ಕಲಬುರಗಿ: ಇಲ್ಲಿನ ಜಿಮ್ಸ್ ಕಾಲೇಜ್‍ನಲ್ಲಿ ಸೆ.17 ರಿಂದ 23 ರವರೆಗೆ ನಡೆಯುವ ಫಾರ್ಮಾಕೊವಿಜಿಲೆನ್ಸ್ ( ಔಷಧಿಗಳ ಅಡ್ಡಪರಿಣಾಮ) ಸಪ್ತಾಹಕ್ಕೆ ಶುಕ್ರವಾರ ಜಿಮ್ಸ್ ನಿರ್ದೇಶಕಿ ಡಾ. ಕವಿತಾ ಪಾಟೀಲ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಎಎಂಸಿ ಸಂಯೋಜಕಿ ಡಾ. ಪ್ರಿಯಾದರ್ಶಿನಿ ದೇವದುರ್ಗ, ಫಾರ್ಮಾಕಾಲಿಜಿ ವಿಭಾಗದ ಪ್ರಾಧ್ಯಾಪಕರು ಮತ್ತು ಸಿಬ್ಬಂದಿವರ್ಗದವರು, ವಿದ್ಯಾರ್ಥಿಗಳು ಇದ್ದರು.