“ವಚನ ದರ್ಶನ” ಪ್ರವಚನ ಭಾಗ-7

0
11

ಕಂಡುದ ಹಿಡಿಯಲೊಲ್ಲದೆ ಕಾಣದುದನರಸಿ
ಹಿಡಿದಿಹೆನೆಂದಡೆ ಸಿಕ್ಕದೆಂಬ ಬಳಲಿಕೆಯ ನೋಡಾ
ಕಂಡುದನೆ ಕಂಡು ಗುರುಪಾದವಿಡಿದಲ್ಲಿ
ಕಾಣಬಾರದುದ ಕಾಣಬಹುದು ಗುಹೇಶ್ವರಾ

ಬಸವಾದಿ ಶರಣರ ವಚನಗಳಲ್ಲಿ ಗುರುವಿನ ಕುರಿತು ಅನೇಕ ರೀತಿಯ ನಿರ್ವಚನವನ್ನು ಕಾಣುತ್ತವೆ. ಶರಣರು ಗುರು ಒಂದು ತತ್ವವೆಂದು ಹೇಳುತ್ತಾರೆ. ಗುರುವೆಂದರೆ, ಅಜ್ಞಾನದ ಕತ್ತಲೆಯನ್ನು ಕಳೆಯುವವನು. ಸೂರ್ಯ ಉದಯವಾದ ಕೂಡಲೇ ಬ್ರಹ್ಮಾಂಡದ ಕತ್ತಲೆಯನ್ನು ಹೇಗೆ ಕಳೆಯುತ್ತದೆಯೋ ಅದೇ ರೀತಿ ಗುರುವೆಂಬ ಸೂರ್ಯನಿಂದ ಪಿಂಡಾಂಡದಲ್ಲಿ ಆವರಿಸಿದ ಅಜ್ಞಾನವೆಂಬ ಕತ್ತಲೆಯನ್ನು ಕಳೆಯುತ್ತದೆ. ಅಜ್ಞಾನದ ಕತ್ತಲೆಯನ್ನು ಕಳೆದಾಗ ಶಿಷ್ಯನಲ್ಲಿ ಜ್ಞಾನ ನೇತ್ರದ ಉದಯವಾಗುತ್ತದೆ. ಆ ಜ್ಞಾನ ನೇತ್ರದಿಂದ ನಮಗೆ ಶಿವಜ್ಞಾನದ, ದಿವ್ಯಜ್ಞಾನದ ಪ್ರಾಪ್ತಿ ಆಗುತ್ತದೆ. ಹಾಗಾಗಿ ಗುರುಕರುಣೆ ನಮಗೆ ಅವಶ್ಯಕವಾಗಿದೆ.

Contact Your\'s Advertisement; 9902492681

ಅಲ್ಲಮಪ್ರಭುಗಳು ಮೇಲಿನ ವಚನದಲ್ಲಿ ಗುರುವಿನ ಮಹತ್ವವನ್ನು ತಿಳಿಸುತ್ತಾರೆ. ಪರಮಾತ್ಮನು ನಿರಾಕಾರ, ನಿರ್ಗುಣ, ಅಗಮ್ಯ, ಅಪ್ರತಿಮ ಇದ್ದಾನೆ. ನಾವು ನಿರಾಕಾರವಾದಂತಹ ಪರಮಾತ್ಮನ ಹುಡುಕುತ್ತ ಹೋದರೆ ಅವನು ಸಿಗುವುದು ಕಷ್ಟ. ಆದರೆ ನಿರಾಕಾರ ಶಿವನ ರೂಪವೇ ಆದ ಗುರು ನಮ್ಮ ಕಣ್ಣಿಗೆ ಕಾಣುತ್ತಾರೆ. ಅವರು ತೋರಿಸಿರುವ ಭಕ್ತಿ ಮಾರ್ಗವನ್ನು ಹಿಡಿದು ನಾವು ಮುನ್ನಡೆದರೆ ಕಾಣಬಾರದ ಶಿವನ ದರ್ಶನ ನಮಗೆ ಆಗುತ್ತದೆ.

ಪರಮಾತ್ಮ ಸರ್ವವ್ಯಾಪಿ, ಸರ್ವಭರಿತ ಆಗಿದ್ದಾನೆ. ಸರ್ವಭರಿತವಾದ ಪರಮಾತ್ಮನನ್ನು ಶ್ರೀಗುರು ನಮಗೆ ಇಷ್ಟಲಿಂಗ ರೂಪದಲ್ಲಿ ಕರಸ್ಥಲಕ್ಕೆ ಕೊಡುತ್ತಾನೆ. ಆ ಇಷ್ಟಲಿಂಗದ ಆರಾಧನೆ ಮಾಡುತ್ತ ಪ್ರಾಣಲಿಂಗ, ಭಾವಲಿಂಗವನ್ನು ಅರಿಯಬೇಕಾಗಿದೆ. ಸರ್ವಭರಿತನಾದ ಪರಮಾತ್ಮನು ನಮ್ಮ ಬಹಿರಂಗದ ಕಣ್ಣಿಗೆ ಕಾಣುವುದಿಲ್ಲ. ಅದನ್ನು ಕಾಣಬೇಕಾದರೆ ಸದ್ಗುರು ನಮಗೆ ದಿವ್ಯಜ್ಞಾನದ ದೃಷ್ಟಿಯನ್ನು ಕರುಣಿಸುತ್ತಾರೆ. ಆವಾಗ ಪರಮಾತ್ಮನ ದರ್ಶನ ನಮಗೆ ಆಗುತ್ತದೆ.

ಶರಣಸಂಸ್ಕøತಿಯಲ್ಲಿ ಅರಿವು-ಆಚಾರ ಮತ್ತು ಅನುಭಾವವನ್ನು ಪಡೆದು ಯಾರು ಬೇಕಾದರು ಗುರು ಆಗಬಹುದು. ಗುರು ಆಗಲಿಕ್ಕೆ ಜಾತಿ, ಮತ, ವರ್ಗ, ವರ್ಣ, ಲಿಂಗ ಹೀಗೆ ಯಾವುದೇ ಭೇದಭಾವವಿಲ್ಲ. ಜ್ಯೋತಿ ಮುಟ್ಟಿ ಜ್ಯೋತಿಯಾದಂತೆ ಗುರುಮುಟ್ಟಿ ಗುರುವಾಗುವ ತತ್ವ ಶರಣರು ನಮಗೆ ಹೇಳಿದ್ದಾರೆ. ಹಾಗಾಗಿ ನಾವು ಸದ್ಗುರುವಿನಿಂದ ಅರಿವು ಆಚಾರ ಮತ್ತು ಅನುಭಾವವನ್ನು ಪಡೆದು ಗುರುರೂಪ ಆಗಬೇಕು.

ಗುರು ನಮ್ಮ ಬಹಿರಂಗದ ಸಂಪತ್ತು ಐಶ್ವರ್ಯ, ಸೌಂದರ್ಯ ನೋಡುವುದಿಲ್ಲ. ಅವನ ದೃಷ್ಟಿಗೆ ಅಂತರಂಗದ ಸೌಂದರ್ಯವನ್ನು ಕಾಣುತ್ತದೆ. ಯಾವ ಶಿಷ್ಯನಲ್ಲಿ ಎಂತಹ ಸಾಮಥ್ರ್ಯ ಎಂಬುದು ಗುರು ಗುರುತಿಸುತ್ತಾರೆ.

ವಿವೇಕಾನಂದರಲ್ಲಿರುವ ಅಪಾರ ಸಾಮಥ್ರ್ಯವನ್ನು ರಾಮಕೃಷ್ಣ ಪರಮಹಂಸರು ಗುರುತಿಸಿದರು. ಹಾಗಾಗಿಯೇ ವಿವೇಕಾನಂದರು ಜಗತ್ತನ್ನೆ ಬೆಳಗಿಸಿದರು. ಗುರುವಿನಲ್ಲಿ ಅಪಾರ ಸಾಮಥ್ರ್ಯವಿರುತ್ತದೆ. ಗುರು ನಮಗೆ ಭವಬಂಧನದಿಂದ ದೂರ ಮಾಡುತ್ತಾರೆ. ಅದಕ್ಕಾಗಿ ನಾವು ಸದ್ಗುರುವಿಗೆ ಮೊರೆಹೋಗುವ ಮೂಲಕ ನಿಜಜ್ಞಾನವನ್ನು ಪಡೆದು ಶಾಶ್ವತ ಸುಖಿಯಾಗೋಣ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here