ಕಲಬುರಗಿ; ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಮತ್ತು ಶರಣಬಸವ ವಿಶ್ವವಿದ್ಯಾಲಯದ ಕುಲಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಅವರು ಡಾ.ಬಸವರಾಜ.ಎಸ್.ಮಠಪತಿ ಅವರನ್ನು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಿಸಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಮತ್ತು ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯ ಶ್ರೀ ಬಸವರಾಜ ದೇಶಮುಖ ಅವರು ಬುಧವಾರ ಶರಣಬಸವ ವಿಶ್ವವಿದ್ಯಾಲಯದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದರು. ಪೂಜ್ಯ ಡಾ.ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮತ್ತು ಶರಣಬಸವ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರೂ ಆಗಿರುವ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿಯವರ ಅಧ್ಯಕ್ಷತೆಯಲ್ಲಿ ಮಂಗಳವಾರ ಶರಣಬಸವ ಮಹಾದಾಸೋಹ ಮಹಾಮನೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಡಾ.ಬಸವರಾಜ.ಎಸ್.ಮಠಪತಿಯವರನ್ನು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ರಾಗಿ ನೇಮಿಸಿದರು.
ಭಾನುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಡಾ.ಲಿಂಗರಾಜ ಶಾಸ್ತ್ರೀಯವರ ನಿಧನದಿಂದ ತೆರವಾದ ಈ ಸ್ಥಾನಕ್ಕೆ ಡಾ.ಮಠಪತಿಯವರನ್ನು ನೇಮಿಸಲಾಯಿತು. ಈ ಉನ್ನತ ಮಟ್ಟದ ಸಭೆಯಲ್ಲಿ ವಿವಿ ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಪ್ರೊ ಕಿರಣ ಮಾಕಾ ಮತ್ತು ಇತರರು ಉಪಸ್ಥಿತರಿದ್ದರು.
ಶ್ರೀ ಬಸವರಾಜ ದೇಶಮುಖ ಅವರು ಔಪಚಾರಿಕವಾಗಿ ಡಾ ಮಠಪತಿ ಅವರನ್ನು ಕುಲಸಚಿವ (ಮೌಲ್ಯಮಾಪನ) ರಾಗಿ ನೇಮಿಸಿದ ಆದೇಶವನ್ನು ಹಸ್ತಾಂತರಿಸಿದರು ಮತ್ತು ಅವರ ಹೊಸ ಕೊಠಡಿಯಲ್ಲಿ ಗೌರವಿಸಿದರು. ಈ ಸಂದರ್ಭದಲ್ಲಿ ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಡೀನ್ ಡಾ. ಲಕ್ಷ್ಮಿ ಪಾಟೀಲ ಮಾಕಾ, ಹಣಕಾಸು ಅಧಿಕಾರಿ ಪ್ರೊ ಕಿರಣ ಮಾಕಾ, ಆಂಗ್ಲ ವಿಭಾಗದ ಡೀನ್ ಡಾ.ಎಸ್.ಜಿ. ಡೊಳ್ಳೇಗೌಡರ, ಫ್ಯಾಕಲ್ಟಿ ಆಫ್ ಬಿಸಿನೆಸ್ ಸ್ಟಡೀಸ್‌ನ ಡೀನ್ ಡಾ.ಎಸ್.ಎಚ್.ಹೊನ್ನಳ್ಳಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡಾ ನಾಗಬಸವಣ್ಣ ಗುರಗೋಳ ಮತ್ತು ಇತರರು ಹಾಜರಿದ್ದರು.
ತದನಂತರ ಶ್ರೀ ದೇಶಮುಖ ಅವರು ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್‌ನಲ್ಲಿ ಓಂಂಅ ಆಂತರಿಕ ಗುಣಮಟ್ಟದ ಖಾತರಿ ಕೋಶ (Iಕಿಂಅ)ದ ಕಛೇರಿಯನ್ನೂ ಉದ್ಘಾಟಿಸಿದರು.