ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ

0
50

ಆಳಂದ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕೇಂದ್ರ ಮತ್ತು ಕಡಗಂಚಿ ಆರೋಗ್ಯ ಕೇಂದ್ರದ ವತಿಯಿಂದ , ಸಕ್ರಿಯ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮದ ಅಂಗವಾಗಿ. ಅ,16 ರಿಂದ 31 ಅಗಸ್ಟ್ ರವರೆಗೆ ನಡೆಯುವ ಕಾರ್ಯಕ್ರಮವಾಗಿದ್ದು, ಕ್ಷಯರೋಗ ಹರಡುವ ಲಕ್ಷಣಗಳ ಕುರಿತು ಗ್ರಾಮದ ಜನರಿಗೆ ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಕಡಗಂಚಿ ಪ್ರಾಥಮಿಕ ಆರೋಗ್ಯ ವೈದ್ಯಾಧಿಕಾರಿ ಡಾ. ರಮೇಶ್ ಪಾಟೀಲ್ ಅವರು ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.

ಸಕ್ರಿಯ ಕ್ಷಯರೋಗ ಪತ್ತೆ ಕೋವಿಡ್19 ನಿಂದ ಗುಣಮುಖರಾದವರ ಕ್ಷಯರೋಗ ಪತ್ತೆ ಹಚ್ಚುವಿಕೆ ಆಂದೋಲನ ಕುರಿತು ಆಳಂದ ತಾಲ್ಲೂಕಿನ ಕಡಗಂಚಿ ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರದ ವತಿಯಿಂದ ಕೋವಿಡ್ 19 ರಿಂದ ಗುಣಮುಖ ರಾಗಿರುವ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವ ಹಾಗೂ ಶ್ವಾಸ ಕೋಶವು ಹಾನಿಯಾಗಿರುವ ಕಾರಣದಿಂದ ಕ್ಷಯರೋಗ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುವುದು ವಿಶ್ಲೇಷಣೆಯಲ್ಲಿ ಕಂಡುಬಂದಿರುವುದರಿಂದ ಗ್ರಾಮದ ಜನರಲ್ಲಿ ಕೋವಿಡ್ ನಿಂದ ಗುಣಮುಖರಾದವರು ರೋಗ ನಿರೋಧಕ ಶಕ್ತಿ ಕಡಿಮೆ ಅಗಿರುತ್ತದೆ ಅದರರಿಂದ ಪ್ರತಿಯೊಂದು ಮನೆ ಬಿಡದೆ ಅವರಗೆ ಅತ್ಮಸ್ಥೈರ್ಯ ತುಂಬವ ಕೆಲಸದ ಜೊತೆಗೆ ಕಫದ ಮಾದರಿ ಸಂಗ್ರಹ ಮಾಡಬೇಕಾಗಿದೆ. ಅವರ ಆರೋಗ್ಯ ಬಹಳ ಮುಖ್ಯ ಅದರ ಜೊತೆಗೆ ಕ್ಷಯರೋಗ ಮತ್ತು ಮಹಾ ಮಾರಿ ಕೊರೊನಾ ರೋಗದ ಬಗ್ಗೆ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು.

Contact Your\'s Advertisement; 9902492681

ವೇದಿಕೆ ಮೇಲೆ ಜಿಲ್ಲಾ ಡಿ ಆರ್ ಟಿಬಿ ಟೀಸ್ ಸಮಾಲೋಕ ಮಂಜುನಾಥ ಕಂಬಳಿಮಠ ಅವರು ಮಾತನಾಡುತ್ತಾ ಕ್ಷಯರೋಗ ಬಂದರೆ ಸೂಕ್ತ ಚಿಕಿತ್ಸೆಯಿಂದ ಬೇಗ ಗುಣಮುಖರಾಗಬಹು ಅದರೆ ನಮ್ಮ ಜನರಲ್ಲಿ ಮೂಢನಂಬಿಕೆ ಇರುವುದರಿಂದ ದೇವರ ಮೌರೆ ಮಂತ್ರವಾದಿ ಕಡೆ ಹೋಗುತ್ತರೆ ಅದರೆ ಅಲ್ಲಿ ಹೊಗುವ ಬದಲು ಸಮೀಪದ ಸರ್ಕಾರಿ ಆಸ್ಪತ್ರೆ ಬಂದರೆ ನಮ್ಮ ಆರೋಗ್ಯ ಕಾರ್ಯಕರ್ತರು ಹಾಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿದರೆ ಉತ್ತಮವಾದ ಮಾರ್ಗ ಸೂಚಿಸುವ ಜೋತೆ ಅವರ ಆರೋಗ್ಯ ಕಡೆ ಲಕ್ಷ ವಹಿಸಿ ಕ್ಷಯರೋಗ ವಾಸಿ ಅಗುವವರೆಗೆ ಹಚ್ಚಿನ‌ ಕಾಳಜಿ ತೊರಿಸುತ್ತರೆ ಎಂದು ಹೇಳಿದ ನಂತರ ಕ್ಷಯರೋಗದ ಲಕ್ಷಣದ ಬಗ್ಗೆ ಎರಡು ವಾರಕಿಂತ ಕೆಮ್ಮು, ರಾತ್ರಿ ವೇಳೆ ಜ್ವರ ಬೆವರು ಬರುವುದು, ಹಸಿವಾಗದಿರುವುದು, ತೂಕ ಕಡಿಮೆ ಅಗುವುದು, ಕಫದಲ್ಲಿ ರಕ್ತ ಬಿಳುವುದರ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಪೋಷಣಾ ಯೋಜನೆ ಕಡೆಯಿಂದ ತಿಂಗಳಿಗೆ 500 ನೇರ ಬ್ಯಾಂಕ್ ಅಕೌಂಟ್ ಜಮಾ ಅಗುತ್ತದೆ ಎಂದು ವಿವರಿಸಿದರು.

ಹಾಗೆ ಗುಂಡಪ್ಪ ದೊಡ್ಡಮನಿ ಅವರು ಮಾತನಾಡುತ್ತ ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಸಕ್ರಿಯ ಕ್ಷಯರೋಗ ನಿರ್ಮೂಲನಾ ಕೇಂದ್ರ ರೂಪುರೇಷೆ ಮನೆ ಭೇಟಿ ಸಂದರ್ಭದಲ್ಲಿ ಬೇಕಾಗುವ ಸಾಮಗ್ರಿಗಳು ಹೇಗೆ ಬಳಕೆ ಮಾಡಬೇಕು ವರದಿ ಮೌಲ್ಯಮಾಪನ ಸರಿಯಾಗಿ ಮನೆ ಭೇಟಿ ಮಾಡಿದ ಕಫದ ಮಾದರಿ ಎಷ್ಟು ಜನರಿದ್ದು ಅವರ ಮಾಹಿತಿ ಕಲೆ ಹಾಕಿ ಮಾದರಿ ಪ್ರತಿಯನ್ನು ತಾಲ್ಲೂಕು ಆರೋಗ್ಯಾಧಿಕರಿ ಕಛೇರಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು. ವೇದಿಕೆ ಮೇಲೆ ಎಸ್ ಟಿ ಎಸ್. ಡಾ ವಿಶಾಲ ಸಜ್ಜನ್, ಹಿರಿಯ ನಿರೀಕ್ಷಾಣಾಧಿಕಾರಿ ನೀಲಕಂಠರಾವ್ ಗೋಗಿ. ವಿಜಯಕುಮಾರ್ ಅವರು ಇದ್ದರು.

ಕಾರ್ಯಕ್ರಮದಲ್ಲಿ ಪ್ರಮುಖ ರಾದ, ಇಂದುಮತಿ, ವಿಜಯಲಕ್ಷ್ಮಿ, ಈರಮ್ಮ, ಹರೀಶ್, ಎಫ್ ಡಿ ಎ. ನಾಗರಾಜ. ಆಶಾ ಕಾರ್ಯಕರ್ತೆಯಾರದ ವಿಜಯಲಕ್ಷ್ಮಿ ಪಾಟೀಲ್, ಸಂಗೀತ, ಜಯಶ್ರೀ ಪಾಟೀಲ, ಬಸಮ್ಮ ಜಮಾದಾರ, ಚಂದ್ರಕಲಾ, ಮಹಾನಂದ ಪಂಚಶೀಲ, ಗ್ರಾಮದ ಜನರು, ಇನ್ನಿತರ ಆರೋಗ್ಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here