ಭಾರತ ಬಂದ್ ಗೆ ಬೆಂಬಲಿಸಿ ಜೇವರ್ಗಿ ಹೆದ್ದಾರಿ ಮೇಲೆ ಪ್ರತಿಭಟನೆ

0
61

ಜೇವರ್ಗಿ: ರೈತರಿಗೆ ಮಾರಕವಾದ ಕೃಷಿ ಕಾಯ್ದೆ ಹಿಂಪಡೆಯುವಂತೆ ಕೇಂದ್ರ ಸರಕಾರದ ವಿರುದ್ಧ ಇಂದು ರೈತ ಸಂಘಟನೆಗಳು ಭಾರತದ ಬಂದ್ ಕರೆ ನೀಡಿದ್ದನ್ನು ವಿವಿಧ ಪ್ರಗತಿಪರ ಸಂಘಟನೆಗಳು ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ,ರೈತ ಸಂಘದ ಪದಾಧಿಕಾರಿಗಳು ಡಾ. ವಿಷ್ಣು ಸೇನಾ ಸಮಿತಿ ಪದಾಧಿಕಾರಿಗಳು ಬೆಂಬಲ ಸೂಚಿಸಿದ್ದಾರೆ.

ಜೇವರ್ಗಿ ಪಟ್ಟಣದ ಪಟ್ಟಣದ ಹೆದ್ದಾರಿಯ ಅಖಂಡೇಶ್ವರ ಚೌಕ್ ನಲ್ಲಿ ಮೂರುಗಂಟೆಗಳ ಕಾಲ ರಸ್ತೆ ಮೇಲೆ ಕಳಿತು, ಪ್ರತಿಭಟನೆ ಮಾಡಿದರು .ಈ ಸಂದರ್ಭದಲ್ಲಿ ರವೀಂದ್ರ ಕೊಳಕುರ ಸಲೀಮ್ ಕಣ್ಣಿ, ಭೀಮರಾಯ ನಗನೂರ್ ,ಲಕ್ಷೀ ಆಲಬಾಯಿ, ಮಲ್ಲಮ್ಮ ಕೊಂಬಿನ್ ,ಬಸವರಾಜ ಬಾಗೇವಾಡಿ ,ಮರೆಪ್ಪ ಸರಡಗಿ ಸೇರಿದಂತೆ ಅನೇಕ ಜನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ರೈತ ಮುಖಂಡರು ಬಾಗಿಯಾಗಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here