ಸ್ವಯಂ ಉದ್ಯೋಗದಿಂದ ಆರ್ಥಿಕ ಅಭಿವೃಧ್ಧಿ ಸಾಧ್ಯ

0
16

ಕಲಬುರಗಿ: ಉದ್ಯಮ ಆರಂಭಿಸಲು ಬೇಕಾಗುವ ಎಲ್ಲಾ ರೀತಿಯ ಮಾಹಿತಿ ತಿಳಿದುಕೊಂಡು ಸ್ವಯಂ ಉದ್ಯಮ ಪ್ರಾರಂಭಿಸಿ, ಆರ್ಥಿಕ ಅಭಿವೃಧ್ಧಿ ಸಾಧಿಸಬೇಕೆಂದು ಕಲಬುರಗಿ ಜಿಲ್ಲಾ ಪಂಚಾಯತ್ (ಗ್ರಾಮೀಣ ಕೈಗಾರಿಕೆಗಳು) ಉಪನಿರ್ದೇಶಕರಾದ ಅಬ್ದುಲ್ ಅಜೀಮ್ ಅವರು ಉದ್ಯಮಿಗಳಿಗೆ ಕರೆ ನೀಡಿದರು.

ಅವರು ಇತ್ತೀಚೆಗೆ ಕರ್ನಾಟಕ ಉದ್ಯಮ ಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಕೌಶಲ್ಯಾಭಿವೃದ್ಧಿ, ಉದ್ಯಮಶೀತೆ, ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಕಲಬುರಗಿ ಸಂಯುಕ್ತಾಶ್ರಯದಲ್ಲಿ ಕಲಬುರಗಿಯ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಕಚೇರಿಯಲ್ಲಿ ಹತ್ತು ದಿನಗಳ ಕಾಲ ಏರ್ಪಡಿಸಲಾಗಿದ್ದ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ವಿದ್ಯಾವಂತರು ಸ್ವಯಂ ಉದ್ಯೋಗ ಪ್ರಾರಂಭಿಸಲು ಮುಂದೆ ಬರಬೇಕು. ಕೈಗಾರಿಕಾ ಮತ್ತು ಸೇವಾ ವಿಭಾಗದಲ್ಲಿ ಉದ್ಯಮ ಪ್ರಾರಂಭಿಸಲು ಅನೇಕ ಅವಕಾಶಗಳು ಲಭ್ಯವಿರುತ್ತದೆ. ನಮ್ಮ ದೇಶದಲ್ಲಿ ಯುವಜನರು ಹೆಚ್ಚಿನ ಸಂಖೆಯಲ್ಲಿದ್ದು, ಸಣ್ಣ ಪ್ರಮಾಣದ ಉತ್ಪಾದನಾ ಚಟುವಟಿಕೆ ಮತ್ತು ಸೇವಾ ಚಟುವಟಿಕೆಗಳನ್ನು ಸ್ಥಾಪಿಸಲು ಹೆಚ್ಚಿನ ಅವಕಾಶವಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ರಾಯಚೂರಿನ (ಸಿಡಾಕ್) ವಿಭಾಗದ ಜಂಟಿ ನಿರ್ದೇಶಕ ಜಿ.ಯು. ಹುಡೇದ ಅವರು ಮಾತನಾಡಿ, 10 ದಿನಗಳ ತರಬೇತಿ ಅವಧಿಯಲ್ಲಿ ಸಾಧನಾ ಪ್ರೇರಣಾ ತರಬೇತಿ, ಸ್ವಯಂ ಉದ್ಯಮಗಳ ಸ್ಥಾಪನೆ ಮಾಡುವ ವಿಧಾನ, ಸ್ವಯಂ ಉದ್ಯೋಗಕ್ಕೆ ಇರುವ ಸೌಲಭ್ಯಗಳ ಕುರಿತು ಮಾಹಿತಿ, ಉದ್ದಿಮೆಯನ್ನು ಆಯ್ಕೆ ಮಾಡುವ ವಿಧಾನ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ ಮಾಡುವ ವಿಧಾನ, ಬ್ಯಾಂಕ್ ವ್ಯವಹಾರಗಳು, ಉದ್ಯಮ ಸ್ಥಾಪನೆಗೆ ಇರುವ ಸಾಲ-ಸೌಲಭ್ಯಗಳು ಮತ್ತು ಇತರೆ ಸಂಬಂಧಪಟ್ಟ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಉದ್ಯಮಶೀಲರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಿಡಾಕ್ ಫ್ಯಾಕಲ್ಟಿ ಹಾಗೂ ಕನ್ಸ್‍ಲ್ಟಂಟ್ ಸೈಯದ್ ಆಷ್ಫಾಕ್ ಸ್ವಾಗತಿಸಿದರು. ಕಲಬುರಗಿ ಸಿಡಾಕ್ ತರಬೇತಿದಾರರಾದ ಮಾಧುರಿ ಪ್ರಾರ್ಥಿಸಿದರು. ಸಿಡಾಕ್ ತರಬೇತುದಾರರಾದ ಜಯಶ್ರೀ ಎಸ್. ಪಾಟೀಲ ಕಾರ್ಯಕ್ರಮ ನಿರೂಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here