ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಮತದಾನ ಎಣಿಕೆ ಕಾರ್ಯಾ ಮುಕ್ತಾಯಗೊಂಡಿದ್ದು, ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಪರವಾಗಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ವಿಜಯೋತ್ಸವ ಆಚರಣೆಗೆ ಮುಂದಾಗಿದ್ದ ಅಭ್ಯರ್ಥಿಗಳ ಬೆಂಬಲಿಗರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಪಾಲಿಕೆ ಚುನಾವಣೆಯ ಮತ ಎಣಿಕೆ ಕಾರ್ಯ ಬಿ.ಕೆ ಮಾಡೆಲ್ ಸ್ಕೂಲ್ನಲ್ಲಿ ಭರದಿಂದ ಸಾಗಿತ್ತು. ಈ ವೇಳೆ ತಮ್ಮ ಪಕ್ಷ ಅಭ್ಯರ್ಥಿ ಮುನ್ನಡೆ ಪಡೆಯುತ್ತಿದಂತೆ ಕಾರ್ಯಕರ್ತರು ವಿಜಯೋತ್ಸವ ಆಚರಣೆಗೆ ಮುಂದಾಗಿದ್ದು, ಈ ವೇಳೆ ಪೊಲೀಸರು ಜನರನ್ನು ಚದುರಿಸಲು ಲಾಠಿಚಾರ್ಜ್ ಮಾಡಿದ್ದಾರೆ.
ಕೊರೊನಾ ಕಾರಣದಿಂದ ಫಲಿತಾಂಶದ ಬಳಿಕ ವಿಜಯೋತ್ಸವ ಆಚರಣೆ ಮಾಡುವುದು, ಗೆದ್ದ ಅಭ್ಯರ್ಥಿಗಳನ್ನು ಮೆರವಣಿಗೆ ಮಾಡುವುದು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ಜನ ಸೇರಿವುದನ್ನು ನಿಷೇಧ ಮಾಡಿ ಸೂಚನೆ ನೀಡಲಾಗಿತ್ತು.
ಈ ನಡುವೆಯೂ ಭಾರೀ ಸಂಖ್ಯೆಯಲ್ಲಿ ಸೇರಿದ್ದ ವಿವಿಧ ಕಾರ್ಯಕರ್ತರು ಬಣ್ಣ ಎರಚಿಕೊಂಡು ಸಂಭ್ರಮಾಚರಣೆ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದಿತ್ತು.
ವರದಿ ಸುನೀಲ್ ರಾಣಿವಾಲ್