ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಗ್ರಾಪಂ ನೌಕರರಿಂದ ಧರಣಿ

0
71

ಶಹಾಬಾದ:ತಾಲೂಕಿನ ವಿವಿಧ ಗ್ರಾಪಂಗಳ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸೋಮವಾರ ತಾಪಂ ಎದುರುಗಡೆ ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದವರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಗ್ರಾಪಂಯ ೧೫ ನೇ ಹಣಕಾಸು ಯೋಜನೆಯಡಿ ೧೦% ಅನುದಾನದಲ್ಲಿ ಸಿಬ್ಬಂದಿಗಳ ವೇತನ ಪಾವತಿಸಬೇಕು. ತೊನಸನಹಳ್ಳಿ(ಎಸ್) ಗ್ರಾಪಂ ಕರ ವಸೂಲಿಗಾರರಾಗಿ ಸೇವೆ ಸಲ್ಲಿಸಿ ಗ್ರೇಡ-೨ ಕಾರ್ಯದರ್ಶಿಯಾಗಿ ಪದನ್ನೋತಿ ಹೊಂದಿದ ಪ್ರಯುಕ್ತ ಖಾಲಿಯಾಗಿರುವ ಕರ ವಸೂಲಿಗಾರ ಹುದ್ದೆಗೆ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಪಂಪ ಆಪರೇಟರ್‌ದಿಂದ ಬಿಲ್ ಕಲೆಕ್ಟರ್‌ಗೆ ಪದೋನ್ನತಿ ನೀಡಬೇಕು. ಗ್ರಾಪಂ ಸಿಬ್ಬಂದಿಗಳ ಅಕ್ರಮ ನೇಮಕಾತಿ ಮಾಡಿಕೊಂಡಿರುವ ಬಗ್ಗೆ ತನಿಖೆ ಮಾಡಿ ನೇಮಕಾತಿ ರದ್ದು ಪಡಿಸಬೇಕು.

Contact Your\'s Advertisement; 9902492681

ಪ್ರಸ್ತುತ ಸೇವೆ ಸಲ್ಲಿಸಿರುವ ಸಿಬ್ಬಂದಿಗಳ ನೇಮಕಾತಿ ಪ್ರಕ್ರಿಯೆಗಳ ದಾಖಲೆಗಳು ಸಂಬಂಧಿಸಿದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಂದ ಸಂಘಕ್ಕೆ ಸಲ್ಲಿಸಬೇಕು. ಎಲ್ಲಾ ಗ್ರಾಪಂಗಳಲ್ಲಿ ಸಿಬ್ಬಂದಿಗಳ ಸೇವಾ ಪುಸ್ತಕ ನಿರ್ವಹಣೆ ಮಾಡಬೇಕು. ಸಿಬ್ಬಂದಿಗಳ ಬಾಕಿ ಉಳಿದ ಜಿಪಂ ಅನುಮೋದನೆ ಶೀಘ್ರವೇ ಮಾಡಬೇಕು. ಸರ್ಕಾರಿ ಆದೇಶದಂತೆ ಕರ ವಸೂಲಿಯಲ್ಲಿ ೪೦% ಸಿಬ್ಬಂದಿ ವೇತನ ಪಾವತಿಸಬೇಕು. ಇಎಫ್‌ಎಮ್‌ಐ ಬಾಕಿ ಇರುವ ಸಿಬ್ಬಂದಿಗಳನ್ನು ಅನುಮೋದಿಸಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಹಲವಾರು ಬಾರಿ ತಿಳಿಸಿದರೂ ಬೇಡಿಕೆಗಳು ಈಡೇರಿಲ್ಲ.ಆದ್ದರಿಂದ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು.ಇಲ್ಲದಿದ್ದರೇ ಉಗ್ರವಾದ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ಒಂದು ದಿನದಲ್ಲಿ ಬೇಡಿಕೆ ಈಡೇರಿಸಬೇಕು.ಇಲ್ಲದಿದ್ದರೇ ಹೋರಾಟ ಮುಂದುವರೆಯುತ್ತದೆ ಎಂದು ತಾಪಂ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಕರ್ನಾಟಕ ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ.ಸಿ.ಹೊನಗುಂಟಾ, ಖಜಾಂಚಿ ಚಿತ್ರಶೇಖರ ದೇವರಮನಿ, ಸಿಐಟಿಯು ತಾಲೂಕಾಧ್ಯಕ್ಷ ಶೇಖಮ್ಮ ಕುರಿ, ಕೆಪಿಆರ್‌ಎಸ್ ತಾಲೂಕಾ ಸಂಚಾಲಕ ರಾಯಪ್ಪ ಹುರಮುಂಜಿ ಸೇರಿದಂತೆ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here