ಸುರಪುರ: ನಗರದ ಗೋಲ್ಡ್‌ನ್ ಕೇವ್ ಗವಿ ಬುದ್ಧ ವಿಹಾರದಲ್ಲಿ ಮಹಾತ್ಮ ಗೌತಮ್ ಬುದ್ಧರ ಮೂರ್ತಿಯನ್ನು ಧ್ವಂಸಗೊಳಿಸಿದವರನ್ನು ಶೀಘ್ರದಲ್ಲಿ ಬಂಧಿಸಿ ಕಠಿಣ ಕ್ರಮಕೈಗೊಳ್ಳಬೇಕು ಮತ್ತು ಮೂರ್ತಿಗೆ ಸೂಕ್ತ ರಕ್ಷಣೆ ನೀಡಬೇಕು ಇಲ್ಲವಾದಲ್ಲಿ ಇದೇ ೨೮ನೇ ತಾರೀಖು ರಸ್ತೆ ತಡೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಬೊಮ್ಮನಹಳ್ಳಿ,ದೀಪಕ್ ಕುಲರ್ಣಿ,ಶರಣಪ್ಪಗೌಡ,ಮಹ್ಮದ್‌ಸಾಬ್,ಕೃಷ್ಣಾ ಕಕ್ಕೇರಿ,ಶಿವಾಜಿ,ಸುಭಾಸ,ಮಹಿಬೂಬ್,ದುರ್ಗೆಶ,ದೇವಪ್ಪ ,ಕೇಶಣ್ಣ ದೊರೆ ಸೇರಿದಂತೆ ಅನೇಕರಿದ್ದರು.