ಶಹಾಬಾದ: ರಾಷ್ಟ್ರೀಯ ಹಿಂದಿ ದಿನಾಚಾರಣೆ

0
43

ಶಹಾಬಾದ: ರಾಷ್ಟ್ರೀಯ ಭಾಷೆಯಾಗಿರುವ ಹಿಂದಿಯು ದೇಶದ ಐಕ್ಯತೆ ಹಾಗೂ ಭಾವೈಕ್ಯತೆಯನ್ನು ಸಾರುವ ಭಾಷೆಯಾಗಿದ್ದು,ಎಲ್ಲರೂ ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಎಂದು ಎಸ್.ಜಿ.ವರ್ಮಾ ಹಿಂದಿ ಪ್ರಾಥಮಿಕ ಶಾಲೆಯ ಮುಖ್ಯಗುರುಮಾತೆ ಅನಿತಾ ಶರ್ಮಾ ಹೇಳಿದರು.

ಅವರು ಮಂಗಳವಾರ ನಗರದ ಎಸ್.ಜಿ.ವರ್ಮಾ ಹಿಂದಿ ಶಾಲೆಯಲ್ಲಿ ಆಯೋಜಿಸಿದ ಹಿಂದಿ ದಿನಾಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಸ್ವಾತಂತ್ರ್ಯ ಪಡೆದ ನಂತರ ರಾಷ್ಟ್ರ ಭಾಷೆಯಾಗಿ ಯಾವ ಮಟ್ಟದಲ್ಲಿ ಬೆಳೆಯಬೇಕಾಗಿತ್ತೋ, ಆ ಮಟ್ಟದಲ್ಲಿ ಹಿಂದಿ ಭಾಷೆಯು ಬೆಳೆಯದೇ ಇರುವದು ವಿಷಾದನೀಯವಾಗಿದೆ.ಪ್ರತಿಯೊಬ್ಬರಿಗೂ ಅವರದೇ ಆದ ಮಾತೃಭಾಷೆ ಬಗ್ಗೆ ಹೆಚ್ಚಿನ ಪ್ರೀತಿ ಇರುವುದು ಸಹಜ ಗುಣ. ಆದರೆ ರಾಷ್ಟ್ರದ ಪ್ರಶ್ನೆ ಬಂದಾಗ ಹಿಂದಿಯನ್ನು ನಾವು ಅನಿವಾರ್ಯವಾಗಿ ನಮ್ಮದಾಗಿಸಿಕೊಳ್ಳಬೇಕಾಗಿದೆ.ಸರಕಾರ ಹಿಂದಿ ಭಾಷೆಯ ಬೆಳವಣಿಗೆಗಾಗಿ ಹಲವಾರು ಯೋಜನೆಗಳನ್ನು ಹಾಕಿಕೊಂಡು ಕಾರ್ಯಪ್ರವೃತ್ತವಾಗಿದೆ.ಸಾಹಿತ್ಯಿಕವಾಗಿ ಸಮೃದ್ಧ ಭಾಷೆಯಾಗಿರುವ ಹಿಂದಿಯಲ್ಲಿ ಅತೀ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಹಿರಿಮೆ ಇದೆ.ಇಂತಹ ದೇಶ ಜನರೊಂದಿಗೆ ಬಾಂಧವ್ಯ ಬೆಸೆಯುವ ಹಿಂದಿ ಭಾಷೆಗೆ ನಾವೆಲ್ಲರೂ ಗೌರವಿಸಿ ಬೆಳೆಸಬೇಕಾಗಿದೆ ಎಂದು ಹೇಳಿದರು.

ಶಿಕ್ಷಕ ಬಾಬಾ ಸಾಹೇಬ ಸಾಳುಂಕೆ ಮಾತನಾಡಿ, ಪಾಚೀನಕಾಲದಿಂದಲೂ ತನ್ನದೆಯಾದ ಪರಂಪರೆ, ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿರುವ ಸುಂದರ, ಸ್ವಾರಸ್ಯಕರ ಹಾಗೂ ಕೇಳುವುದಕ್ಕೂ ಹಿತವಾಗಿರುವ ಸಂಪರ್ಕ ಭಾಷೆಯೇ ಹಿಂದಿ ಭಾಷೆಯಾಗಿದೆ ಎಂದರು.

ಶಿಕ್ಷಕರಾದ ರಮೇಶ ಜೋಗದನಕರ್,ಅನೀಲ ಕುಲಕರ್ಣಿ, ವಸಂತ ಪಾಟೀಲ, ಮಹೇಶ್ವರಿ ಗುಳಿಗಿ, ವಿಜಯಲಕ್ಷ್ಮಿ ವೆಂಕಟೇಶ, ರಾಜೇಶ್ವರಿ.ಎಮ್, ಸಂಗೀತಾ, ಸುರೇಖಾ ಜಾಯಿ, ಶ್ರೀರಾಮ ಚವ್ಹಾಣ, ಗೀತಾ ಸಿಪ್ಪಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here