ಸುರಪುರ: ಮುಸ್ಲೀಂ ಮಹಿಳೆಯರು ಧರಿಸುವ ಬುರ್ಖಾದ ಬಗ್ಗೆ ಮಾತನಾಡಿದ್ದಾರೆಂದು ಆರೋಪಿಸಿ ರಾಷ್ಟ್ರೀಯ ಮುಸ್ಲೀಂ ಮಂಚ್‌ನ ಜಿಲ್ಲಾಧ್ಯಕ್ಷ ಅರ್ಷದ್ ದಖನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಹೇಳಿಕೆ ನೀಡಿರುವ ಅರ್ಷದ್ ದಖನಿ,ಬುರ್ಖಾದ ಬಗ್ಗೆ ಶಾಸಕ ಸೊಗಡು ಶಿವಣ್ಣ ಮಾತನಾಡುವ ಮೂಲಕ ಮುಸ್ಲೀಂ ಸಮುದಾಯದ ಮಹಿಳೆಯರ ನಂಬಿಕೆಗೆ ಧಕ್ಕೆ ತಂದಿದ್ದಾರೆ.ಬುರ್ಖಾದಿಂದ ಯಾರಿಗು ಏನು ತೊಂದರೆಯಿಲ್ಲ.ಆದರೆ ಅನಾವಶ್ಯಕವಾಗಿ ಇಂತಹ ವಿಷಯಗಳ ಬಗ್ಗೆ ಮಾತನಾಡಿ ಸಮಾಜದಲ್ಲಿ ವಿವಾದ ಹುಟ್ಟು ಹಾಕುವ ಕೆಲಸವನ್ನು ಸೊಗಡು ಶಿವಣ್ಣ ಒಂದು ಧರ್ಮಿಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.
ಇದನ್ನು ಮುಸ್ಲೀಂ ಸಮುದಾಯ ಖಂಡಿಸುತ್ತದೆ,ಮತ್ತು ಕೂಡಲೆ ಅವರ ಬಹಿರಂಗವಾಗಿ ಕ್ಷಮೆ ಕೇಳಬೇಕು.ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟವನ್ನು ನಡೆಸುವುದಾಗಿ ತಿಳಿಸಿದ್ದಾರೆ.ಅಲ್ಲದೆ ಬಿಜೆಪಿ ಪಕ್ಷದ ಹೈಕಮಾಂಡ್ ಜೆ.ಪಿ.ನಡ್ಡಾ ಅವರು,ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಇವರನ್ನು ಪಕ್ಷದಿಂದ ಹೊರಹಾಕುವಂತೆ ಮನವಿ ಮಾಡಿದ್ದಾರೆ.