ಹಕ್ಕು ಪತ್ರ ನೀಡದಿದ್ದರೇ ನಗರಸಭೆಯ ಕಛೇರಿ ಎದುರುಗಡೆ ಪ್ರತಿಭಟನೆ ಎಚ್ಚರಿಕೆ

0
67

ಶಹಾಬಾದ: ರಾಮಘಡ್ ಆಶ್ರಯ ಕಾಲೋನಿಯಲ್ಲಿ ಎಸ್.ಯು.ಸಿ.ಐ (ಸಿ) ಪಕ್ಷದಿಂದ ಸೋಮವಾರ ಜನ ಸಭೆ ನಡೆಸಿ, ಆಶ್ರಯ ಕಾಲೋನಿಯ ನಿವಾಸಿಗಳಿಗೆ ತಕ್ಷಣವೇ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿ ಮುಂದಿನ ವಾರ ನಗರಸಭೆಯ ಕಛೇರಿ ಎದುರುಗಡೆ ಪ್ರತಿಭಟನೆಯ ನಿರ್ಣಯ ತೆಗೆದುಕೊಳ್ಳಲಾಯಿತು.

ಈಗಾಗಲೇ ಶಾಸಕರ ಆಶ್ವಾಸನೆಯಂತೆ ಆಶ್ರಯ ಕಾಲೋನಿ ರಾಮಘಡ್ ಜನತೆ ತಮ್ಮ ನಿವಾಸದ ಹಕ್ಕುಪತ್ರದ ಸಲುವಾಗಿ ಜಾತಕ ಪಕ್ಷಿಯಂತೆ ಕಾದು ಕುಳಿತ್ತಿದ್ದಾರೆ. ಮಾನ್ಯ ಶಾಸಕರು ಸ್ವತ: ರಾಮಘಡ್‌ಗೆ ಆಗಮಿಸಿ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಈ ಪ್ರಕ್ರಿಯೆಯನ್ನು ಮಂಜೂರು ಮಾಡಿಸಿ ಬಂದಿದ್ದೇನೆ ಎಂದು ಹೇಳಿ ಸುಮಾರು ಎರಡು ವರ್ಷಗಳು ಕಳೆದು ಹೋದವು. ಆದರೆ ಇಲ್ಲಿಯವರೆಗೂ ರಾಮಘಡ್‌ದ ನಿವಾಸಿಗಳಿಗೆ ಹಕ್ಕುಪತ್ರ ದೊರಕಿಲ್ಲ. ಸುಮಾರು ಸಲ ನಗರ ಸಭೆಗೆ ಭೇಟಿ ನೀಡಿ ವಿಚಾರಿಸಿದರೂ ಕೇವಲ ಇನ್ನೂ ಆನ್ ಲೈನ್ ನಲ್ಲಿ ಹಾಕುವ ಪ್ರಕಿಯೆ ನಡೆಯುತ್ತಿದೆ ಎಂದು ಉತ್ತರಿಸಲಾಗುತ್ತಿದೆ. ಈ ರೀತಿಯ ಉತ್ತರದಿಂದ ಜನ ರೋಸಿಹೋಗಿದ್ದಾರೆ. ತಮ್ಮ ಹಕ್ಕಿಗೋಸ್ಕರ ಸೆಪ್ಟೆಂಬರ್ ೭ರಂದು ನಗರ ಸಭೆ ವಿರುದ್ಧ ಪ್ರತಿಭಟಣೆ ಮಾಡುವುದಾಗಿ ಪ್ರತಿಭಟನೆ ಮಾಡುವುದಾಗಿ ನಿರ್ಣಯ ತೆಗೆದುಕೊಂಡರು.

Contact Your\'s Advertisement; 9902492681

ಅಲ್ಲದೆ ರಾಮಗಡನಲ್ಲಿ ಅಭಿವೃದ್ದಿಯ ಕೆಲಸಗಳು ಬಹಳ ಆಮೆಗತಿಯಲ್ಲಿ ಸಾಗುತ್ತಿವೆ.ಅಲ್ಲದೇ ಕೈಗೊಂಡ ಕಾಮಗಾರಿ ಕಳಪೆ ಮಟ್ಟದಾಗಿವೆ. ರಸ್ತೆಯ ಕೆಲಸ ಪೂರ್ಣಗೊಳಿಲ್ಲ. ಅಲ್ಲದೆ ಚರಂಡಿಯು ನಿರ್ಮಾಣ ಮಾಡಿದ್ದಾರೆ ಆದರೆ ಚರಂಡಿಯ ನೀರು ಯಾವ ದಿಕ್ಕಿನಲ್ಲಿ ಹರಿಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಈ ರೀತಿಯ ಕಳಪೆ ಕಾಮಗಾರಿಯನ್ನು ಮಾಡುತ್ತಿದ್ದಾರೆ. ಟಾಕಿ ಕೂಡಿಸಲು ಗುಂಡಿಯನ್ನು ತೋಡಿ ಹಾಗೇಯೇ ಬಿಟ್ಟಿದ್ದಾರೆ. ತೆರೆದ ಗುಂಡಿ ಎಷ್ಟು ಅಪಾಯಕಾರಿಯಿದೆ ಎಂದು ಹೇಳಬೇಕಾಗಿಲ್ಲ.

ಈ ರೀತಿಯ ಕೆಲಸಗಳು ನಗರಸಭೆಯಿಂದ ನಡೆಯುತ್ತಿದೆ. ಇದನ್ನು ಆದಷ್ಟು ಬೇಗ ಸರಿಪಡಿಸಬೇಕು. ಸೂಕ್ತ ರೀತಿಯಲ್ಲಿ ಆಶ್ರಯ ಕಾಲೋನಿಗೆ ಸೌಕರ್ಯಗಳನ್ನು ಒದಗಿಸಬೇಕೆಂದು ಎಸ್.ಯು.ಸಿ.ಐ (ಸಿ) ಪಕ್ಷದ ಸ್ಥಳೀಯ ಕಾರ್ಯದರ್ಶಿ ಗಣಪತ್‌ರಾವ.ಕೆ. ಮಾನೆ, ರಾಘವೇಂದ್ರ.ಎಂ.ಜಿ. ಸಿದ್ದು ಚೌಧರಿ, ಆಗ್ರಹಿಸಿದರು.

ಸಭೆಯಲ್ಲಿ ರಮೇಶ ಡಿ. ಶ್ರೀನಿವಾಸ, ನಾಗಪ್ಪ ಖಣದಾಳ, ಹುಲಗಮ್ಮ, ಸೇರಿದಂತೆ ಹಲವಾರು ನಾಗರಿಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here