ಕಲಬುರಗಿ: ಸಾಲ ಪಡೆಯುವಾಗಿನ ಉತ್ಸಾಹ ಹಾಗೂ ಆಸಕ್ತಿ ಸಾಲ ಮರುಪಾವತಿಸುವಾಗಲೂ ಇರಬೇಕು. ಪಡೆದ ಸಾಲ ಸಕಾಲದಲ್ಲಿ ಪಾವತಿಸಿದಾಗ ಮಾತ್ರ ಸಹಕಾರಿ ಕ್ಷೇತ್ರದ ಬಲವರ್ಧನೆ ಸಾಧ್ಯ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ಹೇಳಿದರು.
ನಗರದ ಕೋಟನೂರ ಡಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ರೈತರಿಗೆ ಬೆಳೆಸಾಲ ವಿತರಿಸಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ನಿರ್ಮಿಸಲಾಗುವ ೨೨ ಲಕ್ಷ ರೂ ವೆಚ್ಚದ ಸಾಂಸ್ಕೃತಿಕ ಭವನದ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು
ನಷ್ಟದ ಸುಳಿಯಲ್ಲಿದ್ದ ಡಿಸಿಸಿ ಬ್ಯಾಂಕ್ ನ್ನು ಅಪೆಕ್ಸ್ ಮೂಲಕ ಬಿ.ಎಸ್.ಯಡಿಯೂರಪ್ಪ ಅವರು ಪುನಶ್ಚೇತನ ಗೊಳಿಸಿದ್ದಾರೆ. ಹೆಚ್ಚಿನ ಜನರಿಗೆ ಸಾಲ ಸಿಗುವಂತಾಗಲು ಹಾಗೂ ಇನ್ನಷ್ಟು ಸಾಲ ಸಿಗುವ ನಿಟ್ಟಿನಲ್ಲಿ ರೈತರು ಸಕಾಲಕ್ಕೆ ಸಾಲ ಮರು ಪಾವತಿಸಬೇಕೆಂದರು.
ಈಗ ನಿರ್ಮಾಣವಾಗುವ ಸಾಂಸ್ಕೃತಿಕ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗಲಿದೆ. ಕೊಟನೂರ ಡಿ ಗ್ರಾಮದ ಸುತ್ತಮುತ್ತ ಹೊಸ ಬಡಾವಣೆಗಳಲ್ಲಿ ಸುಮಾರು ೪ ಕೋ ರೂ ವೆಚ್ಚದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮ ಮುಂದುವರೆಸಲು ಸದಾ ಬದ್ದತೆ ಹೊಂದಲಾಗಿದೆ ಎಂದು ಅಪ್ಪುಗೌಡ ಹೇಳಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣಬಸಪ್ಪ ಪಾಟೀಲ್ ಅಷ್ಠಗಾ ಮಾತನಾಡಿ, ಇಲ್ಲಿಯವರೆಗೆ ಸಾಲ ಪಡೆಯದ ರೈತರಿಗೆ ಈಗ ಬೆಳೆ ಸಾಲ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಲ ಮನ್ನಾದ ರೈತರಿಗೂ ಹೊಸದಾಗಿ ಬೆಳೆಸಾಲ ನೀಡಲಾಗುವುದು ಎಂದು ಪ್ರಕಟಿಸಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಆಡಳಿತ ಮಂಡಳಿ ಸದಸ್ಯ ತಿಪ್ಪಣ್ಣರೆಡ್ಡಿ ಕೋಲಿ ಮಾತನಾಡಿ, ಸಂಘದಿಂದ ಈಗಾಗಲೇ ಹಲವು ಕಡೆ ಉಪಯುಕ್ತ ಸಾಂಸ್ಕೃತಿಕ ಭವನ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ರಾಜೇಂದ್ರ ಕರೆಕಲ್ ಸಹ ಮಾತನಾಡಿದರು.
ಕೋಟನೂರ ಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವರಾಜ ಎಸ್ ಸಿರಸಗಿ, ಉಪಾಧ್ಯಕ್ಷ ಶಾಮರಾವ ನಾಟೀಕಾರ, ನಿರ್ದೇಶಕ ರಾದ ಹಣಮಂತರಾವ ಎಸ್. ಪಾಟೀಲ್, ದೊಡ್ಡ ಪ್ಪ ಕಾಮಾ, ಸುಭಾಶ್ಚಂದ್ರ, ಮುಕರಂಬಿ, ಶಾಮರಾವ ಪಾಟೀಲ್, ಗುರುನಾಥ ಹೂಗಾರ, ಕಾರ್ಯದರ್ಶಿ ಭೀಮಾಶಂಕರ ಪಾಟೀಲ್, ಪತ್ರಕರ್ತ ಹಣಮಂತರಾವ ಭೈರಾಮಡಗಿ, ಕೋಟನೂರ ಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದಿನೇಶ ದೊಡ್ಡಮನಿ, ಉಪಾಧ್ಯಕ್ಷ ಶಿವಪುತ್ರ ಮಾಲಿಪಾಟೀಲ್, ಪ್ರಮುಖರಾದ ಶ್ರೀ ನಿವಾಸ ದೊಡ್ಡಮನಿ, ಶಿವರಾಜ ಬಿರಾದಾರ, ಚಂದ್ರಕಾಂತ ಸಿರಸಗಿ, ಶರಣಬಸಪ್ಪ ಬಿರಾದಾರ, ಸಲಿಂ ಪಟೇಲ್, ದಿನೇಶ ದೊಡ್ಡ ಮನಿ, ದೇವಿಂದ್ರ ಸಿನ್ನೂರ ಸೇರಿದಂತೆ ಮುಂತಾದವರಿದ್ದರು.
ಕೊರೊನಾ ಮೂರನೇ ಅಲೆ ಬರುವ ಸಾಧ್ಯತೆವಿದೆ ಎನ್ನಲಾಗುತ್ತಿದೆ. ಹೀಗಾಗಿ ಸಾರ್ವಜನಿಕ ರು ಮತ್ತಷ್ಟು ಜಾಗೃತಿ ವಹಿಸುವುದು ಅಗತ್ಯವಾಗಿದೆ. ಆದ್ದರಿಂದ ಎಲ್ಲರೂ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಲಸಿಕೆಗಾಗಿ ಕೇಂದ್ರ ಸರ್ಕಾರ ೩೫೦೦೦ ಕೋ. ರೂ ಖರ್ಚು ಮಾಡುತ್ತಿದೆ.