ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್: ಕೆವಿಎಸ್ ಖಂಡನೆ

0
70

ಕಲಬುರಗಿ: NEP ವಿರೋಧಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆಯನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆ ಕಲಬುರಗಿ ಸಮಿತಿ ತೀವ್ರವಾಗಿ ಖಂಡಿಸಿ ಪೊಲೀಸರ ವರ್ತನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ರಾಜೇಂದ್ರ ರಾಜವಾಳ ಸೆಪ್ಟೆಂಬರ್‌ 14 ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಸಮಾನ ಗುಣಮಟ್ಟದ ಉಚಿತ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ ಎಂದು ಒಂದು ಮಾತೂ ಹೇಳದ, ಖಾಸಗೀ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಬಡವರ, ಸಂವಿಧಾನ ವಿರೋಧಿ ಆಗಿರುವ ಹೊಸ ಶಿಕ್ಷಣ ನೀತಿ-೨೦೨೧ ಜಾರಿಯನ್ನು ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಚಾರ್ಜ್ ನಡೆಸಲಾಗಿದೆ ಹಲವು ಸಂಶಯಗಳಿಗೆ ಹುಟ್ಟುಹಾಕಿದೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟಿಸು ಹಕ್ಕು ಪ್ರತಿಯೊಬ್ಬರಿಗೆ ಇದೆ. ಸರಕಾರ ಮತ್ತು ಪೊಲೀಸರ ಈ ನಡೆ ಸಂವಿಧಾನದ ಹಕ್ಕನ್ನು ಹತ್ತಿಕುವ ಹುನ್ನಾರ ಪೊಲೀಸರು ನಡೆಸುತ್ತಿದ್ದಾರೆ ಎಂಬ ಅನುಮಾನ ದಾರಿ ನೀಡಿದಂತಾಗಿದೆ ಎಂದಿದ್ದಾರೆ.

ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಈ ನಡೆಯನ್ನು ಕರ್ನಾಟಕ ವಿದ್ಯಾರ್ಥಿ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ವಿದ್ಯಾರ್ಥಿ ಹೋರಾಟಗಾರರ ಮೇಲಿನ ದೂರಗಳನ್ನು ಕೈಬಿಡಿ. ಶಿಕ್ಷಣ ನೀತಿಯ ಕುರಿತು ಯಾವುದೇ ಚರ್ಚೆ ಇಲ್ಲದೆ, ಖಾಸಗೀ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ತರಾತುರಿಯಲ್ಲಿ  ಎನ್.ಈ.ಪಿ ಜಾರಿಯನ್ನು ನಾವು ವಿರೋಧಿಸುತ್ತೇವೆ, ಸಮಾನ ಗುಣಮಟ್ಟದ ಉಚಿತ ಶಿಕ್ಷಣ ಜಾರಿಯಾಗಲಿ ಎಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here