ಮುನೀರ್‍ಬೊಮ್ಮನಹಳ್ಳಿ ಶಾಲೆಯಲ್ಲಿ ಅಕ್ರಮವಾಗಿ ವಾಸವಿರುವವರ ತೆರವುಗೊಳಿಸಿ: ದಲಿತ ಸೇನೆ

0
21

ಸುರಪುರ: ತಾಲೂಕಿನ ಮುನೀರ್‍ಬೊಮ್ಮನಹಳ್ಳಿ ಗ್ರಾಮದಲ್ಲಿರುವ ಹಳೆಯ ಸರಕಾರಿ ಶಾಲಾ ಕಟ್ಟಡದಲ್ಲಿ ಅಕ್ರಮವಾಗಿ ವಾಸವಿರುವವರ ತೆರವುಗೊಳಿಸುವಂತೆ ಆಗ್ರಹಿಸಿ ದಲಿತ ಸೇನೆಯಿಂದ ನಗರದ ತಹಸೀಲ್ ಕಚೇರಿ ಮುಂದೆ ಧರಣಿ ನಡೆಸಲಾಯಿತು.

ಮಂಗಳವಾರ ಬೆಳಿಗ್ಗೆಯಿಂದ ಧರಣಿ ಆರಂಭಿಸಿದ ಮುಖಂಡರು ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಬೇಸರ ವ್ಯಕ್ತಪಡಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರು,ಮುನೀರ್‍ಬೊಮ್ಮನಹಳ್ಳಿ ಗ್ರಾಮದಲ್ಲಿರುವ ಅಂಗನವಾಡಿ ಕಾರ್ಯಕರ್ತೆ ಹಾಗು ಇವರ ಪತಿಯಾಗಿರುವ ಕಾಚಾಪೂರ ಸರಿಕಾರಿ ಶಾಲೆಯ ಶಿಕ್ಷಕರು ಇವರು ತಮ್ಮ ಕುಟುಂಬವನ್ನು ಮುನೀರ್ ಬೊಮ್ಮನಹಳ್ಳಿಯಲ್ಲಿರುವ ಹಳೆಯ ಸರಕಾರಿ ಶಾಲೆಯಲ್ಲಿದ್ದು ಸರಕಾರಿ ಕಟ್ಟಡವನ್ನು ಅಕ್ರಮವಾಗಿ ಉಪಯೋಗಿಸುತ್ತಿದ್ದಾರೆ.

ಅನೇಕ ವರ್ಷಗಳಿಂದ ಅಂಗನವಾಡಿ ಕಟ್ಟಡದಲ್ಲಿ ವಾಸವಿದ್ದರು,ಸರಕಾರಿ ಶಾಲೆಯಲ್ಲಿ ತಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ಉಪಯೋಗಿಸುತ್ತಿದ್ದರು,ಈಗ ಅಂಗನವಾಡಿ ಕಟ್ಟಡ ಕೆಡವಿರುವುದರಿಂದ ಸರಕಾರಿ ಶಾಲಾ ಕಟ್ಟಡದಲ್ಲಿಯೆ ವಾಸಿಸುತ್ತಿದ್ದಾರೆ.ಆದ್ದರಿಂದ ಅಕ್ರಮವಾಗಿ ಸರಕಾರಿ ಕಟ್ಟಡ ಉಪಯೋಗಿಸುತ್ತಿರುವ ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸಾಯಂಕಾಲದವರೆಗೆ ನಡೆದ ಧರಣಿ ಸ್ಥಳಕ್ಕೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾದೇವರಡ್ಡಿ ಮತ್ತು ಸಿಡಿಪಿಒ ಲಾಲಸಾಬ್ ಪೀರಾಪುರ ಅವರೊಂದಿಗೆ ಆಗಮಿಸಿ ಧರಣಿ ನಿರತರ ಮನವಿಯನ್ನು ಆಲಿಸಿದರು.ನಂತರ ಒಂದು ವಾರದೊಳಗೆ ಕಟ್ಟಡದಲ್ಲಿರುವವರನ್ನು ತೆರವುಗೊಳಿಸುವುದಾಗಿ ಲಿಖಿತ ಭರವಸೆ ನೀಡಿದ ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಧರಣಿಯನ್ನು ನಿಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಅಶೋಕ ಹೊಸ್ಮನಿ,ಉಪಾಧ್ಯಕ್ಷ ಹಣಮಂತ ಕಟ್ಟಿಮನಿ, ತಾಲೂಕು ಅಧ್ಯಕ್ಷ ನಿಂಗಣ್ಣ ಗೋನಾಲ, ಹುಲಗಪ್ಪ ದೇವತ್ಕಲ್,ಮಾನಪ್ಪ ಝಂಡದಕೇರಾ,ತಾಯಪ್ಪ ಕನ್ನೆಳ್ಳಿ,ಭೀಮಣ್ಣ ಹೆಬ್ಬಾಳ,ಬನ್ನಪ್ಪ ಕೋನ್ಹಾಳ,ಶಿವಣ್ಣ ನಾಗರಾಳ,ನಾಗರಾಜ ಗೋಗಿಕೇರಾ,ಗೋಪಾಲ ರಾಯಚೂರ್,ಪ್ರಕಾಶ ಕೆಂಭಾವಿ,ಮೌನೇಶ ಹುಣಸಿಹೊಳೆ,ರಾಹುಲ್ ನಾಟೆಕಾರ್,ಸದಾಶಿವ ಬೊಮ್ಮನಹಳ್ಳಿ,ಮೌನೇಶ ಚಿಂಚೋಳಿ,ಸುಭಾಸ ತೇಲ್ಕರ್,ರವಿ ಬೊಮ್ಮನಹಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here