ಶರಣ ಗಜೇಶ ಮಸಣಯ್ಯ: ವಚನ ಚರಿತೆ

0
48

ವಚನ ಸಾಹಿತ್ಯವನ್ನು ಅಗೆದು ತೆಗೆಯುವ ಮೂಲಕ 12ನೇ ಶತಮಾನದ ಶರಣರ ಇತಿಹಾಸ ಕಟ್ಟಿಕೊಟ್ಟ ವಚನ ಗುಮ್ಮಟ ಡಾ. ಫ.ಗು. ಹಳಕಟ್ಟಿಯವರು ಗಜೇಶ ಮಸಣಯ್ಯನ ಕುರಿತು ಒಂದು ಸಂಶೋಧನಾ ಲೇಖನವನ್ನೇ ಬರೆದಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲ್ಲೂಕಿನ ಕರ್ಜಗಿ ಮಸಣಯ್ಯನ ಹುಟ್ಟೂರು ಎಂಬ ಅಭಿಪ್ರಾಯಕ್ಕೆ ವಿದ್ವಾಂಸರು ಬಂದಿದ್ದಾರೆ. ಸತಿಪತಿ ಭಾವ ಮತ್ತು ಲಿಂಗನಿಷ್ಠೆಯ ವಚನಗಳನ್ನು ಬರೆದಿರುವ ಮಸಣಯ್ಯ ಐಕ್ಯಸ್ಥಲ ಮುಟ್ಟಿದ ಶಿವಯೋಗ ಸಾಧಕ ಎಂದು ಹಳಕಟ್ಟಿಯವರು ಗುರುತಿಸಿದ್ದಾರೆ.

Contact Your\'s Advertisement; 9902492681

ಮಸಣಯ್ಯನವರು ಗುರುವನ್ನು ಅರಸಿಕೊಂಡು ಮುನೋಳಿಗೆ ಬಂದಿದ್ದರು ಎಂಬುದಕ್ಕೆ ಕರ್ಜಗಿಯಿಂದ ಮುನೋಳಿವರೆಗೆ ಅನೇಕ ಸ್ಮಾರಕ ಹಾಗೂ ಮೌಖಿಕ ಮಾಹಿತಿಗಳು ದೊರೆಯುತ್ತವೆ. ಸಂಶೋಧಕ ಡಾ. ಎಂ.ಎಂ. ಕಲ್ಬುರ್ಗಿಯವರು ಮಾತ್ರ ಹಾವೇರಿ ಜಿಲ್ಲೆಯ (ಗೊಟಗೋಡಿ- ಹಿರೇಹಳ್ಳ) ಕರ್ಜಗಿಯವರು ಇದ್ದಿರಬಹುದು ಎಂಉ ಹೇಳುತ್ತಾರೆ. ಬಿ.ಬಿ. ದೇಸಾಯಿಯವರ ಶಾಸನದ ಉಲ್ಲೇಖದನ್ವಯ ಸಿದ್ಧ ಗಜೇಶ್ವರ ಮಸಣಯ್ಯನ ಆರಾಧ್ಯದೈವ. ಶಾಸನದಲ್ಲಿ ಬರುವ ಅಂಕುಲಿಗೆ-ಅಣಂದೂರು ಊರುಗಳ ಹೆಸರು ಗಮನಿಸಿದರೆ, ಇವೆಲ್ಲ ಒಂದೇ ವ್ಯಾಪ್ತಿಯಲ್ಲಿ ಬರುವುದರಿಂದ ಗಜೇಶ ಮಸಣಯ್ಯ ಮಹಾರಾಷ್ಟ್ರದ ಕರ್ಜಗಿಯವರು ಎನ್ನುವ ನಿರ್ಧಾರಕ್ಕೆ ಬರಬಹುದು.

ಕಲಬುರಗಿಯಿಂದ ಅಕ್ಕಲಕೋಟೆ 110 ಕಿ. ಮೀ ದೂರದಲ್ಲಿದೆ. ಅಲ್ಲಿನ ಗಜೇಶ ಕರ್ಜಗಿ ಗ್ರಾಮ ಈಗ ನೀಲಗಾರ ಕರ್ಜಗಿ ಆಗಿದೆ. ಇಲ್ಲೊಂದು ಗಜೇಶ್ವರ ದೇವಾಲಯವಿದೆ. ಮಾಲಗಾರ ಸಮಾಜದವರು ಗಜೇಶ ಮಸಣಯ್ಯನವರು ನಮಗೆ ಸಂಬಂಧಿಸಿದವರು ಎಂದು ಹೇಳುತ್ತಾರೆ. ಶಂಕರಲಿಂಗ, ರೇವಣಸಿದ್ಧೇಶ್ವರ ಹಾಗೂ ಚೌಡೇಶ್ವರಿ (ಮಾಯಿ) ದೇವಸ್ಥಾನಗಳು ಸಹ ಇಲ್ಲಿರುವುದನ್ನು ಕಾಣಬಹುದು.

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮುನೋಳಿಯಲ್ಲಿ ಗಜೇಶ ಮಸಣಯ್ಯನ ಭವ್ಯ ದೇವಾಲಯವಿದ್ದು, ಅಲ್ಲಿಯೇ ಮುತ್ಯಾ ಮಸಣಯ್ಯನ ಗದ್ದುಗೆ ಇದೆ. ಇದು ಬಹುಶಃ ಇದು ಗಜೇಶ ಮಸಣಯ್ಯನ ಗುರುವಿನ ಸಮಾಧಿಯಾಗಿರಬೇಕು. ಸಮೀಪದಲ್ಲಿರುವ ಗಂಗಮ್ಮನ ಕೆರೆ, ನೀಲಕಂಠನ ದೇವಸ್ಥಾನ ಇರುವುದರಿಂದ ಈ ಸಮಾಧಿಗಳು ಮಸಣಯ್ಯಗಳ ಮಕ್ಕಳ ಸಮಾಧಿಗಳಿರಬೇಕು. ಮಸಣಯ್ಯನವರು ಇಲ್ಲಿಗೆ ಸಮೀಪದ ಬೆಣ್ಣೆತೊರೆಗೆ ಬಂದು ಆಗಾಗ ಲಿಂಗಪೂಜೆ ಮಾಡುತ್ತಿರಬೇಕು ಎಂದು ಹೇಳಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here