ದಲಿತ ಅಲ್ಪಸಂಖ್ಯಾತರ ಮೇಲಿನ ಹಲ್ಲೆ ಖಂಡಿಸಿ ಸುರಪುರದಲ್ಲಿ ಬೃಹತ್ ಪ್ರತಿಭಟನೆ

0
518

ಸುರಪುರ: ದೇಶದಲ್ಲಿ ದಲಿತ ಮತ್ತು ಅಲ್ಪಸಂಖ್ಯಾತ ಹಾಗು ಹಿಂದುಳಿದ ವರ್ಗಗಳ ಮೇಲೆ ನಿರಂತರ ಹಲ್ಲೆಗಳು ಹಾಗು ಮಹಿಳೆಯರ ಮೇಲಿನ ಅತ್ಯಾಚಾರವನ್ನು ಖಂಡಿಸಿ ಶುಕ್ರವಾರ ನಗರದಲ್ಲಿ ಸಾಮೂಹಿಕ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿ ಕೃತ್ಯಗಳನ್ನು ಖಂಡಿಸಲಾಯಿತು.

ನಗರದ ಸುರಪುರ,ರಂಗಂಪೇಟೆ,ತಿಮ್ಮಾಪುರ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯ ಜನ ಡಾ: ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ಜಮಾವಣೆಗೊಂಡು ನಂತರ ದರಬಾರ ರಸ್ತೆ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿ ಸರಕಾರ ಮತ್ತು ಸಂಘ ಪರಿವಾರದ ವಿರುಧ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ,ಕೇಂದ್ರ ಸರಕಾರ ಮತ್ತು ಪ್ರಧಾನ ಮಂತ್ರಿಗಳು ಸಬ್‌ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುತ್ತಾರೆ ಆದರೆ ದೇಶದಲ್ಲಿನ ದಲಿತರು ಮತ್ತು ಅಲ್ಪಸಂಖ್ಯಾತರು,ಹಿಂದುಳಿದವರ ಮೇಲೆ ಹಲ್ಲೆ,ಕೊಲೆಗಳು ನಡೆದರು ಸುಮ್ಮನಿರುವ ಮೂಲಕ ದಮನಕಾರಿ ನೀತಿ ಅನುಸರಿಸುತ್ತಿದ್ದಾರೆ.ತಬ್ರೇಜ್ ಅನ್ನುವ ಯುವಕ ಜೈ ಶ್ರೀರಾಮ್ ಎನ್ನಲಿಲ್ಲವೆಂದು ಕಟ್ಟಿಹಾಕಿ ಥಳಿಸಲಾಗುತ್ತಿದೆ. ಅಲ್ಪಸಂಖ್ಯಾತರ ಮೇಲೆ ಸುಳ್ಳು ಆರೋಪಗಳ ಹೊರಿಸಿ ಅವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ.ಇದಕ್ಕೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.

ರಾಯಚೂರು,ವಿಜಯಪುರ,ಬೀದರ ಈಗ ಪುತ್ತೂರಿನಲ್ಲಿ ಯುವತಿಯ ಮೇಲೆ ಗ್ಯಾಂಗ್ ರೇಪ್ ಮಾಡಲಾಗಿದೆ.ಇದಕ್ಕೆ ಸಂಘ ಪರಿವಾರ ಮತ್ತು ಇತರೆ ಸಂಘಟನೆಗಳ ಯಾಕೆ ಮೌನವಹಿಸಿವೆ,ಕೇಂದ್ರ ಸರಕಾರ ಇಂತಹ ನೀಚ ಕೃತ್ಯಗಳನ್ನು ಯಾಕೆ ತಡೆಯುವದಿಲ್ಲ ಎಂದರು.ಚಾಮರಾಜನಗರ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಲಾಗುತ್ತಿದೆ.ಇದಕ್ಕೆ ಯಾರ ಕುಮ್ಮಕ್ಕಿದೆ,ಇಂತಹ ಹೀನ ಕೃತ್ಯ ನಡೆಸಲು ಇವರಿಗೇನು ಅಧಿಕಾರವಿದೆ ಎಂದು ಆಕ್ರೋಸ ಹೊರಹಾಕಿದರು.

ಇಂದು ಕೇಂದ್ರದಲ್ಲಿ ಸಂಪೂರ್ಣ ಬಹುಮತವಿದೆ ಎಂದು ಸಂವಿಧಾನವನ್ನೆ ಬದಲಾಯಿಸುವ ಮಾತನಾಡುತ್ತಿದ್ದಾರೆ. ಆದರೆ ಇದಕ್ಕೆ ಅವಕಾಶ ನೀಡುವುದಿಲ್ಲ,ಬಾಬಾ ಸಾಹೇಬರು ಬರೆದ ಸಂವಿಧಾನ ಎಲ್ಲರಿಗೂ ನ್ಯಾಯ ಒದಗಿಸುತ್ತಿದೆ. ಆದರೆ ದೇಶದಲ್ಲಿ ಮನುವಾದ ಜಾರಿಗೊಳಿಸಬೇಕೆಂಬ ಇವರ ಹುನ್ನಾರಕ್ಕೆ ಅವಕಾಶ ಕೊಡುವುದಿಲ್ಲ ಎಂದರು.

ಎಕ್ಬಾಲ್ ಒಂಟಿ , ದೇವಿಂದ್ರಪ್ಪ ಪತ್ತಾರ,ಇಕ್ಬಾಲ್ ರಾಹಿ,ಯಲ್ಲಪ್ಪ ಚಿನ್ನಾಕಾರ,ರಾಹುಲ್ ಹುಲಿಮನಿ,ವೆಂಕಟೇಶ ಭಕ್ರಿ,ಭೀಮರಾಯ ಸಿಂಧಗೇರಿ,ದಾವುದ್ ಪಠಾಣ್ ಸೇರಿದಂತೆ ಅನೇಕರು ಮಾತನಾಡಿದರು.ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಮೂಲಕ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಅಬ್ದುಲ್ ಗಫೂರ ನಗನೂರಿ,ಖಲೀಲ ಅಹ್ಮದ ಅರಕೇರಿ,ಮಾಳಪ್ಪ ಕಿರದಹಳ್ಳಿ,ರಮೇಶ ಅರಕೇರಿ,ಮಲ್ಲು ಕೆಸಿಪಿ, ಜೆಟ್ಟೆಪ್ಪ ನಾಗರಾಳ, ರಮೇಶ ಬಡಿಗೇರ,ಖಾಜಾ ಅಜ್ಮೀರ್,ತಿಪ್ಪಣ್ಣ ಶೆಳ್ಳಿಗಿ,ರಾಜು ಕಟ್ಟಿಮನಿ, ಮೌಲಾ ಸೌದಾಗರ್, ಖಾಲೀದ್ ಸಾಬ್ ಅರಕೇರಿ,ಖಮರ್ ಸಾಬ್,ಜಹೀರ್ ಸಾಬ್,ಖಾಜಾ ಅಜ್ಮೀರ್,ಎಂ.ಪಟೇಲ್,ಅಬೀದ್ ಹುಸೇನ, ಆಫ್ರೀದಿ ರಂಗಂಪೇಟೆ ಸೇರಿದಂತೆ ಅನೇಕರಿದ್ದರು.ಪಿಐ ಆನಂದರಾವ್ ನೇತೃತ್ವದಲ್ಲಿ ಪಿಎಸ್‌ಐ ಸೋಮಲಿಂಗ್ ಒಡೆಯರ್ ಹಾಗು ಮತ್ತವರ ಸಿಬ್ಬಂದಿಗಳು ಶಾಂತಿಯುತ ಪ್ರತಿಭಟನೆ ನಡೆಯುವಂತೆ ಸೂಕ್ತ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here