ವೀರಾಪೂರು: ಪೋಷಣಾ ಅಭಿಯಾನ

0
17

ವೀರಾಪೂರು: ಮಕ್ಕಳು, ಮಹಿಳೆಯರು ಹಾಗೂ ಹಿರಿಯರಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಪೋಷಣಾ ಅಭಿಯಾನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯ ಹಾಗೂ ಎಸ್ ಎಫ್‌ ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು ಹೇಳಿದರು.

ಪಟ್ಟಣದ ಸಮೀಪದ ವೀರಾಪೂರು ಗ್ರಾಮದ ಅಂಗನವಾಡಿ ಕಚೇರಿಯಲ್ಲಿ ನಡೆದ ಪೋಷಣಾ ಅಭಿಯಾನ ಯೋಜನೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಆರೋಗ್ಯ ಇಲಾಖೆಯೊಂದಿಗೆ ನಿಯಮಿತವಾಗಿ ಗರ್ಭಿಣಿ, ಬಾಣಂತಿ, ಹದಿಹರೆಯದ ಹೆಣ್ಣುಮಕ್ಕಳ ಹಿಮೊಗ್ಲೋಬಿನ್ ತಪಾಸಣೆ ಮಾಡಬೇಕು. ಜನನದ ವೇಳೆ ಕಡಿಮೆ ತೂಕ ಹೊಂದಿರುವ ಮಕ್ಕಳನ್ನು ಗುರುತಿಸಬೇಕು. ಪೋಷಕರಿಗೆ ಅಶಕ್ತ ನವಜಾತ ಮಗುವಿನ ಆರೈಕೆ ಕುರಿತು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.

ಮಕ್ಕಳ ಬೆಳವಣಿಗೆ ಕಂಠಿತ, ಕಡಿಮೆ ತೂಕದ ಮಕ್ಕಳ ಜನನ, ಮಹಿಳೆಯರಲ್ಲಿ ಉಂಟಾಗುವ ಉಂಟಾಗುವುದು ರಕ್ತ ಹೀನತೆ, ಗರ್ಭಪಾತವನ್ನು ತಡೆಗಟ್ಟುವುದು ಯೋಜನೆಯ ಉದ್ದೇಶ ಸಾಕಾರಕ್ಕೆ ಅಧಿಕಾರಿಗಳು ಶಕ್ತಿಮೀರಿ ಪ್ರಯತ್ನಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಿರ್ಮಲಾ, ಅಂಗನವಾಡಿ ಶಿಕ್ಷಕಿ ಲಕ್ಷ್ಮೀ ನಗನೂರು ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಭೂಷಣ, ಸದಸ್ಯರಾದ ಶಾಶುಬೇಗಂ, ಸಂಜೀವಪ್ಪ, ಅಂಗನವಾಡಿ ಶಿಕ್ಷಕಿ ಶಶಿಕಲಾ, ರಾಚಮ್ಮ, ಡಿವೈಎಫ್ಐ ಮುಖಂಡ ಶಿವರಾಜ್ ಕಪಗಲ್ ಸೇರಿದಂತೆ ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಅಂಗನವಾಡಿ ಶಿಕ್ಷಕಿಯರು ಸಹಾಯಕಿಯರು ಗರ್ಭಿಣಿಯರು ಮಹಿಳೆಯರು ಸೇರಿದಂತೆ ಅನೇಕ ಮಕ್ಕಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here