ಕೂಡು ಒಕ್ಕಲಿಗ ಜಾತಿ ಪಟ್ಟಿಯಲ್ಲಿಸೇರಿಸಬೇಕೆಂದು ಒತ್ತಾಯಿಸಿ ಸಚಿವರಿಗೆ ಮನವಿ

0
227

ಶಹಾಬಾದ: ಕರ್ನಾಟಕ ಸರ್ಕಾರದ ಜಾತಿ ಪಟ್ಟಿಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಒಳಪಟ್ಟಂತ ಕೂಡುಒಕ್ಕಲಿಗ ಜಾತಿಯನ್ನು ಸೇರಿಸಬೇಕೆಂದು ಆಗ್ರಹಿಸಿ ಬುಧವಾರ ಕೂಡು ಒಕ್ಕಲಿಗ ಸಮಾಜದ ವತಿಯಿಂದ ಸಚಿವ ಅಶ್ವಥ ನಾರಾಯಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ೭೫ ವರ್ಷಗಳು ಕಳೆದರೂ ನಮ್ಮ ಸರ್ಕಾರ ಕೂಡು ಒಕ್ಕಲಿಗ ಸಮಾಜವನ್ನು ಕರ್ನಾಟಕ ಸರ್ಕಾರದ ಜಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ.ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗಿದೆ. ಕಾರ್ನಟಕ ಹಿಂದುಳಿದ ವರ್ಗಗಳ ಆಯೋಗ-೨೦೧೩ರಲ್ಲಿ ಆಗಿನ ಅಧ್ಯಕ್ಷ ಎನ್.ಶಂಕ್ರಪ್ಪ  ಅವರ ವರದಿ ಪ್ರಕಾರ ಕೂಡು ಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ-೩ಎ ಗೆ ಸೇರಿಸಬೇಕೆಂದು ಶಿಫಾರಸು ಮಾಡಲಾಗಿತ್ತು. ಆದರೆ ನಮ್ಮ ಸಮಾಜವನ್ನು ಸಂಪೂರ್ಣ ನಿರ್ಲಕ್ಷಯ ಮಾಡಲಾಗಿದೆ. ಕಲಬುರಗಿಯಲ್ಲಿ ಸುಮಾರು ೨ರಿಂದ ೩ ಲಕ್ಷ ಜನರು ವಾಸಿಸುತ್ತಿದ್ದಾರೆ.ಆದ್ದರಿಂದ ಕೂಡುಒಕ್ಕಲಿಗ ಜಾತಿಯನ್ನು ಕರ್ನಾಟಕ ಸರ್ಕಾರದ ಜಾತಿ ಪಟ್ಟಿಯಲ್ಲಿ ಸೇರಿಸಬೇಕೆಂದು ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಾಸಕ ಬಸವರಾಜ ಮತ್ತಿಮಡು, ಕೂಡು ಒಕ್ಕಲಿಗ ಸಮಾಜದ ರಾಜ್ಯ ಉಪಾಧ್ಯಕ್ಷ ಶಿವರಾಜ ಪಾಟೀಲ ಕಲಗುರ್ತಿ, ಜಿಲ್ಲಾಧ್ಯಕ್ಷ ಶಿವಯೋಗೆಪ್ಪ ಚಿತ್ತಾಪೂರ, ಪ್ರಧಾನ ಕಾರ್ಯದರ್ಶಿ ನಾಗಣ್ಣ.ಬಿ.ಪಾಟೀಲ, ಜಿಲ್ಲಾ ಉಪಾಧ್ಯಕ್ಷರಾದ ಮಲ್ಲಣ್ಣಗೌಡ.ಬಿ.ಪಾಟೀಲ, ಕಲ್ಯಾಣರಾವ ಘಾನೂರೆ, ಅಣ್ಣಾರಾವ ಪೊಲೀಸ್ ಪಾಟೀಲ, ಖಜಾಂಚಿ ಚಂದ್ರಕಾಂತ ಪಾಟೀಲ, ಕಾರ್ಯದರ್ಶಿಗಳಾದ ಗುರುನಾಥ ದೇಸಾಯಿ, ನಾಗಪ್ಪ.ಜಿ.ಇಂಗಿನಕಲ್ ಇತರರುಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here