ಯಕ್ಷಂತಿ ಗ್ರಾಮದಲ್ಲಿ ೭೫ನೇ ಸ್ವಾತಂತ್ರ್ಯ ದಿನ ಆಚರಣೆ

0
74

ಯಾದಗಿರಿ: ವಡಗೇರ ತಾಲೂಕಿನ ಯಕ್ಷಿಂತಿ ಗ್ರಾಮದ ಅಂಬೇಡ್ಕರ ವೃತ್ತದಲ್ಲಿ ಡಾ,,ಅಂಬೇಡ್ಕರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಧ್ವಜಾರೋಹಣ ಮಾಡುವುದರ ಮುಖಾಂತರ ೭೫ನೇ ಸ್ವಾತಂತ್ರ್ಯ ದಿನಾಚರಣೆ ಮಾಡಲಾಯಿತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಗರಾಜ ಚಲುವಾದಿ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು ೭೪ ವರ್ಷಗಳು ಕಳೆದರು ನಮಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ ರಾತ್ರಿ ೧೨ ಗೆಂಟೆಗೆ ಒಬ್ಬ ಮಹಿಳೆ ಓಡಾಡಿದಾಗ ಸ್ವಾತಂತ್ರ್ಯ ಸಿಕ್ಕಂತೆ ಎಂದು ಹೇಳುತ್ತಾರೆ.

ಆದರೆ ನಮ್ಮ ದೇಶದ ಮಹಿಳೆಯರ ಮೇಲೆ ದಿನನಿತ್ಯ ಅತ್ಯಚಾರ ಕೊಲೆಗಳು ಆಗುತ್ತಿವೆ ಯಾವ ಮಹಿಳೆಯರು ಸಹ ಸ್ವಾತಂತ್ರ್ಯದಿಂದ ಬದುಕಲಾಗುತ್ತಿಲ್ಲ ಡಾ,, ಅಂಬೇಡ್ಕರ ಹೇಳಿದಂತೆ ನಾವೆಲ್ಲ ಶಿಕ್ಷಣವಂತರಾಗಬೇಕು ಸಂಘಟಿತರಾಗಬೇಕು ಹೊರಾಟಗಾರರಾಗಬೇಕು ಅಂದಾಗ ಮಾತ್ರ ನಮಗೆ ಸ್ವಾತಂತ್ರ್ಯವು ಸಿಗುತ್ತೆ ಸರಾಕಾರದ ಸೌಲಭ್ಯವು ಸಿಗುತ್ತೆದೆ ಎಂದು ಹೇಳಿದರು.

Contact Your\'s Advertisement; 9902492681

ನಂತರ ಮಾತನಾಡಿದ ನಿಂಗಣ್ಣ ಕರಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಮಹಾನ ವ್ಯಕ್ತಿಗಳನ್ನು ನಾವೆಲ್ಲ ಸ್ಮರಿಸಿಕೊಳ್ಳಬೇಕು ಹಲವಾರು ವ್ಯಕ್ತಿಗಳು ಸ್ವಾತಂತ್ರ್ಯಕ್ಕಾಗಿ ಹೊರಾಟಮಾಡಿದ್ದಾರೆ.

ತಮ್ಮ ಜೀವನ ಮುಡುಪಾಗಿಟ್ಟು ತಮ್ಮ ಜೀವನ ಬಲಿದಾನ ಕೊಟ್ಟು ನಮಗೆ ಸ್ವಾತಂತ್ರ್ಯ ಕೊಟ್ಟಿದ್ದಾರೆ ದುರಂತವೆನೆಂದರೆ ರಾಜ್ಯ ಹಾಗೂ ಕೇಂದ್ರ ಸರಕಾರದ ದುರಾಡಳಿತದಿಂದ ದೇಶದಲ್ಲಿ ಇಂದಿಗೂ ಅಷ್ಪೃಶ್ಯತೆ ತಾರತಮ್ಯದಿಂದ ಸರಕಾರದ ಮೂಲಸೌಕರ್ಯ ಸಿಗದೆ ಬಡತನದಿಂದ ಮಹಿಳೆಯರು ನೂರುರೂಪಾಯಿಗೆ ದಿನಗೂಲಿ ಮಾಡುತ್ತ ಜೀವನಸಾಗಿಸುತ್ತಿದ್ದಾರೆ.

ಸರಕಾರದ ಯಾವ ಯೋಜನೆಯು ಸಮರ್ಪಕವಾಗಿ ಬಡವರಿಗೆ ಮುಟ್ಟುತ್ತಿಲ್ಲ ಸರಕಾರದ ಅನುದಾನವನ್ನು ಮನಸಿಗೆ ಬಂದಂತೆ ಕ್ರೀಯಾಯೋಜನೆ ತಯಾರಿಸಿ ಲೂಟಿ ಮಾಡುತ್ತಿವೆ ಈಗಿನ ಸರಕಾರಗಳು ಗ್ರಾಮಿಣ ಭಾಗದ ರಸ್ತೆಗಳಾಗಲಿ ಇನ್ನಿತರ ಮೂಲಸೌಕರ್ಯದ ಬಗ್ಗೆ ಯಾವ ವ್ಯಕ್ತಿ ಸಂಬಂದಪಟ್ಟ ಜನಪ್ರತಿನಿಧಿಗಳಿಗೆ ಪ್ರಶ್ನೆ ಮಾಡುತ್ತಾನೆ ಅಂತ ವ್ಯಕ್ತಿಗಳ ಮೇಲೆ ಎಪ್ ಐ ಆರ್ ಮಾಡಿಸುತ್ತಾರೆ ದೌರ್ಜನ್ಯ ಮಾಡಿಸುತ್ತಾರೆ ಯಾರು ರಾಜಕಾರಣಿಗಳ ಗುಲಮರಾಗಿರುತ್ತಾರೊ ಅಂತವರು ಸರಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ ಈಗೀನ ಜನಪ್ರತಿನಿಧಿಗಳು ಪ್ರಜಾಪ್ರಭುತ್ವವನ್ನು ಕೊಗ್ಗೊಲೆ ಮಾಡುತ್ತಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೆ ಪ್ರಭುಗಳು ಜನಪ್ರತಿನಿಧಿಗಳು ಪ್ರಜೆಗಳ ಸೇವಕರು ಅವರು ತಮ್ಮ ಕ್ಷೇತ್ರದ ಜನರ ಎಳಿಗೆಗಾಗಿ ಶ್ರಮಿಸಬೇಕು ಎಂದರು ಈ ಸಂದರ್ಬದಲ್ಲಿ ಹೊನ್ನಪ್ಪ ಚಲುವಾದಿ ಚಂದಪ್ಪ ಹುರಸಗುಂಡಗಿ ಯಂಕಪ್ಪ ತಳವಾರ ಭೀಮರಾಯ ಕರಡಿ ನಿಂಗಪ್ಪ ತಳವಾರ ಹಾಗೂ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here