ಕಲಬುರಗಿ: ಕಲ್ಯಾಣ ಕರ್ನಾಟಕದ ಪ್ರಗತಿಯ ಬಗ್ಗೆ ಮಾತಲ್ಲೇ ಮಂಟಪ ಕಟ್ಟದೆ ಬಿಜೆಪಿ ಸರ್ಕಾರ ರಾಜಕೀಯ ಇಚ್ಚಾಶಕಿ ಪ್ರದರ್ಶಿಸಲಿ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಗುಡುಗುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ.
ಗುರುವಾರದ ಕಲಾಪದಲ್ಲಿ ಕಲ್ಯಾಣ ಕರ್ನಾಟಕದ ಸರ್ವತೋಮುಖ ಪ್ರಗತಿಗೆ ಆಳುವ ಬಿಜೆಪಿ ಸರಕಾರ ಮಾತಲ್ಲೇ ಭರವಸೆಗಳನ್ನು ನೀಡುತ್ತ ಕಾಲಹರಣ ಮಾಡುತ್ತಿದೆಯೇ ವಿನಹಃ ನಿಜ ಕಲ್ಯಾಣಕ್ಕೆ ಪಣ ತೊಡುತ್ತಿಲ್ಲ ಎಂದು ಅಂಕಿ ಸಂಖ್ಯೆ ಸಮೇತ ದೂರಿದರು.
ಬರೀ ಮಾತಿನಲ್ಲೇ ಕಲ್ಯಾಣ ಕರ್ನಾಟಕ ಪ್ರಗತಿಯ ಮಂಟಪ ಕಟ್ಟಲಾಗುತ್ತಿದೆಯೇ ವಿನಹಃ ವಾಸ್ತವದಲ್ಲಿ ನೋಡಿದರೆ ಏನೂ ಆಗುತ್ತಿಲ್ಲ. ತಾಂತ್ರಿಕ- ತಾಂತ್ರಿಕೇತರ ಹುದ್ದೆಗಳಿಲ್ಲದೆ ಕೆಕೆಆರ್‍ಡಿಬಿಯಲ್ಲಿ ಈಗಿರುವ 1, 500 ಕೋಟಿ ರು ಅನುದಾನವನ್ನೇ ವೆಚ್ಚ ಮಾಡಲಾಗುತ್ತಿಲ್ಲ.
2013 ರಿಂದ 2021 ರ ವರೆಗಿನ ಮಂಡಳಿ ಇತಿಹಾಸ ತೆಗೆದು ನೋಡಿದರೆ ಅನುದಾನವೇ ವೆಚ್ಚವಾಗಿಲ್ಲ. ಮೊನ್ನೆ ಸಿಎಂ ಬೊಮ್ಮಾಯಿವರು 3 ಸಾವಿರ ಕೋಟಿ ಹಣ ಕೊಡೋ ಭರವಸೆ ನೀಡಿ ಬಂದಿದ್ದಾರೆ. ಅದಕ್ಕೂ ಷರತ್ತು ಹಾಕಿದ್ದಾರೆ.
ಸಿಎಂ ಮೊನ್ನೆ ಕಲ್ಯಾಣ ಉತ್ಸವದಲ್ಲಿ ಕಲಬುರಗಿಗೆ ಹೋಗಿ ಅಲ್ಲಿ ಮಂಡಳಿಯಗೆ ಅನುದಾನ ಈಗಿರುವ 1500 ರಿಂದ 3 ಸಾವಿರ ಕೋಟಿ ಮಾಡೋದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಷರತ್ತು ಹಾಕಿದ್ದಾರೆ. 1500 ಕೋಟಿ ರು ವೆಚ್ಚ ಮಾಡಬೇಕೆಂದಿದ್ದಾರೆ. ಆದರೆ ಮಂಡಳಿಯ ಇತಿಹಾಸದಲ್ಲಿ ಹಣ ವೆಚ್ಚ ವಾಗಿz್ದÉೀ ಇಲ್ಲ.
ಕಳದದ ವರ್ಷದ 1, 482 ಕೋಟಿ ರು 373 ಕೋಟಿ ರು ಬಿಡುಗಡೆಯಾಗಿದೆ. ವೆಚ್ಚವಾಗಿದ್ದು 363 ಕೋಟಿ ರು. 5 ತಿಂಗಳಲ್ಲೇ ಬಜೆಟ್ ಬರುತ್ತದೆ. ಉಳಿದ ಹಣ ವೆಚ್ಚ ಮಾಡಲು ಸಾಧ್ಯವೆ? ಮಂಡಳಿ ಅಶಕ್ತವಾಗಿದೆ. ಹಣ ವೆಚ್ಚವಾಗೋದಿಲ್ಲ. 3 ಸಾವಿರ ಕೋಟಿ ರು ಅನುಆನ ಬರೋದಿಲ್ಲವೆಂದು ಡಾ. ಅಜಯ್ ಸಿಂಗ್ ಸಿಎಂ ಘೋಷಣೆ ಹಿಂದಿನ ಮರ್ಮವನ್ನು ಸದನದ ಮುಂದೆ ಬಿಚ್ಚಿಟ್ಟರು.
ಇಂತಹ ಘೋಷಣೆ ಅವಾಸ್ತವಿಕವಲ್ಲದೆ ಮತ್ತೇನು? ಮೊದಲು ಕೆಕೆಆರ್‍ಡಿಬಿಗೆ ಕಾಯಂ ಕಾರ್ಯದರ್ಶಿ ನೇಮಕವಾಗಲಿ, ನಂತರ ಕಾಲಿ ಹುದ್ದೆ ಭರ್ತಿ ಮಾಡಿರಿ, ನಂತರ ಮಂಡಳಿಗೆ ಹಣ ಕೊಟ್ಟು ವೆಚ್ಚಕ್ಕೆ ಬೆನ್ನು ಹತ್ತಿರಿ, ಅದನ್ನೆಲ್ಲ ಬಿಟ್ಟು ಸುಮ್ಮನೆ ಹಿಂದುಳಿದ ಭಾಗದ ಜನರನ್ನ ಮಾತಿನಲ್ಲೇ ಮರಲು ಮಾಡುವುದು ಬೇಡವೆಂದು ಡಾ. ಅಜಯ್ ಸಿಂಗ್ ತಮ್ಮ ಮಾತಿನಲ್ಲೇ ತಿವಿದರು.
ಇಡೀ ರಾಜ್ಯದ ಜನಸಂಖ್ಯೆಯ ಪೈಕಿ 1. 12 ಕೋಟಿ ಜನ ಕಲ್ಯಾಣದ 7 ಜಿಲ್ಲೆಗಳಲ್ಲಿದ್ದಾರೆ. ಇಲ್ಲಿರುವ ಸಾಕ್ಷರತೆ ಪ್ರಮಾಣ ಶೇ. 64, ಶಿಶು ಮರಣ ಪ್ರಮಾಣ 51 ರಷ್ಟಿದೆ. ಇದಲ್ಲದೆ ಎಸ್ಸಿ- ಶೇ. 24, ಎಸ್ಟಿ ಶೇ. 34 ರಷ್ಟು ಜನ ವಸತಿ ಇಲ್ಲಿದೆ. ಹೀಗಿದ್ದರೂ ಈ ನಾಡಿನ ಕಲ್ಯಾಣಕ್ಕೆ ಮಾತಿನಲ್ಲೇ ಕಾಲಹರಣ ಮಾಲಾಗುತ್ತಿದೆಯೇ ವಿನಹಃ ವಾಸ್ತವದಲ್ಲಿ ನೇನೂ ಕೆಲಸಗಳಾಗುತ್ತಿಲ್ಲವೆಂದರು.
ಡಾ. ಮಲ್ಲಿಕಾರ್ಜುನ ಖರ್ಗೆ, ದಿ. ಧರಂಸಿಂಗ್ ದೆಹಲಿ ಮಟ್ಟದಲ್ಲಿ ತಮ್ಮ ಪ್ರಾವ ಬೀರಿ ಈ ಭಾಗಕ್ಕೆ ಸಂವಿಧಾನದ ಕಲಂ 371 (ಜೆ) ರಕ್ಷಣೆ ಒದಗಿಸಿಕೊಟ್ಟರೂ ಆಳುವ ಬಿಜೆಪಿ ಸರಕಾರ ಈ ಕಲಂ ಅನ್ವಯ ಉದೋಗ, ನೇಮಕಾತಿ, ಶಿಕ್ಷಣ ಇತ್ಯಾದಿ ರಂಗಗಳಲ್ಲಿ ಈ ನೆಲದವರಿಗ ಸಿಗಬೇಕಾದಂತಹ ಸವಲತ್ತುಗಳು ಸಿಗುವಂತೆ ಮಾಡುವಲ್ಲಿಯೂ ಮೀನಮೇಷ ಧೋರಣೆ ಎಣಿಸುತ್ತಿದೆ ಎಂದು ಅಂಕಿ- ಸಂಖ್ಯೆ ಸಮೇತ ಸದನದ ಮುಂದಿಟ್ಟರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೆಕೆಆರ್‍ಡಿಬಿಗೆ 1 ಸಾವಿರದಿಂದ 1, 500 ಕೋಟಿ ರು ನುದಾನ ಹೆಚ್ಚಿಸಿ ತನ್ನ ಇಚ್ಚಾಶಕ್ತಿ ಪ್ರದರ್ಶಿಸಿದೆ. ಅದಿನ್ನೂ ಅಷ್ಟೇ ಉಳಿದುಕೊಂಡಿದೆ. ಬಿಜೆಪಿ ಸರಕಾರ ಯಾಕೆ ಹೆಚ್ಚಿಸಬಾರದಿತ್ತು? ಬಿಜೆಪಿಗರಿಗೆ ಇದೆಲ್ಲವೂ ಬೇಡವಾಗಿದೆ. ಮಾತಿನಲ್ಲೇ ಸ್ವರ್ಗ ತೋರಿಸಿ ಸಾಗಹಾಕುತ್ತಿದ್ದಾರೆ. ಈ ಭಾಗದ ಪ್ರಗತಿಗೆ ಸರಕಾರದಿಂದ ಮಂಜೂರಾಗಬೇಕಿದ್ದಂತಹ ರೆಗ್ಯೂಲರ್ ಬಜೆಟ್ ಹಣವನ್ನೂ ನೀಡದೆ ಎಲ್ಲವನ್ನು ಕೆಕೆಆರ್‍ಡಿಬಿಯಿಂದಲೇ ಹೊಂದಿಸಿರೆಂದು ಹೇಳುತ್ತಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣಕ್ಕೆ ಮಂಡಳಿಯಿಂದಲೇ 65 ಕೋಟಿ ರು ನೀಡಲಾಯ್ತು. ಆಕೆ ಸರಕಾರ ಕೊಡಬಾರದಿತ್ತೆ? ಇಲ್ಲಿನ ಅನೇಕ ಯೋಜನೆಗಳಿಗೆ ರೆಗ್ಯೂಲರ್ ಬಜೆಟ್ ಪ್ರಾವಿಜನ್ ನೀಡದೆ ಮಂಡಳಿಯತ್ತಲೆ ಬೆರಳು ತೋರಿಸುವ ಕೆಲಸವಾಗುತ್ತಿದೆ, ಯಾಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಕಲ್ಯಾಣ ನಾಡು ಇಡೀ ರಾಜ್ಯದಲ್ಲೇ ಹಿಂದುಳಿದಿದೆ ಎಂದು ಡಾ. ನಂಜುಂಡಪ್ಪ ಅವರೇ ಹೇಳಿದ್ದಾರೆ. ಹೀಗೆ ಹೇಳಲು ಅವರು 34 ಮಾನದಂಡಗಳನ್ನು ಪರಿಶೀಲನೆ ಮಾಡಿದ್ದಾರೆ. ಹಿಂದುಳಿದ ತಾಲೂಕಿಗಳಲೂ ಇಲ್ಲೇ ಹೆಚ್ಚಿವೆ. ಅನೇಕ ಕಡೆ ಶಾಸಕರಿಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದರೂ ಕಲ್ಯಾಣ ನಾಡಿನ 41 ಸದಸ್ಯರಿಗೆ ಅನುದಾನವೇ ನೀಡುತ್ತಿಲ್ಲ ಯಾಕೆ
ಬಜೆಟ್ ಗಾತ್ರಕ್ಕೆ ತಕ್ಕಂತೆ ಕಲ್ಯಾಣ ಕರ್ನಾಟಕ ಪ್ರೇಶಾಭಿವೃದ್ಧಿ ಮಂಡಳಿಗೆ ಅನುದಾನ ಹೆಚ್ಚಳವಾಗಬೇಕು. ಈ ಬಾಗದ ಹಿಂದುಳಿದಿರುವಿಕೆ ಪ್ರಮಾಣವನ್ನು ಲೆಕ್ಕಹಾಕಿ ಹೆಚ್ಚಿನ ಅನುದಾನ ನೀಡಬೇಕು. ತಜ್ಞರ ಸಲಹೆ ಸೂಚನೆ ಪಡೆದು ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಲಿ, ಅದನ್ನೆಲ್ಲ ಬಿಟ್ಟು ಮಾತಿನಲ್ಲೇ ಹಿಂದುಳಿದವರ ಮೂಗಿಗೆ ತುಪ್ಪ ಸವರೋದು ಬೇಡವೆಂದು ಡಾ. ಅಜಯ್ ಸಿಂಗ್ ಹೇಳಿದರು.