ಶಹಾಪುರ: ಆಟೋ ಚಾಲಕರ ಸಭೆ ಸಂಚಾರಿ ನಿಯಮಗಳ ಅರಿವು

0
17

ಶಹಾಪುರ: ಆಟೋಗಳಿಗೆ ಎಸ್ ಎಚ್ ಪಿ ಎಂದು ಕೋಡ್ ಕೊಡಲಾಗಿದೆ. ಆಟೋ ಮುಂಭಾಗ, ಹಿಂಭಾಗ ಹಾಗೂ ಪ್ರಯಾಣಿಕರು ಹತ್ತುವ ಜಾಗದಲ್ಲಿ ಪೊಲೀಸ್ ಸಹಾಯವಾಣಿ ನಂಬರ್ 112 ನ್ನು ನಮೂದಿಸಲಾಗಿದೆ. ಆಟೋ ಡ್ರೈವರ್ ಅವರ ವೈಯಕ್ತಿಕ ವಿವರವನ್ನು ಮುಂದಿನ ದಿನಗಳಲ್ಲಿ ಅಳವಡಿಸಲಾಗುವುದು.

ಇತ್ತೀಚಿನ ಎರಡು ಕ್ರಿಮಿನಲ್ ಪ್ರಕರಣಗಳಲ್ಲಿ ಆಟೋ ಚಾಲಕರೆ ಭಾಗಿಯಾಗಿದ್ದರು. ಮುಂದಿನ ದಿನಗಳಲ್ಲಿ ಪರಿವರ್ತನೆ ಆಗದಂತೆ ನೋಡಿಕೊಳ್ಳಬೇಕಾಗಿದೆ. ಆಟೋ ಚಾಲಕರು ಪೊಲೀಸರಿಂದ ಒದಗಿಸಲಾದ ಮಾಹಿತಿಗಳನ್ನು ಇಂದಿನ ಸಭೆಗೆ ಬರದ ಸ್ನೇಹಿತರಿಗೆ ತಿಳಿಸಿ. ಸೂಕದತ ದಾಖಲಾತಿ ಹೊಂದಿರದ ಆಟೋಗಳ‌ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸ್ಥಳದಲ್ಲೇ ದಂಡ ವಿಧಿಸುವುದು ಅಥವಾ ನ್ಯಾಯಾಲಯಕ್ಕೆ ಕಳಿಸಲಾಗುವುದು ಎಂದು, ಚನ್ನಯ್ಯ ಹಿರೇಮಠ, ಪಿಐ, ಶಹಾಪುರ ಹೇಳಿದರು.

Contact Your\'s Advertisement; 9902492681

ಎಸ್.ಪಿ. ಸಿ.ಬಿ. ವೇದಮೂರ್ತಿ ಮಾತನಾಡಿ ಇದೇ ತರಹದ ಸಭೆಯನ್ನು ಯಾದಗಿರಿಯಲ್ಲಿ ನಡೆಸಿ ಸುಮಾರು‌90 ಆಟೋಗಳಿಗೆ ನಂಬರ್ ಕೊಡಲಾಗಿದೆ. ಇಲ್ಲಿಯೂ ಕೂಡಾ ಅಷ್ಟೇ ಸಂಖ್ಯೆಯ ನಂಬರ ಕೊಡಲಾಗುವುದು. ದಾಖಲಾತಿಗಳನ್ನು ಚಾಲಕರು ಒದಗಿಸಿ ಕ್ರಮ ಸಂಖ್ಯೆ ತೆಗೆದುಕೊಳ್ಳಬೇಕು.

ಕೆಲ ಚಾಲಕರು ಸಮಯಾವಕಾಶ ಕೇಳಿದ್ದಾರೆ. ಆದರೆ, ಆಟೋ ಚಾಲಕರು ಹೆಚ್ಚು ಸಮಯಾವಕಾಶ ತೆಗೆದುಕೊಳ್ಳದೇ ಈ ಕೂಡಲೇ ಆಟೋಗಳಿಗೆ ಬೇಕಾಗುವ ಸೂಕ್ತ ದಾಖಲಾತಿಗಳನ್ನು ಪಡೆದುಕೊಳ್ಳಿ. ಅಗತ್ಯ ಎನಿಸಿದರೆ ಪೊಲೀಸರು ಸಹಾಯ ಮಾಡಲಿದ್ದಾರೆ.

ಅಕ್ರಮ ಚಟುವಟಿಕೆ ಹಾಗೂ ಅಪರಾಧಿ‌ ಪ್ರಕರಣಗಳ ತಡೆಗೆ ಆಟೋ ಗಳಿಗೆ ಒದಗಿಸಲಾಗುವುದು ಕ್ರಮಸಂಖ್ಯೆ ಅನುಕೂಲವಾಗಲಿದೆ. ರಾತ್ರಿ ಪಾಳಿಯಲ್ಲಿ ಆಟೋ ಓಡಿಸುವ ಚಾಲಕರು ಪ್ರತಿದಿನ ರಾತ್ರಿ 10/ಗಂಟೆಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಯಾಕೆಂದರೆ, ಹಿಂದೆ ದಾಖಲಾದ ಪ್ರಕರಣಗಳಲ್ಲಿ ಆಟೋ‌ ಚಾಲಕರೇ ಆರೋಪಿಗಳಾಗಿದ್ದರು.

ಆಟೋ ಚಾಲಕರು ಕಡ್ಡಾಯವಾಗಿ ಯೂನಿಫಾರಂ ಧರಿಸಿಯೇ ಕರ್ತವ್ಯ‌ನಿರ್ವಹಣೆ ಮಾಡಬೇಕು. ಒಮ್ಮೆ ಆಟೋಗೆ ನಂಬರ್ ಕೊಟ್ಟರೆ ಅದು ಮುಂದುವರೆಯಬೇಕು. ಆಟೋಗಳಲ್ಲಿ‌ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಕರೆದೊಯ್ಯಬಾರದು.

ಈಗ ಕೊವಿಡ್ ಸೋಂಕು ಇಳಿಮುಖವಾಗಿದೆ. ಆದರೂ ಕೂಡಾ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ ನಿಮ್ಮ ಕುಟುಂಬದವರಿಗೂ ಹಾಕಿಸಿ. ಮಾಸ್ಕ್ ಧರಿಸಿ ಕೊರೋನಾ ಹಬ್ಬದಂತೆ ತಡೆಯಬಹುದು. ಜಿಲ್ಲೆಯಲ್ಲಿ ಒಟ್ಟು 9 ಲಕ್ಷ ಜನರು ಲಸಿಕೆ ಹಾಕಿಸಿಕೊಳ್ಳಲು ಅರ್ಹರಿದ್ದು ನಿನ್ನೆಯವರೆಗೆ 7 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ.

ಯಾವುದೇ ಅಕ್ರಮ ಚಟುವಟಿಕೆ, ಅಕ್ರಮ ವಸ್ತುಗಳ ಸಾಗಾಣಿಕೆ, ಮದ್ಯ‌ಸಾಗಾಣಿಕೆಯಲ್ಲಿ ಆಟೋ ಚಾಲಕರು ಭಾಗಿಯಾದರೆ ಖಂಡಿತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಪೊಲೀಸ್ ಇಲಾಖೆ ಇತ್ತೀಚಿಗೆ ವಾಟ್ಸ್ ಅಪ್‌ ನಂಬರ್ ಒದಗಿಸಲಾಗಿದ್ದು ಮನೆಯಿಂದ ಹೊರಗಡೆ ಹೋಗುವವರು ನಿಮ್ಮ ಮನೆಯ ವಿವರ ಕೊಟ್ಟರೆ ಪೊಲೀಸರು ಅಂತಹ ಮನೆ ಕಳ್ಳತನ ಆಗುವುದನ್ನು ತಪ್ಪಿಸಲಾಗುವುದು. ಯಾವುದೇ ಸಮಸ್ಯೆಯಾದರೆ 112 ಗೆ ಕರೆ ಮಾಡಿ ಪೊಲೀಸರ ಸಹಾಯ ಪಡೆದುಕೊಳ್ಳಿ ಎಂದು ಕರೆ ನೀಡಿದರು.

ಆಟೋ ಚಾಲಕರು ತಯಾರಿದ್ದರೆ ಮುಂದಿನ ವಾರದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗುವುದು ಎಂದು ಎಸ್ ಪಿ ಮನವಿ ಮಾಡಿದರು. ಎಸ್ ಪಿ ಕಚೇರಿಯಲ್ಲಿ ಸಬ್ ಇನ್ಸಪೆಕ್ಟರ್, ಹಾಗೂ ಇತರೆ ಪೊಲೀಸ್ ಸಿಬ್ಬಂದಿಗಳಿಗೆ, ಐ ಎ ಎಸ್ ಹಾಗೂ ಐ ಪಿ ಎಸ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು.

ಮರ ಗಿಡಗಳನ್ನು ಬೆಳೆಸಿ ಪರಿಸರ ಕಾಪಾಡಿ. ಹೆಚ್ಚು ಹೆಚ್ಚು ಹಣ್ಣಿನ‌ ಮರಗಿಡಗಳನ್ನು ಬೆಳೆಸಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಟೋ‌ಚಾಲಕ ಬೆಳಿಗ್ಗೆ 7.ರಿಂದ ರಾತ್ರಿ 8 ರವೆಗೆ ಮಾತ್ರ ಕೆಲಸ ಮಾಡುವಂತೆ ಪೊಲೀಸರು ಹೇಳುತ್ತಿದ್ದಾರೆ. ರಾತ್ರಿ ಹತ್ತರವರೆಗೆ ಆಟೋ ಓಡಿಸಲು ಅನುಮತಿ ನೀಡಿ ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಎಸ್ ಪಿ ಅವರು, ರಾತ್ರಿ ಹತ್ತುವರೆಯವರೆಗೆ ಕರ್ತವ್ಯ ನಿರ್ವಹಿಸುವ ಆಟೋ‌ಚಾಲಕರು ತಮ್ಮ ಮೊಬೈಲ್ ನಂಬರ ಹಾಗೂ‌ ವಿವರ ಒದಗಿಸಿದರೆ ಪರಿಶೀಲಿಸಲಾಗುವುದು. ಆದರೆ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಆಟೋ ಚಾಲಕರು ಕಡ್ಡಾಯವಾಗಿ ತಮ್ಮ ಸಂಪೂರ್ಣ ವಿವರ ಒದಗಿಸಲೇಬೇಕು ಎಂದರು.

ಈ‌ ಸಂದರ್ಭದಲ್ಲಿ ಎಸ್ ಪಿ ಅವರು ಆಟೋ‌ಚಾಲಕರಿಗೆ ವಿವಿಧ ತಳಿಯ ಸಸಿಗಳನ್ನು ವಿತರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here