ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಭಗವಂತ ಖುಭಾಗೆ ಒತ್ತಾಯ

0
41

ಕಲಬುರಗಿ :ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಇಂದು  ಕೇಂದ್ರ ರಸಗೊಬ್ಬಾ ಮತ್ತು ರಾಸಾಯನಿಕ ಸಚಿವರಾದ ಭಗವಂತ ಖೂಬಾರವರಿಗೆ ಭೇಟಿಯಾಗಿ ಅತ್ಯಂತ ಹಿಂದುಳಿದ ಸಂವಿಧಾನದ ೩೭೧ನೇ(ಜೆ) ಕಲಂ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಕೇಂದ್ರ ಸರಕಾರದಿಂದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿ ನೆನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಸುಮಾರು ೪೪ ವರ್ಷಗಳ ಪೂರ್ವದಲ್ಲಿ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರ, ಕಲಬುರಗಿಯಲ್ಲಿ ಮಾಜಿ ಕೇಂದ್ರದ ಗೃಹ ಸಚಿವರಾದ ಲಾಲಕೃಷ್ಣ ಅಡ್ವಾಣಿಯವರ ಹಸ್ತದಿಂದ ಉದ್ಘಾಟನೆಯಾಗಿರುವ ಕಲಬುರಗಿ ದೂರದರ್ಶನ ಕೇಂದ್ರಯಾವ್ದೇ ಕಾರಣಕ್ಕೂ ಸ್ಥಳಾಂತರವಾಗಬಾರದು. ಅದರಂತೆ ಈ ಕೇಂದ್ರ ಯಾವುದೇ ಕಾರಣಕ್ಕೂ ಮುಚ್ಚಬಾರದು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು, ಸುಮಾರು ೩೭ ವರ್ಷಗಳ ಹಿಂದೆ ಸರೀನ್‌ಕಮಿಟಿ ವರದಿಯ ಶಿಫಾರಸ್ಸಿನಂತೆ ಎಂದೋ ಕಲಬುರಗಿರೈಲ್ವೆ ವಿಭಾಗಿಯಕಚೇರಿ ಅಸ್ತಿತ್ವಕ್ಕೆ ಬರಬೇಕಾಗಿತ್ತು. ರಾಜಕಿಯ ಇಚ್ಛಾಶಕ್ತಿ ಇಲ್ಲದಕಾರಣಇದು ನೆನೆಗುದಿಗೆ ಬಿದ್ದಿದೆ. ಕಲಬುರಗಿರೈಲ್ವೆ ವಿಭಾಗೀಯಕೇಂದ್ರ ಕಾಲಮಿತಿಯಲ್ಲಿ ಸ್ಥಾಪನೆಗೆ ವಿಶೇಷ ಮುತುವರ್ಜಿ ವಹಿಸಿ ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸಿ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ್ದರು.

Contact Your\'s Advertisement; 9902492681

ಕೇಂದ್ರ ಸರಕಾರದಿಂದರಾಜ್ಯಕ್ಕೆ ಮಂಜೂರಾಗಿರುವಏಮ್ಸ್‌ಕಲ್ಯಾಣಕರ್ನಾಟಕ ಪ್ರದೇಶದಲ್ಲಿ ಸ್ಥಾಪನೆಗೆ ವಿಶೇಷ ಬದ್ಧತೆ ಪ್ರದರ್ಶಿಸಲು ಕಲ್ಯಾಣಕರ್ನಾಟಕಜನಮಾನಸದಿಂದಆಗ್ರಹಿಸಲಾಗುತ್ತದೆ. ಕಲಬುರಗಿ, ಬೀದರ ಜಿಲ್ಲೆಗಳಿಗೆ ಮಂಜೂರಾಗಿರುವ ನೀಮ್ಝ್ ಅಸ್ತಿತ್ವಕ್ಕೆ ತಂದು ಈ ಭಾಗದಲ್ಲಿಉದ್ಯೋಗ ಸೃಷ್ಟಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರಕಾರದಿಂದ ಹಿಂದುಳಿದ ಕಲ್ಯಾಣಕರ್ನಾಟಕ ಪ್ರದೇಶಕ್ಕೆ ವಿಶೆಷ ಪ್ಯಾಕೇಜ ಹಣ ಮಂಜೂರು ಮಾಡಿಸಲು ಇಚ್ಛಾಶಕ್ತಿ ವ್ಯಕ್ತಪಡಿಸಿ ಮುತುವರ್ಜಿ ವಹಿಸಬೇಕು. ಕಲ್ಯಾಣಕರ್ನಾಟಕ ಪ್ರದೇಶದರೈಲ್ವೆ ಮಾರ್ಗಗಳ ಅಭಿವೃದ್ಧಿಯ ಬಗ್ಗೆ ಮತ್ತುರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯ ಬಗ್ಗೆ ಹಾಗೂ ರಾಜಧಾನಿ ಬೆಂಗಳೂರಿಗೆ ಕಲ್ಯಾಣಕರ್ನಾಟಕದ ಜಿಲ್ಲಾ ಕೇಂದ್ರಗಳ ಮುಖಾಂತರ ವಿಶೇಷ ರೈಲುಗಳ ಸಂಚಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

೩೭೧ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪನೆಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಬೇಕು. ಅದರಂತೆ ವಿಶೇಷ ಸ್ಥಾನಮಾನದ ನಿಯಮಾವಳಿಯಲ್ಲಿರುವ ದೋಷಗಳನ್ನು ಪರಿಷ್ಕರಣೆ ಮಾಡಿ ಈ ಭಾಗದಜನರಿಗೆ ವಿಶೇಷ ಸ್ಥಾನಮಾನದ ಸವಲತ್ತುಗಳು ನ್ಯಾಯಬದ್ಧವಾಗಿ ಸಿಗುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಮೇಲೆ ಒತ್ತಡ ತರಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿಶಾಸಕರಾದ ಶಶೀಲ ಜಿ. ನಮೋಶಿ, ಶಾಮರಾವ ಪ್ಯಾಟಿ ಸೇರಿದಂತೆ ಸಮಿತಿಯ ಮುಖಂಡರುಗಳಾದ, ಸಿದ್ಧಾರೆಡ್ಡಿ ಬಲಕಲ್, ಲಿಂಗರಾಜ ಸಿರಗಾಪೂರ, ಡಾ. ಎ.ಎಸ್. ಭದ್ರಶೆಟ್ಟಿ, ಜ್ಞಾನಮಿತ್ರ ಸ್ಯಾಮ್ಯೂವೆಲ್, ಸಾಲೋಮನ ದಿವಾಕರ, ಅಬ್ದುಲ ರಹೀಮ್, ಭೀಮರಾಯ ಕನ್ನಳ್ಳಿ, ಮಲ್ಲಿನಾಥ ಸಂಗಶೆಟ್ಟಿ, ರಾಜುಜೈನ್, ಬಾಬಾ ಫಕ್ರೋದ್ಧೀನ, ಸಾಬೀರ ಅಲಿ, ಅಮೀತಕುಮಾರ, ಪರಮೇಶ್ವರ, ಶ್ರೀಮತಿ ಜಗದೇವಿ ಹೆಗಡೆ, ಶ್ರೀಮತಿ ಗುರುಬಾಯಿ ಸೇರಿದಂತೆಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

advertisement
advertisement

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here