ಕಲಬುರಗಿಯಲ್ಲಿ 12 ಲಕ್ಷಕ್ಕೂ ಅಧಿಕ ಲಸಿಕಾಕರಣ ಗುರಿ ಸಾಧನೆ: ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ

0
17

ಕಲಬುರಗಿ: ಸಾಂಕ್ರಾಮಿಕ ಕೋವಿಡ್-19 ವೈರಸ್ ವಿರುದ್ಧ ಹೋರಾಡಲು ಜಿಲ್ಲೆಯ ಒಟ್ಟು 455 ಲಸಿಕಾ ಕೇಂದ್ರಗಳಲ್ಲಿ ಜನೆವರಿ 2021, 16ರಿಂದ ಈವರೆಗೆ 18 ವರ್ಷ ಮೇಲ್ಪಟ್ಟವರಿಗೆ ಒಟ್ಟು 18,87,598 ಜನರಿಗೆ ಕೋವಿಡ್ ಲಸಿಕೆ ಹಾಗುವ ಗುರಿಹೊಂದಲಾಗಿದ್ದು, ಆ ಪೈಕಿ 9,93,383 ಜನರಿಗೆ ಮೊದಲನೇ ಡೋಸ್ ಹಾಗೂ 2,93,410 ಜನರಿಗೆ ಸೇರಿ ಒಟ್ಟು 12,86,793 ಜನರಿಗೆ ಕೋವಿಡ್ ಲಸಿಕೆ ನೀಡಿ ಗುರಿಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ತಿಳಿಸಿದರು.

ಜಿಲ್ಲೆಯ ಒಟ್ಟು ಲಸಿಕಾಕರಣದ ಪೈಕಿ ಆರೋಗ್ಯ ಕಾರ್ಯಕರ್ತರಲ್ಲಿ 23581 ಜನರಿಗೆ ಮೊದಲ ಡೋಸ್ ಲಸಿಕೆ ನೀಡಿದರೆ, ಇನ್ನು 22576 ಜನರಿಗೆ ಎರಡನೇ ಡೋಸ್ ಲಸಿಕೆ ಚುಚ್ಚುಮದ್ದು ನೀಡಲಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಇನ್ನು ಮುಂಚೂಣಿ ಕಾರ್ಯಕರ್ತರಲ್ಲಿ 25722 ಮೊದಲ ಡೋಸ್ ಹಾಗೂ 17968 ಜನರಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ. ಇದಲ್ಲದೇ 894215 ಇನ್ನು ಲಸಿಕೆ ಪಡೆಯದೇ ಇರುವ ಫಲಾನುಭವಿಗಳಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದ್ದಾರೆ.

ಕಲಬುರಗಿ ನಗರ ಪ್ರದೇಶದಲ್ಲಿ ಒಟ್ಟು 46923 ಜನರಿಗೆ ಲಸಿಕೆ ಹಾಕಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಒಟ್ಟಾರೆ 817562 ಜನರು ಲಸಿಕೆಪಡೆದಿದ್ದಾರೆ. ಜಿಲ್ಲೆಯ ಗಡಿಭಾಗದ ಒಟ್ಟು 72 ಹಳ್ಳಿಗಳ ಪೈಕಿ 18 ವರ್ಷ ಮೇಲ್ಪಟ್ಟ 95850 ಜನರಿಗೆ ಹಾಗೂ ಗಡಿಭಾಗದ ಒಟ್ಟು ಹಳ್ಳಿಗಳಲ್ಲಿ 77,738 ಜನರಿಗೆ ಹಾಕಲಾಗಿರುವ ಲಸಿಕಾ ಪ್ರಮಾಣ ಶೆ.87%ರಷ್ಟಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.

ಜಿಲ್ಲೆಯ ವಿವಿಧೆಡೆ ಸಂಚಾರಿ ಲಸಿಕಾ ವಾಹನಗಳ ಮೂಲಕ ತೆರಳಿ 13033 ಜನರಿಗೆ ಲಸಿಕೆ ನೀಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಹೊಸದಾಗಿ 1,20,00,000 ಡೋಸ್ ಲಸಿಕಾ ಸಾಮಥ್ರ್ಯವುಳ್ಳ ಪ್ರಾದೇಶಿಕ ಹಾಗೂ ಜಿಲ್ಲಾ ಲಸಿಕಾ ಉಗ್ರಾಣ ಕಟ್ಟಡ ನಿರ್ಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here