ಆಳಂದ: ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿ ಆಗಿರುವ ನಿಲಕಂಠಪ್ಪ ಸುಂದರಕರ್ ಅವರಿಗೆ ಬೀದರ್ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಪಚೇರಿಗೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯಾಗಿ ಬಡ್ತಿಯಾದ ಪ್ರಯುಕ್ತ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು, ಶಾಲಾ ಕ್ರೀಡಾ ಚಟುವಟಿಕೆ ಕೈಗೊಳ್ಳಲು ಈ ಭಾಗದಲ್ಲಿ ಪೂರಕ ವಾತಾವರಣವಿದೆ. ದೈಹಿಕ ಶಿಕ್ಷಕರು ಅದನ್ನು ಸಮರ್ಪಕವಾಗಿ ಕೈಗೊಂಡು ಕ್ರೀಡಾ ಕ್ಷೇತ್ರಕ್ಕೆ ಕೊಡುಗೆ ನೀಡಬೇಕು. ನನ್ನ ಐದು ವರ್ಷದ ಸೇವಾ ಅವಧಿ ಮರೆಯಲಾರದಾಗಿದೆ ಎಂದು ಅವರು ಸ್ಮರಿಸಿದರು.
ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮರೆಪ್ಪ ಬಡಿಗೇರ ಅವರು ಮಾತನಾಡಿ, ತಮ್ಮ ಅನುಭವದ ಮೂಲಕ ಕಚೇರಿಯಲ್ಲೂ ಅಥವಾ ಕ್ರೀಡಾ ಕೂಟzಲ್ಲೂ ಸಮಸ್ಯೆ ಆಗದಂತೆ ಸುವ್ಯವಸ್ಥೆಯಾಗಿ ನಡೆಸಿಕೊಂಡು ಹೋಗಿ ಮಾದರಿ ಅಧಿಕಾರಿಗಳಾಗಿದ್ದು, ಇಂದು ಬಡ್ತಿಹೋಂದಿರುವುದು ತಾಲೂಕಿಗೆ ಹೆಮ್ಮೆಯವಾಗಿದೆ ಎಂದರು.
ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಣಪ್ಪ ಸಂಘನ ಮಾತನಾಡಿ, ಬಡ್ತಿಹೊಂದಿರುವ ನೀಲಕಂಠಪ್ಪ ಅವರು ಅಧಿಕಾರಿಯಾಗಿ ಯಾವತ್ತು ತಮ್ಮ ದರ್ಪ ತೋರದೆ, ಎಲ್ಲಾ ದೈಹಿಕ ಶಿಕ್ಷಕರಿಗೆ ಸೋಹದರಂತೆ ಮಾರ್ಗದರ್ಶನ ನೀಡಿ ಪ್ರೀತಿ ವಿಶ್ವಾಸದಿಂದ ಕಂಡು ಕ್ರೀಡಾ ಕ್ಷೇತ್ರಕ್ಕೆ ಪೋತ್ಸಾಹಿಸಿದ್ದಾರೆ ಎಂದರು.
ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ನರಸಪ್ಪ ಬಿರಾದಾರ ಅವರು ಮಾತನಾಡಿ, ಇಲಾಖೆಗೆ ಒಬ್ಬ ಒಳ್ಳೆಯ ಅಧಿಕಾರಿಯಿದ್ದರೆ ಅವರಿಂದ ಏನೆಯಲ್ಲ ಆಡಳಿತ ಬದಲಾವಣೆ ಆಗಿ ಪ್ರಗತಿಯತ್ತ ಸಾಗುತ್ತದೆ ಎನ್ನುವುದಕ್ಕೆ ದೈಹಿಕ ಶಿಕ್ಷಣಾಧಿಕಾರಿ ನಿಲಕಂಠಪ್ಪ ಅವರೊಬ್ಬ ಮಾದರಿ ವ್ಯಕ್ತಿತ್ವ ಹೊಂದಿದ್ದವರು ಅವರ ಮಾರ್ಗದರ್ಶನ ಎಲ್ಲ ಶಿಕ್ಷಕರಿಗೆ ಪ್ರೇರಣೆ ಆಗಲಿದೆ ಎಂದರು.
ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿಯಾಗಿ ಜಯಪ್ರಕಾಶ ಖಜೂರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುನಾಥ ಭಾವಿ, ದೈಹಿಕ ಶಿಕ್ಷಕ, ಭಾರತ ಸೇವಾದಳ ಅಧಿನಾಯಕ ಶರಣಬಸಪ್ಪ ವಡಗಾಂವ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಸಿಒ ಪ್ರಕಾಶ ಕೊಟ್ರೇಶ ನಿರೂಪಿಸಿದರು. ಶ್ರೀಮಂತ ಪಾಟೀಲ ಸ್ವಾಗತಿಸಿದರು. ದತ್ತಪ್ಪ ಸುಳ್ಳನ ವಂದಿಸಿದರು.