ಗ್ರಾಮ ಪಂಚಾಯತಿ ಕಸ ವಿಲೇವಾರಿ ವಾಹನಗಳ ಚಾಲಕ ಹುದ್ದೆಗೆ ದಲಿತರ ನೇಮಿಸಿ: ಕ್ರಾಂತಿ

0
19

ಸುರಪುರ: ಯಾದಗಿರಿ ಜಿಲ್ಲೆಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಒಣ ಮತ್ತು ಹಸಿ ಕಸ ಸಾಗಿಸುವದಕ್ಕೆ ಮಂಜೂರಿಯಾಗಿರುವ ಕಸ ವಿಲೇವಾರಿ ವಾಹನಗಳಿಗೆ ಶೇ೧೮ ರಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಚಾಲಕರ ಹುದ್ದೆಗಲಿಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ ಬಣ) ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದರು.

ನಗರದ ತಾ ಪಂ ಕಚೇರಿ ಎದುರುಗಡೆ ಬುಧವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಬರುವ ಪ್ರತಿಯೊಂದು ಗ್ರಾಮ ಪಂಚಾಯತಿ ಕೇಂದ್ರಕ್ಕೆ ಕಸ ಸಾಗಿಸುವ ವಾಹನಗಳು ಮಂಜೂರಿಯಾಗಿದ್ದು ಇವುಗಳಿಗೆ ಚಾಲಕರ ಹುದ್ದೆಗಳನ್ನು ನೇಮಿಸಿಕೊಳ್ಳುವಲ್ಲಿ ಬೇಕಾಬಿಟ್ಟಿಯಾಗಿ ನೇಮಕ ಮಾಡಿಕೊಳ್ಳುತ್ತಿದ್ದು ಸರಕಾರದ ನಿಯಮಾಗಳಿಯಂತೆ ಎಸ್ಸಿ ಮತ್ತು ಎಸ್ಟಿ ಸಮದಾಯದವರನ್ನು ನೇಮಿಸಿಕೊಳ್ಳುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

Contact Your\'s Advertisement; 9902492681

ಕೂಡಲೇ ಸರಕಾರದ ಮೀಸಲಾತಿ ನಿಯಮಾವಳಿ ಪ್ರಕಾರ ಶೇ೧೮ ರಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಚಾಲಕರ ಹುದ್ದೆಗಳಿಗೆ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿದರು,ಚಾಲಕರ ಹುದ್ದೆಗಳಿಗೆ ಒಂದು ವೇಳೆ ಎಸ್.ಸಿ ಮತ್ತು ಎಸ್.ಟಿ ಸಮುದಾಯದವರನ್ನು ನೇಮಕಗೊಳಿಸದಿದ್ದಲ್ಲಿ ಯಾದಗಿರಿ ಜಿ.ಪಂ ಕಾರ್ಯಾಲಯಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಂತರ ಜಿ.ಪಂ ಸಿ.ಇ.ಓ. ಅವರಿಗೆ ಬರೆದಿರುವ ಮನವಿ ಪತ್ರವನ್ನು ತಾ ಪಂ ಕಚೇರಿ ವ್ಯವಸ್ಥಾಪಕ ವೆಂಕೋಬ ಬಾಕಲಿ ಅವರ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಮಾನಪ್ಪ ಬಿಜಾಸಪುರ,ಅಜೀಜ್‌ಸಾಬ ಐಕೂರ,ನಿಂಗಣ್ಣ ಮಳ್ಳಳ್ಳಿ,ಡಾ.ಮಲ್ಲಿಕಾರ್ಜುನ ಆಸನಾಳ,ಮಹಾದೇವಪ್ಪ ಬಿಜಾಸಪುರ,ಮರೆಪ್ಪ ಹಾಲಗೇರಾ,ಹಣಮಂತ ಬಾಂಬೆ,ಜಟ್ಟೆಪ್ಪ ನಾಗರಾಳ,ಬಸವರಾಜ ದೊಡ್ಡಮನಿ,ಮಲ್ಲೇಶಿ ಹೊಸ್ಮನಿ ಶೆಳ್ಳಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here