ಬುದ್ಧ ವಿಹಾರದ ಬಳಿ ನಿರ್ಮಿಸುತ್ತಿರುವ ನೀರಿನ ಟ್ಯಾಂಕ್ ಕಾಮಗಾರಿ ಕಳಪೆ: ನಾಗಣ್ಣ ಕೆ.

0
25

ಸುರಪುರ: ನಗರದ ವಾರ್ಡ್ ಸಂಖ್ಯೆ ೧೦ರ ಬುದ್ಧ ವಿಹಾರದ ಬಳಿಯಲ್ಲಿ ನಿರ್ಮಿಸುತ್ತಿರುವ ಕುಡಿಯುವ ನೀರು ಸರಬರಾಜಿನ ಟ್ಯಾಂಕ್ ಕಾಮಗಾರಿ ಕಳಪೆಯಾಗಿದ್ದು ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಡಿಎಸ್‌ಎಸ್ ಭೀಮ ಘರ್ಜನೆ ಸಂಘಟನೆ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ಯಾದಗಿರಿಯ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಸಂಘಟನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ವಾರ್ಡ್ ಸಂಖ್ಯೆ ೧೦ರ ಬುದ್ಧ ವಿಹಾರದ ಬಳಿಯಲ್ಲಿ ಸುಮಾರು ೩ ಕೋಟಿ ರೂಪಾಯಿಗಳಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡುತ್ತಿದ್ದು,ಕಟ್ಟಡಕ್ಕೆ ಸರಿಯಾಗಿ ನೀರು ಹೊಡೆಯದಿರುವುದರಿಂದ ಕಾಮಗಾರಿ ಕಳಪೆಯಾಗಿದೆ,ಇದರ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.

Contact Your\'s Advertisement; 9902492681

ಆದ್ದರಿಂದ ಇಂದು ಪ್ರತಿಭಟನೆಯ ಮೂಲಕ ಕೂಡಲೇ ಕಾಮಗಾಗೆ ಸಂಬಂಧಿಸಿದ ಎಇಇ ಮತ್ತು ಜೆಇ ಅವರನ್ನು ಅಮಾನತ್ತುಗೊಳಿಸಬೇಕು ಮತ್ತು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿದರು.ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಾಲಯದ ಅಧಿಕಾರಿಗಳ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಮರೆಪ್ಪ ಕನ್ನೆಕೊಳ್ಳೂರ, ಸುರಪುರ ತಾಲೂಕು ಸಂಚಾಲಕ ಶಿವಶಂಕರ ಕಟ್ಟಿಮನಿ,ದೊಡ್ಡಪ್ಪ ಪೂಜಾರಿ ಹುಂಡೆಕಲ್,ಸದ್ದಾಂ ಹುಸೇನ್,ಮಲ್ಲಿಕಾರ್ಜುನ ತಳವಾರಗೇರಾ,ಮಲ್ಲಿಕಾರ್ಜುನ ಜಾಲಿಬೆಂಚಿ,ಶಹಾಪುರ ತಾಲೂಕು ಸಂಚಾಲಕ ಜಯರಡ್ಡಿ ಹೊಸ್ಮನಿ,ದೇವು ಎಂಟಮನಿ,ಶರಣಪ್ಪ ತೆಗ್ಗಳ್ಳಿ,ರೇವಣಸಿದ್ದ ಬಲಶೆಟ್ಟಿಹಾಳ,ಹಣಮಂತ ಕಸನ್,ದೇವೆಂದ್ರ ದಿಗ್ಗಿ,ಮಾಳಪ್ಪ ಸಲಾದಪುರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here