ಕಲ್ಯಾಣ ಕರ್ನಾಟಕದ ಪರಿಣಿತ ಚಿಂತಕರ ಹೋರಾಟಗಾರರ ಸಭೆ

0
48

ಕಲಬುರಗಿ : 17ನೇ ಸೆಪ್ಟೆಂಬರ್ 2021 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಕಲಬುರಗಿಯ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮತ್ತು 371ನೇ(ಜೆ) ಕಲಮ್ ತಿದ್ದುಪಡಿಯ ಪರಿಣಾಮಕಾರಿ ಅನುಷ್ಠಾನದ ಕುರಿತು ಕಲ್ಯಾಣ ಕರ್ನಾಟಕದ ಶಾಸಕರ, ಪರಿಣಿತರ ಸಭೆ ಕರೆಯಲು ಘೋಷಣೆ ಮಾಡಿರುವಂತೆ ಅದಕ್ಕೆ ಸಂಬಂಧಿಸಿ ಪೂರ್ವಭಾವಿಯಾಗಿ ಕಲ್ಯಾಣ ಕರ್ನಾಟಕದ ಪರಿಣಿತ, ಚಿಂತಕರ ಮತ್ತು ಪರಿಣಿತ ಹೋರಾಟಗಾರರ ಸಭೆ ಕರೆದು ಚರ್ಚಿಸಲು ಆದಷ್ಟು ಶೀಘ್ರ ಬೆಂಗಳೂರಿನಲ್ಲಿ ಸಭೆ ಕರೆಯುವುದಾಗಿ ಕುಷ್ಟಗಿ ಶಾಸಕರಾದ ಅಮರೇಗೌಡ ಬೈಯಾಪುರ ಅವರು ತಿಳಿಸಿರುತ್ತಾರೆ.

ಇಂದು ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಮತ್ತು ಅವರ ತಂಡದವರೊಂದಿಗೆ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿ ಕುರಿತು ಸುಧೀರ್ಘ ಚರ್ಚೆ ನಡೆಸಿದ ಅವರು ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕುರಿತು ಸಭೆ ಕರೆಯುವುದರ ಬಗ್ಗೆ ಘೋಷಣೆ ಮಾಡಿರುವುದು ಸ್ವಾಗತಾರ್ಹವಾದ ವಿಷಯ ಸದರಿ ಸಭೆಗಿಂತ ಮೊದಲು ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಪಕ್ಷದ ಪ್ರಮುಖ ಶಾಸಕರು ಸಮಾಲೋಚನೆ ಸಭೆ ನಡೆಸುವುದು ಅತಿ ಅವಶ್ಯವಾಗಿದೆ.

Contact Your\'s Advertisement; 9902492681

ಅದಕ್ಕೂ ಪೂರ್ವದಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ಅಧ್ಯಯನ ನಡೆಸಿ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ದಶಕಗಳಿಂದ ಹೋರಾಟ ನಡೆಸುತ್ತಿರುವ ಪರಿಣಿತ ಹೋರಾಟಗಾರರ ಚಿಂತಕರ ಸಭೆ ನಡೆಸುವುದು ಅವಶ್ಯವಾಗಿದೆ. ಇದಕ್ಕೆ ಸಂಬಂಧಿಸಿ ಏಳು ಜಿಲ್ಲೆಯ ಪರಿಣಿತ ಚಿಂತಕರ ಸಭೆಯನ್ನು ಆದಷ್ಟು ಶೀಘ್ರ ಬೆಂಗಳೂರಿನಲ್ಲಿ ಸಭೆ ನಡೆಸುವ ಬಗ್ಗೆ ಶಾಸಕ ಬೈಯಾಪೂರ ಅವರು ತಿಳಿಸಿದರಲ್ಲದೆ ಮುಖ್ಯ ಮಂತ್ರಿಗಳಿಗೆ ಸಲ್ಲಿಸಬೇಕಾದ ಕಲ್ಯಾಣ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಚಿಂತಕರಾದ ವಿಜಯಕುಮಾರ ಮುಖಂಡರಾದ ಲಿಂಗರಾಜ ಸಿರಗಾಪೂರ, ಶಿವಲಿಂಗಪ್ಪ ಬಂಡಕ, ಜ್ಞಾನಮಿತ್ರ ಸ್ಯಾಮ್ಯೂವೆಲ್, ಗುರುರಾಜ ಭಂಡಾರಿ, ಶಿವಾನಂದ ಬಿರಾದಾರ, ರೋಹನಕುಮಾರ, ಬಾಬುರಾವ ಮಾಲಿಪಾಟೀಲರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here