ಕಲಬುರಗಿ: ಶ್ರೀನಿವಾಸ ಸರಡಗಿ ಗ್ರಾಮದಲ್ಲಿ ಒಟ್ಟು ೮ ಜನ ರೈತರು ಕಲಬುರಗಿ ನಗರದ ಗಂಜ್ ಪ್ರದೇಶದಲ್ಲಿರುವ ಹನುಮಾನದಾಸ ಭಗವಾನದಾಸ ಬೀಜ ವ್ಯಾಪಾರಿ ಮಾಲೀಕರಾದ ದೀಪಕ್ ಗಿಲ್ಡಾ ಇವರ ಹತ್ತಿರ ೪೦ ದಿವಸಗಳ ಹೆಸರು ಬೆಳೆ ಬೆಳೆಯಲು ಹೆಸರು ಬೀಜ ಖರೀದಿ ಮಾಡಿ ಬಿಲ್ಲು ನೀಡಿದ್ದು ಇರುತ್ತದೆ ಸುಮಾರು ೮೦ ರಿಂದ ೯೦ ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು ಆದರೆ ಸದರಿ ಬೆಲೆ ಸುಮಾರು ಮೂರು ತಿಂಗಳಾದರೂ ಹೂವು ಕಾಯಿ ಬೀಡದೆ ರೈತರು ಕಂಗೆಟ್ಟಿದ್ದು ಅವರು ಅಲ್ಲಿ ಇಲ್ಲಿ ಸಾಲ ಮಾಡಿ ಹೆಸರು ನಿಜ ಬಿತ್ತನೆ ಮಾಡಿದ್ದು ಈ ಒಂದು ಹೊಲ ಬಿಟ್ಟರೆ ಅವರ ಉಪಜೀವನಕ್ಕೆ ಬೇರೆ ಹೊಲ ಇರುವುದಿಲ್ಲ ಆದರೆ ಅದರಲ್ಲಿ ಬಿತ್ತಿದ ಬೆಳೆ ಸಂಪೂರ್ಣ ನಾಶವಾಗಿದರಿಂದ ರೈತರು ಸಂಕಷ್ಟಕ್ಕೆ ಸಿಲುಕಿರುತ್ತಾರೆ.
ಸುಮಾರು ದಿನಗಳಾದರು ಹೆಸರು ಬೀಜ ಮಾರಾಟ ಮಾಡಿದ ದೀಪಕ ಗಿಲ್ಡಾ ರವರ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಇದಕ್ಕೆ ಸಂಭಂದಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು ಕ್ಯಾರೆ ಎನ್ನುತಿಲ್ಲ ಆದ ಕಾರಣ ಶ್ರೀನಿವಾಸ ಸರಡಗಿ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಪರಿಹಾರ ಘೋಷಿಸಬೇಕು.
ಕಾರಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸದರಿ ನಕಲಿ ಬೀಜದಾರರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆದೇಶಿಸಿ ನಷ್ಟಕ್ಕೆ ಒಳಗಾದ ರೈತರಿಗೆ ಕೂಡಲೇ ಸೂಕ್ತ ಪರಿಹಾರ ಒದಗಿಸಿ ಪ್ರತಿ ರೈತರಿಗೆ ಎಕರೆಗೆ ೨೦ ಸಾವಿರ ಪರಿಹಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ಜಯ ಕರ್ನಾಟಕ ರಕ್ಷಣಾ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಎಸ್ ಸರಡಗಿ ಅವರು ಸಿಎಂ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಮತಕ್ಷೇತ್ರ ಶಾಸಕ ಬಸವರಾಜ ಮತ್ತಿಮೂಡ, ಗ್ರಾಮದ ಮುಖಂಡ ಶಿವಾನಂದ ಆರ್ ಕಿಳ್ಳಿ, ರೈತರಾದ ಸಿದ್ದಪ್ಪ ಪೂಜಾರಿ ಕಂಟಿಕಾರ, ಯುವ ಮುಖಂಡರಾದ ರಮೇಶ ಮೀಸಿ, ಮಲ್ಲಿಕಾರ್ಜುನ ಶ್ರೀಗನ್, ಲಕ್ಷ್ಮಣ ಪೂಜಾರಿ, ಶರಣಪ್ಪ ವಗ್ಯಾ ಇದ್ದರು.