ಕಲಬುರಗಿ: ನಗರದಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಜೈ ಕನ್ನಡಿಗರ ಸೇನೆಯ ಅಧ್ಯಕ್ಷ ದತ್ತು. ಎಚ್.ಭಾಸಗಿ ಅವರು, ವಾರ್ಡ ನಂ.೪೯ರ ತಾರಫೈಲ ಬಡಾವಣೆಯಲ್ಲಿನ ಸ್ಲಂ ಬೋರ್ಡ್ ಯೋಜನೆಯ ಮನೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದರು.
ಮಹಾನಗರದ ವಾರ್ಡ್ ನಂಬರ್ ೪೯ರಲ್ಲಿ ಬರುವ ಬುದ್ಧನಗರ ೫೪ನೇ ತಾಫೈಲಬಡಾವಣೆಯಲ್ಲಿ ಸ್ಲಂ ಬೋರ್ಡ್ ಯೋಜನೆಯಡಿ ಮಂಜೂರಾದ ಸುಮಾರು ೩೫೦ ಮನೆಗಳಲ್ಲಿ ಕೆಲವು ಮನೆಗಳ ಕಾಮಗಾರಿ ಮೂಗಿಸಿರುತ್ತಾರೆ ಉಳಿದ ಎಲ್ಲ ಮನೆಗಳ ಕಾಮಗಾರಿಪೂರ್ಣಗೊಳಿಸಿ ಇಲ್ಲಿ ಹೆಚ್ಚುವರಿಯಾಗಿ ಪುನಃ ೫೦೦ ಮನೆಗಳನ್ನು ನಿರ್ಮಾಣ ಮಾಡಲು ಆದೇಶ ನೀಡಬೇಕು. ಇಲ್ಲಿನ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕೆಂದು ದತ್ತು ಭಾಸಗಿ ಅವರು, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರಸಲ್ಲಿಸಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳು ಇದ್ದರು.