ಮಳವಳ್ಳಿ: ಮಳವಳ್ಳಿ ಕ್ಷೇತ್ರದಲ್ಲಿ ಮತ್ತೆ ಶುರುವಾದ ಹಾಲಿ ಮತ್ತು ಮಾಜಿ ಶಾಸಕರ ಶೀತಲ ಸಮರ, ಗುದ್ದಲಿ ಪೂಜೆ ಕಾಮಗಾರಿ ವೇಳೆ ಹಾಲಿ ಶಾಸಕರು ಸೇರಿದಂತೆ ಬೆಂಗಲಿಗರು ಮತ್ತು ಮಾಜಿ ಶಾಸಕರ ಬೆಂಬಲಿಗರ ನಡುವೆ ಮಾತಿನ ಚಕಮಕಿ ವಾಗ್ವಾದ ನಡೆಯಿತು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾಗನೂರು ಗ್ರಾಮದ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ನಿರ್ಮಾಣದ ಶಂಕುಸ್ಥಾಪನೆಗೆ ಬಂದಿದ್ದ ಹಾಲಿ ಶಾಸಕ ಅನ್ನದಾನಿಗೆ ಮಾಜಿ ಶಾಸಕರ ಬೆಂಬಲಿಗರಿಂದ ಪೊಲೀಸರ ಎದುರಲ್ಲೆ ತರಾಟೆ ತೆಗೆದುಕೊಂಡಿರುವ ಘಟನೆ ಸಂಭವಿಸಿತು.
ಈ ಹಿಂದೆ ಸಿದ್ದರಾಮಯ್ಯ ಸಿ ಎಂ ಆಗಿದ್ದಾಗಲೇ ಕಾಮಗಾರಿ ಗುದ್ದಲಿ ಪೂಜೆ ನಡೆಸಿರೋದಾಗಿ ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರ ಆರೋಪಕ್ಕೆ ಸಂಭಂದಿಸಿದಂತೆ, ಮಾಜಿ ಶಾಸಕರ ಬೆಂಬಲಿಗರಿಗೆ ಸಾಕ್ಷಿ ಕೇಳಿದಕ್ಕಾಗಿ ಮಾತಿನ ಚಕಮಕಿಗಿಳಿದ ಶಾಸಕ ಹಾಗೂ ಮಾಜಿ ಶಾಸಕರ ಬೆಂಬಲಿಗರ ಮಧ್ಯೆ ವಾಗ್ವಾದಕ್ಕೆ ಕಾರಣವಾಯಿತು.
ನಿಮ್ ಹತ್ರ ಪೋಟೊ ಇದಿಯಾ ಈ ಗುಂಡಾಗಿರಿಗೆಲ್ಲ ಹೆದರೊಲ್ಲ ಎಂದು ಪೂಜೆ ನೆರೆವೇರಿಸಿ ಶಂಕುಸ್ಥಾಪನೆ ನೆರವೇರಿಸಿ ವಾಪಸ್ಸು ಹೊರಟ ಶಾಸಕ ಅನ್ನದಾನಿ ವಾಪಸ್ ಹೊರಡುವ ವೇಳೆಯಲ್ಲೂ ಹಾಲಿ ಮಾಜಿ ಶಾಸಕರ ಪರ ಬೆಂಬಲಿಗರಿಂದ ಪರ ವಿರುದ್ದ ಘೋಷಣೆ ಕೂಗಿ ಶಾಸಕ ಅನ್ನದಾನಿ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಹಲ್ಲೆ ನಡೆಸಲು ಮುಂದಾಗಿದ್ರು ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು. ಈ ಕುರಿತು ಅನ್ನದಾನಿ ವಿರುದ್ದ ತಮ್ಮ ಪಕ್ಷದ ವರಿಷ್ಠರಿಗೆ ದೂರು ನೀಡಲಾಗುವುದೆಂದು ಕಾರ್ಯಕರ್ತರು ದುರಿದರು.