ಗ್ರಾಪಂ ನೌಕರರ ಮುಷ್ಕರ ೧೫ರಿಂದ

0
143

ಶಹಾಬಾದ:ಗ್ರಾಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಘದಿಂದ ಸೆಪ್ಟೆಂಬರ್ ೧೫ರಿಂದ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ.೧೫ರಿಂದ ಬೇಡಿಕೆಗಳ ಈಡೇರಿಕೆಯವರೆಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಗ್ರಾಪಂ ನೌಕರರ ಸಂಘ( ಸಿಐಟಿಯು ಸಂಯೋಜಿತ) ಚಿತ್ತಾಪೂರ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಲ್ಲಣ್ಣ ಕಾರೊಳ್ಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಪಂ ವ್ಯವಸ್ಥೆ ಆರಂಭವಾದಾಗಿನಿಂದ ಬಿಲ್ ಕಲೆಕ್ಟರ್/ ಗುಮಾಸ್ತ, ಪಂಪ್ ಆಪರೇಟರ್, ಸಿಪಾಯಿ ಮತ್ತು ಸ್ವಚ್ಛತೆಗಾರರು ಕಾರ್ಯನಿರ್ವಹಿಸುತ್ತಿದ್ದಾರೆ.ಇತ್ತೀಚಿಗೆ ಸರ್ಕಾರ ಹೊರಡಿಸಿದ್ದು, ಅದರಲ್ಲಿ ಅರ್ಹತಾ ಪರೀಕ್ಷೆ ಕೈಬಿಡಬೇಕು.೧೫ನೇ ಹಣಕಾಸಿನಲ್ಲಿ ವೇತನಕ್ಕಾಗಿ ಮೀಸಲಿಟ್ಟಿ ಮೊತ್ತವನ್ನು ಕ್ರಿಯಾಯೋಜನೆಯಲ್ಲಿ ಅಳವಡಿಸಬೇಕು.

Contact Your\'s Advertisement; 9902492681

ಕಂಪ್ಯೂಟರ್ ಆಪರೇಟರ್‌ಗಳ ಸೇವಾ ಅವಧಿ ಪರಿಗಣಿಸಿ ನೇರ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಬೇಕು.ನೌಕರರು ನಿವೃತ್ತಿಯಾಗುವಾಗ ಗ್ರ್ಯಾಚುಟಿ ನೀಡಿಬೀಳ್ಕೊಡಬೇಕು ಎಂಬ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು. ಸಂಘದ ಪದಾಧಿಕಾರಿಗಳಾದ ಸಿದ್ರಾಮಪ್ಪ ಸ್ವಾಮಿ, ಚಿತ್ರಶೇಖರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here