ಕಲಬುರಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಹಳೆಯ ಬಾಕಿ ವೇತನ ಹಾಗೂ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೆಲಸ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಮಹಾಗಾಂವ್ ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಹಾಗಾಂವ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಾಗಾಂವ್ ಮತ್ತು ಮಹಾಗಾಂವ್ ವಾಡಿಯ ಕೂಲಿಕಾರರು ಮನರೇಗಾದಡಿ ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಇಲ್ಲಿಯವರೆಗೆ ಕೆಲಸ ನೀಡಿಲ್ಲ ಎಂದು ಆರೋಪಿಸಿದರು.
ಕಳೆದ ವರ್ಷ ಸುಮಾರು ೧೦೦ ಜನ ಕೂಲಿಕಾರರು ಕೆಲಸ ಮಾಡಿದ್ದಾರೆ. ಅವರಿಗೆ ಇದುವರೆಗೆ ಬಾಕಿ ವೇತನ ಪಾವತಿ ಮಾಡಿಲ್ಲ. ಪ್ರಸಕ್ತ ಸಾಲಿನಲ್ಲೂ ಸಹ ಸುಮಾರು ೨೦೦ ಜನರ ಕೂಲಿಕಾರರು ಕೆಲಸ ಮಾಡಿದ್ದಾರೆ. ಅವರಿಗೆ ಎರುಡು ವಾರದ ಬಾಕಿ ವೇತನ ನೀಡಿಲ್ಲ. ಕೂಡಲೇ ಉಳಿದಿರುವ ಬಾಕಿ ವೇತನ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷೆ ಜಯಶ್ರೀ ಎಂ.ಕಟ್ಟಿಮನಿ, ಮುಖಂಡ ಮೋಹನ್ ಎಂ.ಕಟ್ಟಿಮನಿ, ಶೋಭಾ ಹಸನಪೇಟ್, ಮಾಲನಬಿ ಮಹಾಗಾಂವ್ವಾಡಿ, ಮೀಯಾನ್ ದೊಡ್ಮನಿ, ಶ್ರೀಧರ ಸಿಂಗೆ, ಸುನೀತಾ ಕಂದಗೂಳ, ನಿಂಗಮ್ಮ ಕಟ್ಟಿಮನಿ ಇದ್ದರು.