ಕಲಬುರಗಿ: ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಡಿವಿಬಿ ಡಿಸಿ ಕಲಬುರಗಿ . ನೇತ್ರತ್ವದಲ್ಲಿ ವಿಭಾಗ ಮಟ್ಟದ ಎರಡು ದಿನದ ತರಬೇತಿಯನ್ನು ಜಿಲ್ಲಾ ಡಿವಿಬಿ ಡಿಸಿ ಅಧಿಕಾರಿ ಡಾ. ಬಸವರಾಜ ಗುಳಗಿ ಸಸಿಗೆ ನೀರೇರೆಯುವ ಮೂಲಕ ತರಬೇತಿಗೆ ಚಾಲನೆ ನೀಡಿದರು
ನಗರದ ವಿಭಾಗಿಯ ತರಬೇತಿ ಕೇಂದ್ರ ಕಲಬುರಗಿಯಲ್ಲಿ ಆರೋಗ್ಯ ನಿರಿಕ್ಷಣಾಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಾಳಿಗೆ ಎರಡು ದಿನದ ತರಬೇತಿ ಕೀಟ ಜನ್ಯ ದಿಂದ ಹರಡುವ ರೋಗ ಲಕ್ಷಣಗಳ ಬಗ್ಗೆ ಶಿಬಿರಾರ್ಥಿಗಳಿಗೆ ವಿಭಾಗಿಯ ಕೀಟ ಶಸ್ತ್ರ ತಜ್ಞರಾದ ಗಂಗೋತ್ರಿ. ಜಿಲ್ಲಾ ಕೀಟ ಶಾಸ್ತ್ರ ತಜ್ಞರಾದ ಚಾಮರಾಜ ದೊಡ್ಡಮನಿ ಅವರು ತರಬೇತಿಯನ್ನು ನೀಡಿದರು.
ಪ್ರಮುಖರಾದ ಸಹಾಯಕ ಘಟಕ ಅಧಿಕಾರಿ ಗಣೇಶ ಚಿನ್ನಾಕರ್, ಹಿರಿಯಾ ನಿರಿಕ್ಷಣಾಧಿಕಾರಿ ಶರಣಬಸಪ್ಪ ಬಿರಾದಾರ, ಜಿಲ್ಲಾ ವಿಬಿ ಡಿಸಿ ಮೇಲ್ವಿಚಾರಕ ಕಾರ್ಣೀಕ್ ಕೋರೆ, ಲಕ್ಷಣ ರಾಠೋಡ , ಶಂಕರ್ ಕಣ್ಣಿ, ಈ ಒಂದು ತರಬೇತಿಯಲ್ಲಿ ಆರೋಗ್ಯ ನಿರಕ್ಷಣಾಧಿಕಾರಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳು ಲಾಭ ಪಡೆದುಕೊಂಡರು. ಇಲಾಖೆ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.