ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆ ಭರ್ತಿ ಮಾಡಲು ಭೀಮಾಶಂಕರ ಪಾಣೇಗಾಂವ್ ಆಗ್ರಹ

0
65

ಕಲಬುರಗಿ: ಕ್ವಿಟ್ ಇಂಡಿಯಾ ಚಳುವಳಿ ವರ್ಷಚಾರಣೆ ಅಂಗವಾಗಿ ನೆನಪಿನಾರ್ಥದಲ್ಲಿ ‘ಅಖಿಲ ಭಾರತ ನಿರುದ್ಯೋಗಿ ಯುವಜನ ಹೋರಾಟ ಸಮಿತಿ’ಯು ಇಡೀ ದೇಶದಾದ್ಯಂತ ಅಖಿಲ ಭಾರತ ಪ್ರತಿಭಟನಾ ಬೇಡಿಕೆ ದಿನವಾಗಿ ಕರೆ ನೀಡಿದೆ.

ಈ ಹಿನ್ನೆಲೆಯಲ್ಲಿ ಕಲ್ಬುರ್ಗಿಯಲ್ಲಿ ಸಹ ಕೇಂದ್ರ ರಾಜ್ಯ ಸರ್ಕಾರದಲ್ಲಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಉದ್ಯೋಗಗಳನ್ನು ಭರ್ತಿ ಮಾಡಬೇಕು ಹಾಗೂ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ಮಾಡಿ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

Contact Your\'s Advertisement; 9902492681

ತಡೆಹಿಡಿದಿರುವ ನೇಮಕ ಪ್ರಕ್ರಿಯೆ ಪುನಃ ಆರಂಭಿಸಬೇಕು. ಪ್ರಥಮ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ ಆದೇಶ ನೀಡಬೇಕು. ಸರ್ಕಾರಿ ಐಟಿಐ ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಬೋಧಕರ ಲಾಕ್ ಡೌನ್ ಅವಧಿ ಯಲ್ಲಿ ಬಾಕಿ ಇರುವ ವೇತನ ಕೂಡಲೇ ಬಿಡುಗಡೆ ಮಾಡಬೇಕು. ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಖಾತ್ರಿ ಪಡಿಸಬೇಕು ಎಂದು ಒತ್ತಾಯಿಸಿದರು.

ಆರೋಗ್ಯ ಇಲಾಖೆಯಲ್ಲಿನ ಗುತ್ತಿಗೆ ಹೊರಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸಬೇಕು. ಶಾಲೆಗಳಲ್ಲಿ ಸಂಗೀತ, ರಂಗಭೂಮಿ, ಚಿತ್ರಕಲೆ, ದೈಹಿಕ ಶಿಕ್ಷಣ,ಶಿಕ್ಷಕರ ನೇಮಕ ಮಾಡಿಕೊಳ್ಳಬೇಕು. ಕೆಪಿಎಸ್ಸಿಯಲ್ಲಿನ ಭ್ರಷ್ಟಾಚಾರ ಅಕ್ರಮ ತಡೆಗಟ್ಟಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ದುರುಪಯೋಗಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ನಂತರ ಜಿಲ್ಲಾಧಿಕಾರಿ ಮೂಲಕಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಭೀಮಾಶಂಕರ ಪಾಣೇಗಾಂವ್, ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಎಸ್. ಎಚ್.ಹಾಗೂ ಅತಿಥಿ ಉಪನ್ಯಾಸಕರು ಗಳಾದ ಅಣವೀರಪ್ಪ ಬೋಳೆವಾಡ, ಮಮತಾ ಪಾಟೀಲ್, ರಾಜಪ್ಪ ರಟಕಲ್, ಶರಣಬಸಪ್ಪ ಮೈಸಲಗಿ, ಸಮಿತಿಯ ಸದಸ್ಯರಾದ ಶರಣು ವಿ.ಕೆ. ಮಲ್ಲಿನಾಥ ಹುಂಡೇಕಲ್, ಈಶ್ವರ್ ಇ. ಕೆ. ಸಂಗಮೇಶ ಕೊಳ್ಳಿ, ವಾಜಿದ್ ಸಯ್ಯದ್, ಜಾವೇದ್ ಖಾನ್, ಸಾನಿಯಾ ಕೋಟಾರ ಸೇರಿದಂತೆ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here