ಕಲಬುರಗಿ: ಸಂಗೀತ ಮನಸ್ಸನ್ನು ಸಂತೃಪ್ತಿಗೊಳಿಸುತ್ತದೆ. ಎಲ್ಲಾ ದುಕ್ಕ ಮತ್ತು ದುಃಖಗಳನ್ನು ಮರೆಸುತ್ತದೆ. ಸಂಗೀತ ಚಿಕೆತ್ಸೆಯಿಂದ ಮನೋರೋಗಿಗಳನ್ನು ಗುಣಪಡಿಸಲಾಗಿದೆ. ಸಂಗೀತದಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ಶ್ರೀನಿವಾಸ ಸರಡಗಿ ಡಾ. ರೇವಣಸಿದ್ಧ ಶಿವಾಚಾರ್ಯರು ತಿಳಿಸಿದ್ದಾರೆ.
ನಗರದ ಜಿ.ಡಿ.ಏ ಕಾಲೋನಿ ಗೋಕುಲ ನಗರದ ಸಂಸ್ಕøತಿಕ ಭವನದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಾಗೂ ವಿಶ್ವಚೇತನ ಸಂಸ್ಕೃತಿಕ ಕಲಾ ಅಭಿವೃದ್ಧಿ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ 75ನೇ ಸ್ವತಂತ್ರ್ಯ ಅಮೃತ ಮಹೋತ್ಸವ ಹಾಗೂ ಸಂಗೀತ ವೈಭವ ಸಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಂಗೀತ ಪ್ರಮುಖ ಪಾತ್ರವಹಿಸುತ್ತದೆ ಮನುಷ್ಯನಿಗೆ ಆನಂದ ಉಂಟು ಮಾಡುತ್ತದೆ ಅದರಿಂದ ಸಂಗೀತ ಅವಶ್ಯಕವಾಗಿದೆ ಎಂದು ಅವರು ಪ್ರತಿಪಾಧಿಸಿದರು.
ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಸಂಗೀತ, ಜಾನಪದ, ಸುಗಮ ಸಂಗೀತ, ವಚನ ಸಂಗೀತ, ಕೀರ್ತನೆ, ಭಾವಗೀತೆ, ದಾಸವಾಣಿ ಸೇರಿ ವೈವಿದ್ಯಮಯ ಸಂಗೀತ ಶೈಲಿಯನ್ನು ಕಲಾವಿದರು ಹಾಡಿ ರಂಜಿಸಿದರು.
ಈ ಸಂದರ್ಭದಲ್ಲಿ ಮಲ್ಲಣ್ಣ ಎಸ್. ಮಂಗಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಿವರೆಡ್ಡಿ ಐನಾಪುರ್ ಅಧ್ಯಕ್ಷತೆ ವಹಿಸಿದರು. ಬಸವರಾಜ್ ಕೊನೆಕ, ಗಿರೀಶ್ ಗೌಡ ಇನಾಮದಾರ್, ಉಮಾಶಂಕರ.ಎಸ್.ಚಿನ್ನಮಳ್ಳಿ, ರಮೇಶ್ ಸುಂಬುಡ, ಡಾ. ಬಿ.ಜಿ ಪಾಟೀಲ್, ಬಿ.ಎಸ್ ಹೊಸಮನಿ, ಮಹಾದೇವ ಕಾಸ, ಪ್ರಭು ಕಲಶಟ್ಟಿ ಮಾಡಿಯಾಳ ಶಾಂತಕುಮಾರ ಮಾಡಿಯಾಳ ಮತ್ತಿತರರು ಉಪಸ್ಥಿತರಿದ್ದರು.
ದತ್ತರಾಜ್ ಕಲ್ಚಟ್ಟಿ ಸ್ವಾಗತಿಸಿದರು. ಡಾ.ಶಿವರಾಜ್ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು. ಕಸ್ತೂರಿ ಡಿ ಘಟ್ಟಿಕಾರ ವಂದಿಸಿದರು.