ಎಬಿವಿಪಿ ಭಿತ್ತಿ ಪತ್ರದ ಮೂಲಕ ಅರಿವು ಆಂದೋಲನ

0
13

ಸುರಪುರ: 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಮುಂದಾಗಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಭಿತ್ತಿ ಪತ್ರಗಳ ಮೂಲಕ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಸ್ವಾತಂತ್ರ್ಯದ ಅರಿವು ಮೂಡಿಸಲು ಮುಂದಾಗಿದೆ.

ಭಾನುವಾರ ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಮತ್ತು ಹಳೆ ಸರಕಾರಿ ಆಸ್ಪತ್ರೆ ಆವರಣದಲ್ಲಿರುವ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ಬಳಿಯಲ್ಲಿ ಸುರಪುರ ಸಂಸ್ಥಾನದ ರಾಜಾ ಲಕ್ಷ್ಮೀನಾರಾಯಣ ನಾಯಕರ ನೇತೃತ್ವದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಉಪನ್ಯಾಸಕ ಹಾಗು ಎಬಿವಿಪಿ ಕಲಬುರ್ಗಿ ವಿಭಾಗಿಯ ಸಹ ಪ್ರಮುಖ ಡಾ:ಉಪೇಂದ್ರ ನಾಯಕ ಸುಬೇದಾರ ಮಾತನಾಡಿ,ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸುರಪುರ ಸಂಸ್ಥಾನದ ಕೊಡುಗೆ ದೊಡ್ಡದಿದೆ.ಇಂದು ನಾವೆಲ್ಲರು 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ ಎಂದರೆ ಇದಕ್ಕೆ ಸುರಪುರ ಸಂಸ್ಥಾನವು ನೀಡಿದ ಕೊಡುಗೆಯಿದೆ.ಸ್ವಾತಂತ್ರ್ಯ ಪಡೆಯಲು ಮಹನಿಯರ ಹೋರಾಟದ ಫಲ ಎಂಬುದು ಅನೇಕರಿಗೆ ತಿಳಿದಿಲ್ಲ,ಇದನ್ನು ಜನರಿಗೆ ತಿಳಿಸುವ ಕೆಲಸವನ್ನು ಎಬಿವಿಪಿ ಮಾಡುತ್ತಿದ್ದು,ಸುರಪುರ ತಾಲೂಕಿನ ಮೂವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ನಮ್ಮ ಮುಖಂಡರು ಮತ್ತು ಕಾರ್ಯಕರ್ತರು ಜನರಿಗೆ ಸ್ವಾತಂತ್ರ್ಯದ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಸುರಪುರ ಸಂಸ್ಥಾನದ ಕೊಡುಗೆಯ ಕುರಿತು ಜಾಗೃತಿ ಮೂಡಿಸಲಿದೆ ಎಂದರು.

ಇದೇ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಅವರ ನೇತೃತದಲ್ಲಿ ಪರಿಷತ್ ವತಿಯಿಂದ ಹೊರತರಲಾದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಮುಖಂಡರಾದ ಆರ್.ಸಿ ನಾಯಕ,ರಾಮಚಂದ್ರರಡ್ಡಿ,ನಿಂಗಣ್ಣ ವಡಗೇರಿ ಸೇರಿದಂತೆ ಅನೇಕ ಜನ ಮುಖಂಡರು ಹಾಗು ಆಸ್ಪತ್ರೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here