ಕಲಬುರಗಿ: ತಾಲೂಕಿನ ಫಿರೋಜಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ನಾಗಪ್ಪ ಧೂಳಬಾ ರವರ ವಯೋನಿವೃತ್ತಿ ಹಿನ್ನಲೆಯಲ್ಲಿ ಶಾಲೆಯಲ್ಲಿ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಸಮನ್ವಯಾಧಿಕಾರಿ ಡಾ. ಪ್ರಕಾಶ್ ರಾಠೋಡ ಮಾತನಾಡಿ, ಮಕ್ಕಳ ಸವಾರ್ಂಗೀಣ ಅಭಿವೃದ್ಧಿಯೇ ಶಿಕ್ಷಕರ ಪರಮ ಗುರಿಯಾಗಿರಬೇಕು ಅಂದಾಗ ಮಾತ್ರ ಶಿಕ್ಷಕರ ನಿವೃತ್ತಿಯ ನಂತರ ಜನಮನ್ನಣೆ ಸಿಗಲಿದೆ ಎಂದರು.
ಸ್ಥಳೀಯ ಗ್ರಾಪಂ ಪಿಡಿಓ ಸುರೇಖಾ ಡಿ. ಹೊಸೂರ್, ಉಪಾಧ್ಯಕ್ಷ ಅಬ್ದುಲ್ ಲತಿಫ್ ಜಹಾಗಿರದಾರ್, ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಬು ಮೋರೆ, ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಈಶ್ವರಗೌಡ ಪಾಟೀಲ್ , ತಾಲೂಕು ಪ್ರಧಾನ ಕಾರ್ಯದರ್ಶಿ ನವನಾಥ ಎಸ್ ಶಿಂಧೆ, ಶಿಕ್ಷಣ ಸಂಯೋಜಕ ಶರಣು ಸಾಳೆ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜಗದೀಶ್ ಎಚ್. ಬಿ, ಅರುಣ್ ಕುಮಾರ್ ಡಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಂಗೀತಾ ಎಸ್ ಕಲಶೆಟ್ಟಿ, ನಾಮನಿರ್ದೇಶಿತ ಸಹ ಕಾರ್ಯದರ್ಶಿ ಬಸವರಾಜ ಹಂಪಿ, ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಮಹಾಮಂಡಳಿ ನಿರ್ದೇಶಕ ಮಲ್ಲಿಕಾರ್ಜುನ ಧೂಳಬಾ, ಎಸ್‍ಡಿಎಂಸಿ ಅಧ್ಯಕ್ಷ ಬಾಬು ಪವಾಡಿ, ನಾಗಣ್ಣ ನೇಲೊಗಿ, ಅಲ್ಲಾವುದ್ದಿನ್, ಸೋಪಿಯಾ ಬೇಗಂ, ವಿಮಲಾ ಭಜಂತ್ರಿ, ಶಕುಂತಲಾ, ಪ್ರಮುಖರಾದ ಕಲ್ಲಪ್ಪ ಪ್ಯಾಟಿ, ಯುವ ಮುಖಂಡ ಹಣಮಂತ ಧೂಳಬಾ, ಶರಣು ನಾಯಕೋಡಿ, ಸಾಯಬಣ್ಣ ಭರ್ಮಾ ಮತ್ತಿತರರಿದ್ದರು. ಇದೇ ವೇಳೆಗೆ ಸಿಆರ್‍ಪಿ ಅವರು ಗಣಿತ ಲ್ಯಾಬ್ ಗಾಗಿ 5 ಸಾವಿರ ಡಿಡಿ ದೇಣಿಗೆಯಾಗಿ ನೀಡಿದರು. ಶಿಕ್ಷಕಿ ದೀಪಾ ಪಾಟೀಲ್ ನಿರೂಪಿಸಿದರು. ಈಶ್ವರ್ ಗೌಡ ಪಾಟೀಲ, ಸ್ವಾಗತಿಸಿ, ವಂದಿಸಿದರು.