ಸುರಪುರ ಹುಣಸಗಿ ತಾಲೂಕಿನ ರೈತರಿಗೆ ಬಡ್ಡಿರಹಿತ ಸಾಲ: ಸುರೇಶ ಸಜ್ಜನ್

0
15

ಸುರಪುರ: ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಯೋಗದಲ್ಲಿ 2020-21ನೇ ಸಾಲೀನಲ್ಲಿ ಇದೇ 18,19 ರಂದು ಎರಡು ದಿನ ಸಹಕಾರಿ ರೈತರಿಗೆ ಸುಮಾರು 17 ಕೋಟಿ.ರೂ.ಬಡ್ಡಿ ರಹಿತ ಅಧ್ಯಕ್ಷ ಸಾಲ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾ.ಸುರೇಶ ಸಜ್ಜನ ತಿಳಿಸಿದರು.

ಸುರಪುರದ ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಸೋಮವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿ,18 ರಂದು ಬೆಳಿಗ್ಗೆ 10-30 ಕ್ಕೆ ಮುದನೂರಿನ ದೇವರ ದಾಸೀಮಯ್ಯ ದೇವಸ್ಥಾನದ ಆವರಣದಲ್ಲಿ ಶಾಸಕ ರಾಜೂಗೌಡ ಅವರು ಉದ್ಘಾಟಿಸಿವರು ಹಾಗೂ ಸೇಡಂ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ಜ್ಯೋತಿ ಬೆಳಗಿಸುವರು ಕೋರಿ ಸಿದ್ದೇಶ್ವರ ಶಾಖಾ ಮಠ ಹಾಗೂ ಕಂಠಿಮಠದ ಪೂಜ್ಯ ಶ್ರೀ ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹಾಗೂ ರಸ್ತಾಪುರ ಬ್ರಹನಮಠದ ಷ.ಬ್ರ.ಪೂಜ್ಯಶ್ರೀ ಗಿರಿದರಾಧ್ಯ ಪಂಡಿತಾರಾಧ್ಯ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು.

Contact Your\'s Advertisement; 9902492681

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ ಅಧ್ಯಕ್ಷತೆ ವಹಿಸುವರು.ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಶಿವಾನಂದ ಮಾನಕರ ಅವರು 1904 ದಲ್ಲಿ ಕೃಷಿ ಸಹಕಾರಿ ಸಂಸ್ಥಾಪಕರಾದ ಸಿದ್ದನಗೌಡ ಪಾಟೀಲ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವರು.ಮುಖ್ಯ ಅತಿಥಿ ಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾದ ಶಹಾಪೂರ ದ ಗುರುನಾಥ ರೆಡ್ಡಿ ಪಾಟೀಲ್, ಯಾದಗಿರಿಯ ಸಿದ್ರಾಮ ರೆಡ್ಡಿ ಪಾಟೀಲ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಿದಾನಂದ ನಿಂಬಾಳ ಅವರು ಉಪಸ್ಥಿತರಿವರು. ಮಧ್ಯಾಹ್ನ 2-30 ಕ್ಕೆ ರಂಗಂಪೇಟಿಯ ವೀರಶೈವ ಕಲ್ಯಾಣ ಮಂಟಪದಲ್ಲಿ 7 ಕೃಷಿ ಸಹಕಾರ ಸಂಘ ಗಳಿಗೆ ಸಾಲ ವಿತರಿಸಲಾಗುವುದು.ದೇವಾಪುರದ ಜಡೀ ಶಾಂತಲಿಂಗಶ್ವೇರ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು, ಸುರಪುರ ದ ಕಡ್ಲಪ್ಪ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಗಳು ಸಾನಿಧ್ಯ ವಹಿಸುವರು.

19 ರಂದು ಬೆಳಿಗ್ಗೆ 10-30 ಕ್ಕೆ ಕೊಡೇಕಲ್ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಂತರ ಮಧ್ಯಾಹ್ನ 2-30 ಕ್ಕೆ ದೇವತ್ಕಲ್ ನಲ್ಲಿ 5 ಗಂಟೆಗೆ ಹುಣಸಗಿಯಲ್ಲಿ ಸಾಲ ವಿತರಣೆ ಕಾರ್ಯಕ್ರಮ ನಡೆಯಲಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು,ನಿರ್ದೇಶಕರು, ಕಾರ್ಯದರ್ಶಿಗಳು,ಸಹಕಾರಿ ಸಂಘ,ರೈತರು ಭಾಗವಹಿಸಿವರು ಎಂದರು.

ಸುದ್ದಿ ಗೋಷ್ಠಿ ಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪು ಗೌಡ ಪಾಟೀಲ್ ,ಮುದನೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಾಂತಿ ರೆಡ್ಡಿ ಚೌದ್ರಿ ಹಾಗೂ ಸಂಘದ ವ್ಯವಸ್ಥಾಪಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here