ಕಲಬುರಗಿ: ನಗರದ ಎಲ್ಲಮ್ಮ ಟೆಂಪಲ್ ಭಾವಸಾರ್ ಭವನದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್, ಹಾಗೂ ಭಾವಸಾರ ಕ್ಷತ್ರಿಯ ಸಮಾಜ ಪಾಮಿಡಿ ಯುಥ ಮತ್ತು ಮಹೀಳ ಮಂಡಲ ಫಂಡ್ಸ, ಶ್ರೀ ಎಲ್ಲಮ್ಮ ಟೆಂಪಲ್ ಟ್ರಸ್ಟ ಹಾಗೂ ಭಾವಸಾರ ವಿಜನ್ ಇಂಡಿಯಾ ಗುಲ್ಬರ್ಗ ವತಿಯಿಂದ ಜಿಲ್ಲಾ ಪಂಚಾಯತ್ ಕಲಬುರ್ಗಿ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಉಚಿತ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ದಿಲ್ಲೆಶ್ ಶಶಿ ಅವರು ಉದ್ಘಾಟಿಸಿದರು.
ಭಾವಸಾರ್ ಸಮಾಜದ ಅಧ್ಯಕ್ಷ ರಾಜು ಜವಳಕರ್, ಭಾವಸಾರ್ ವಿಜನ್ ಇಂಡಿಯಾದ ಅಧ್ಯಕ್ಷ ರಾಜೇಶ ಹಾಗೂ ಭಾವಸಾರ್ ವಿಜನ್ ಸರ್ವ ಸದಸ್ಯರು ಸಮಾಜದ ಎಲ್ಲ ಬಂಧುಗಳು ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಇದ್ದರು.