ಸುರಪುರ: ನಗರದ ಕಬಾಡಗೇರಾದಲ್ಲಿರುವ ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರಾವಣ ಶ್ರವಣ ಶಿವಾನುಭವ ಚಿಂತನ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ನ್ಯಾಯವಾದಿ ಶಿವಾನಂದ ಆವಂಟಿ ಮಾತನಾಡಿ, ಶ್ರಾವಣ ಮಾಸ ತುಂಬಾ ಪವಿತ್ರ ಮಾಸವಾಗಿದ್ದು ಅನೇಕ ಧಾರ್ಮಿಕ ಆಚರಣೆಗಳನ್ನು ಆಚರಿಸುವ ಈ ಮಾಸದಲ್ಲಿ ಭಕ್ತಿಯಿಂದ ನಡೆದುಕೊಂಡು ಪುರಾಣ ಪ್ರವಚನಗಳನ್ನು ಆಲಿಸುವ ಮೂಲಕ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಅವರು ಹೇಳಿದರು.
ಕಾಮ,ಕ್ರೋಧ,,ಮೋಹ,ಲೋಭ,ಮದ,ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳನ್ನು ಅರಿತುಕೊಂಡು ಬಾಳಿದಲ್ಲಿ ಜೀವನಮಟ್ಟವನ್ನು ಎತ್ತರಕ್ಕೆ ಒಯ್ಯುತ್ತವೆ ಜೀವನದಲ್ಲಿ ನಾವೆಲ್ಲರೂ ಅಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸಾಗಿದಲ್ಲಿ ಮಾತ್ರ ಅರಿಷಡ್ವರ್ಗಗಳನ್ನು ಜಯಿಸಲು ಸಾಧ್ಯ ಎಂದರು.
.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಮಠದ ಪೀಠಾಧಿಪತಿಗಳಾದ ಪ್ರಭುಲಿಂಗ ಮಹಾಸ್ವಾಮಿಗಳು ಮಾತನಾಡಿ, ಶರಣರು ತೋರಿದ ಭಕ್ತಿ ಮಾರ್ಗವನ್ನು ಅನುಸರಿಸಿದಲ್ಲಿ ತಾಮಸ ಗುಣಗಳು ಅಳಿದು ಹೋಗಿ ಸಾತ್ವಿಕತೆ,ಶ್ರದ್ಧೆ,ನಂಬಿಕೆ ಹಾಗೂ ತೃಪ್ತಿ ಮೂಡಿ ವ್ಯಕ್ತಿತ್ವ ವಿಕಸನಗೊಳಿಸುತ್ತದೆ ಎಂದು ಹೇಳಿದರು.
ಎಸ್.ಬಿ.ಆರ್. ಕಾಲೇಜು ಪ್ರಾಂಶುಪಾಲ ಅನಿಲಕುಮಾರ ಪಾಟೀಲ ಮಾತನಾಡಿದರು,ಶಿವಶರಣಯ್ಯ ಸ್ವಾಮಿ ಬಳ್ಳುಂಡಗಿಮಠ ಪ್ರಾರ್ಥನೆ ಗೀತೆ ಹಾಡಿದರು ಹೆಚ್.ರಾಠೋಡ ನಿರೂಪಿಸಿದರು ರಾಜಶೇಖರ ದೇಸಾಯಿ ಸ್ವಾಗತಿಸಿದರು ಹಾಗೂ ದೇವು ಹೆಬ್ಬಾಳ ವಂದಿಸಿದರು,ಈ ಸಂದರ್ಭದಲ್ಲಿ ಸಂಗೀತ ಕಲಾವಿದರಾದ ಮೋಹನರಾವ ಮಾಳದಕರ,ಪ್ರಾಣೇಶರಾವ ಕುಲಕರ್ಣಿ,ಸುರೇಶ ಅಂಬೂರೆ,ಉಮೇಶ ಯಾದವ್,ರಮೇಶ ಕುಲಕರ್ಣಿ,ಮಹಾಂತೇಶ ಶಹಾಪುರಕರ ಹಾಗೂ ಜಗದೀಶ ಮಾನು ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.