ಸುರಪುರ: ನಗರದ ವೀರಪ್ಪ ನಿಷ್ಠ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.
ಡಾ.ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಿದ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ರವೀಂದ್ರಕುಮಾರ ನಾಗರಾಳೆ ಮಾತನಾಡಿ ಇಂದು ಆಧುನಿಕತೆಯ ಭರಾಟೆಯಲ್ಲಿ ಮೊಬೈಲ್,ಟಿವಿ ಹಾವಳಿಗಳಿಂದಾಗಿ ಪುಸ್ತಕಗಳನ್ನು ಓದುವ ಹವ್ಯಾಸ ಕಡಿಮೆ ಆಗುತ್ತಿದ್ದು ಚಿಂತಿಸುವ ಸಂಗತಿಯಾಗಿದ್ದು ಗ್ರಂಥಾಲಯಗಳು ಜ್ಞಾನದ ದೇಗುಲಗಳು ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗಪಡೆದುಕೊಂಡು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಪದವಿ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ನಾನಾಗೌಡ ಪಾಟೀಲ,ಉಪನ್ಯಾಸಕರಾದ ಡಾ.ಅಶೋಕ ಪಾಟೀಲ,ಶರಣಗೌಡ ಪಾಟೀಲ,ಗಂಗಾಧರ ಹೂಗಾರ,ಜಗದೀಶ ಪಾಟೀಲ,ಸೋಮನಾಥ ಪಾಟೀಲ,ಶ್ರೀನಾಥರೆಡ್ಡಿ,ಬಸಲಿಂಗಯ್ಯಸ್ವಾಮಿ,ಅನಿಲಕುಮಾರ ಫತ್ತೇಪುರ ಇತರರಿದ್ದರು.