಭವಿಸಿದ ನಿವಾಸಿಗೆ ಸರಕಾರ ಪರಿಹಾರ ನೀಡಬೇಕೆಂದು ಬಡಾವಣೆಯ ಮುಖಂಡರಾದ ದಸ್ತೇಗಿರ್ ಅಹ್ಮದ್ ಒತ್ತಾಯಿಸಿದ್ದಾರೆ.
ಈ ಕುರಿತು ವಿಶ್ವ ವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.