ಕಲಬುರಗಿ: ಕೋಟನೂರ (ಡಿ)ನಲ್ಲಿ ಬರುವ ಕೃಪಾಲಯ ಸೇವಾ ಸಂಗಮ ಸಂಸ್ಥೆಯಲ್ಲಿ ಸ್ಲಂ-ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ಕಲ್ಯಾಣ ಕರ್ನಾಟಕ ವಿಭಾಗದ ರಾಷ್ಟ್ರ ಮತ್ತು ಸರ್ಕಾರಗಳ ಬಡಜನ ವಿರೋಧಿ ನೀತಿಗಳು ಹಾಗೂ ಇತ್ತೀಚಿನ ಕಾಯ್ದೆ ಮತ್ತು ಯೋಜನೆಗಳ ಕುರಿತು ೨ ದಿನಗಳ ಕಾರ್ಯಗಾರಕ್ಕೆ ವಿ.ಜಿ.ಮಹಿಳಾ ಕಾಲೇಜು ಜನವಾದಿ ಮಹಿಳಾ ಸಂಘಟನೆಯ ಮೀನಾಕ್ಷಿ ಬಾಳಿ ಅವರು ಉದ್ಘಾಟಿಸಿದರು.
ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಸೇವಾ ಸಂಗಮ ನಿರ್ದೆಶಕ ಫಾದರ್ ವಿಕ್ಟರ್‌ವಾಸ್, ಯುವ ಚಿಂತಕರ ಡಾ.ಅನೀಲ ಟೆಂಗಳಿ, ಬಹುಜನ ಚಳುವಳಿ ಚಿಂತಕ ಎಂ.ಆರ್.ಬೇರಿ, ವಿಭಾಗೀಯ ಸಂಚಾಲಕ ಜನಾರ್ಧನ ಅಳ್ಳಿಬೆಂಚಿ, ಹಣಮಂತ ಶಹಾಪೂರಕರ್, ಶೇಖರ ಬಾಬು, ಸುನೀತಾ ಎಂ,ಕೊಲ್ಲೂರ, ರೇಣುಕಾ ಸರಡಗಿ, ಮೋನೇಶ್ವರ ವಾಯ್ ಕೆ ಕಾರವಾರ ಇದ್ದರು.