ಸರ್ಕಾರ ರೈತರಿಗೆ ಮೋಸ ಮಾಡಿ ದೇಶದ ಆರ್ಥಿಕತೆ ಹಾಳು ಮಾಡುತ್ತಿದೆ:ಅಫಜಲಪುರಕರ್

0
27

ಚಿತ್ತಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಮೋಸ ಮಾಡುವುದರ ಜೊತೆಗೆ ದೇಶದ ಆರ್ಥಿಕತೆಯನ್ನು ಹಾಳು ಮಾಡುತ್ತಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್ ಪತ್ರಿಕೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಸರ್ಕಾರ ರೈತರಿಗೆ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡುತ್ತಿದೆ.ರೈತರು ಬೆಳೆದ ಉದ್ದು,ಹೆಸರು ಬೆಳೆ ಹೆಚ್ಚು ಮಳೆಯಾಗಿ ಸುಮಾರು 30%ರಿಂದ 40%ರಷ್ಟು ನಾಶವಾಗಿದೆ. ಅಳಿದುಳಿದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಮಾತ್ರ ರೈತರ ಕಡೆಗೆ ಗಮನ ಹರಿಸುತ್ತಿಲ್ಲಾ ಎಂದು ಆರೋಪಿಸಿದ್ದಾರೆ.

Contact Your\'s Advertisement; 9902492681

ಸರ್ಕಾರ ರೈತರ ಬೆಳೆದ ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ ಆದರೆ ಇಲ್ಲಿವರೆಗೂ ಖರೀದಿ ಕೇಂದ್ರಗಳನ್ನು ತೆರೆದಿಲ್ಲ ಇದರಿಂದ ರೈತರು ಬಹಳ ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ಕಡಿಮೆ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ.ರೈತರು ಬೆಳೆಗಳನ್ನು ಮಾರಿಕೊಂಡ ಮೇಲೆ ಸರ್ಕಾರ ಯಾರಿಂದ ಖರೀದಿ ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಇನ್ನು ಮುಂದೆ ಬಹುರಾಷ್ಟ್ರೀಯ ಕಂಪನಿಗಳು ರೈತರ ಮನೆ ಬಾಗಿಲಿಗೆ ಬರುತ್ತವೆ ರೈತರು ತಾವು ಬೆಳೆದ ಬೆಳೆಗೆ ಬೆಲೆ ನಿಗದಿಪಡಿಸಬಹುದು ಎಂದು ಹೇಳಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ.ಎಲ್ಲಿವೆ ನಿಮ್ಮ ಬಹು ರಾಷ್ಟ್ರೀಯ ಕಂಪನಿಗಳು?ಎಲ್ಲಿದೆ ನಿಗದಿತ ಬೆಲೆ ಎಂದು ವ್ಯಂಗ್ಯಮಾಡಿದ್ದಾರೆ.

ಸರ್ಕಾರ ನಿಗದಿ ಪಡಿಸಿದ ಬೆಂಬಲ ಬೆಲೆ ಎಲ್ಲಿ ರೈತರಿಗೆ ಸಿಗುತ್ತಿದೆ.ಖರೀದಿ ಕೇಂದ್ರಗಳನ್ನು ತೆರೆಯಲು ಈಗ ಆದೇಶ ಹೊರಡಿಸಿದೆ ಅದು ಜಾರಿಗೆಯಾಗಿ ನೋಂದಣಿ ಮಾಡಿ,ಖರೀದಿ ಮಾಡಬೇಕಾದರೆ ಕನಿಷ್ಠವೆಂದರು 3 ತಿಂಗಳು ಬೇಕಾಗುತ್ತದೆ ಅಲ್ಲಿವರೆಗೂ ರೈತರ ಗತಿಯೇನು?ಅಲ್ಲದೆ ಒಬ್ಬ ರೈತನಿಂದ ಕನಿಷ್ಠ 3 ಗರಿಷ್ಠ 6 ಕ್ಟಿಂಟಾಲ್ ನಿಯಮ ಮಾಡಿದ್ದಾರೆ.

ಅದಕ್ಕಿಂತ ಹೆಚ್ಚು ಬೆಳೆದ ರೈತರು ಆ ಧಾನ್ಯಗಳನ್ನು ಎಲ್ಲಿ ಮಾರಾಟ ಮಾಡಬೇಕು ಬರಿ ಮಾತಿನಲ್ಲಿ ರೈತರು ದೇಶದ ಬೆನ್ನೇಲಬು ಎಂದು ಹೇಳಿ ರೈತರ ಬೆನ್ನುಮೂಳೆ ಮುರಿಯುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here