ಶಹಾಬಾದ: ಜನರಿಗೆ ಸಂವಿಧಾನ ದತ್ತವಾಗಿರುವ ಮೂಲಭೂತ ಹಕ್ಕುಗಳ ಬಗ್ಗೆಯ? ಅಲ್ಲದೇ ಮೂಲಭೂತ ಕರ್ತವ್ಯ ಪಾಲನೆಯ ಅರಿವೂ ಇರಬೇಕು ಎಂದು ನಗರದ ನ್ಯಾಯಾಲಯದ ನ್ಯಾಯಾಧೀಶರಾದ ಮಲ್ಲೇಶಿ ಪರಶುರಾಮ ಮೋಹಿತೆ ಹೇಳಿದರು.
ಅವರು ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ಚಿತ್ತಾಪೂರ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅನೇಕ ಸಂದರ್ಭಗಳಲ್ಲಿ ನಾವುಗಳು ಮೂಲಭೂತ ಹಕ್ಕುಗಳ ಬಗೆಗ? ಮಾತನಾಡುತ್ತೇವೆ. ಆದರೆ ಮೂಲಭೂತ ಕರ್ತವ್ಯಗಳು ಸರಿಯಾಗಿ ಪಾಲನೆಯಾದಲ್ಲಿ ಮಾತ್ರ ಸಂವಿಧಾನದ ರಕ್ಷಣೆ ಮತ್ತು ದೇಶದ ಸೌರ್ವಭೌಮತ್ವ ಕಾಪಾಡಲು ಸಾಧ್ಯ ಎಂದರು.
ದೇಶದ ಐಕ್ಯತೆ, ಸಮಗ್ರತೆ ಮತ್ತು ಅಭಿವೃದ್ಧಿ ಸಾಧಿಸಬೇಕಾದಲ್ಲಿ ಮೂಲಭೂತ ಹಕ್ಕುಗಳ ರಕ್ಷಣೆ ಮತ್ತು ಕರ್ತವ್ಯಗಳ ಪಾಲನೆಯಲ್ಲಿ ಸಮತೋಲನ ಸಾಧಿಸಬೇಕೆಂದರು. ಇಲ್ಲದೇ ಹೋದಲ್ಲಿ ಕೇವಲ ಹಕ್ಕುಗಳ ರಕ್ಷಣೆ ಬಗ್ಗೆ ಮಾತನಾಡಿ ಕರ್ತವ್ಯಗಳ ಜವಾಬ್ದಾರಿಯನ್ನು ಮರೆತರೆ ಅರಾಜಕತೆ ಸಮಾಜವನ್ನು ನಿರ್ಮಾಣ ಮಾಡಿದಂತಾಗುತ್ತದೆ.ಆದ್ದರಿಂದ ಸಾರ್ವಜನಿಕರಿಗೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳ ಅರಿವು ಅಗತ್ಯ ಎಂದು ಹೇಳಿದರು.
ಸರಕಾರಿ ಸಹಾಯಕ ಅಭಿಯೋಜಕರಾದ ಸುನೀತಾ ಮರತೂರ ವೇದಿಕೆಯ ಮೇಲಿದ್ದರು. ನ್ಯಾಂiiವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಶಿಂಧೆ ಅಧ್ಯಕ್ಷತೆ ವಹಿಸಿದ್ದರು. ಸಂತ್ರಸ್ತರ ಪರಿಹಾರ ಯೋಜನೆಗಳ ಕುರಿತು ನ್ಯಾಯವಾದಿಗಳಾದ ರಘುವೀರಸಿಂಗ ಠಾಕೂರ ಹಾಗೂ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ನ್ಯಾಯವಾದಿಗಳಾದ ಡಿ.ಸಿ ಕುಲಕುಂದಿಕರ ಉಪನ್ಯಾಸ ನೀಡಿದರು.
ರಮೇಶ ರಾಠೋಡ, ಉಮೇಶ ಪೊಚ್ಚಟ್ಟಿ, ನಾಗೇಶ ಧನ್ನೇಕರ್, ಜ್ಯೋತಿ ಚೋಗಲೆ, ಸೇರಿದಂತೆ ಅನೇಕ ವಕೀಲರು ಹಾಜರಿದ್ದರು.