ಶಹಾಬಾದ: ನಗರದ ಆಸ್ಪಲ್ಲಿ, ಎಸ್.ಎಸ್.ನಂದಿ ಮತ್ತು ಎಸ್‌ಜಿ ವರ್ಮಾ ಹಿಂದಿ ಪ್ರೌಢಶಾಲೆಗೆ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯಸ್ವಾಮಿ ರುದ್ನೂರ್ ಬೇಟಿ ನೀಡಿ ಪರಿಶೀಲಿಸಿದರು.
ಶಾಲೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಪ್ರತಿ ತರಗತಿಗಳಿಗಳಿಗೆ ತೆರಳಿ ಮಕ್ಕಳ ಸಂಖ್ಯೆ, ಮಕ್ಕಳು ಮಾಸ್ಕ್ ಧರಿಸಿದ್ದಾರೆಯೇ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿದ್ದಾರೆಯೇ ಎಂದು ವೀಕ್ಷಿಸಿದರು.
ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯಸ್ವಾಮಿ ರುದ್ನೂರ್, ಶಾಲೆಗಳಲ್ಲಿ ಕಡ್ಡಾಯವಾಗಿ ಕೋವಿಡ್-೧೯ ನಿಯಮಾವಳಿಯನ್ನು ಸರಿಯಾಗಿ ಪಾಲನೆ ಮಾಡಬೇಕು.ಪ್ರತಿ ದಿನ ಮಕ್ಕಳಿಗೆ ಸ್ಯಾನಿಟೈಜರ್ ಮಾಡಿ, ಥರ್ಮಲ್ ಸ್ಕ್ರಿನೀಂಗ್ ಮಾಡತಕ್ಕದ್ದು. ಸರ್ಕಾರದ ಆದೇಶ ಪಾಲನೆ ಮಾಡುವುದು ಎಲ್ಲರ ಕರ್ತವ್ಯ. ಒಂದು ವೇಳೆ ಪಾಲನೆಯಾಗದಿದ್ದರೇ ಕಠಿಣ ಕ್ರಮಕೈಗೊಳ್ಳಲಾಗುವುದು. ಮಕ್ಕಳ ಪಾಲಕರು ಕೋವಿಡ್ ಲಸಿಕೆ ತೆಗೆದುಕೊಂಡಿರದಿದ್ದರೇ, ಅವರನ್ನು ಪ್ರೇರೇಪಿಸಿ ಲಸಿಕೆ ತೆಗೆದುಕೊಳ್ಳುವಂತೆ ಮಾಡಿ. ಶಾಲಾ ಆವರಣ, ಶೌಚಾಲಯ ಹಾಗೂ ಮೂತ್ರಾಲಯದಲ್ಲಿ ಸ್ವಚ್ಛತೆ ಕಾಪಾಡಿ. ಇದರಲ್ಲಿ ಉದಾಸೀನತೆ ತೋರದಿರಿ. ಮಕ್ಕಳು ಶಾಲೆಗೆ ಬರುವಂತೆ ಪ್ರೇರೇಪಿಸಿ.ಪ್ರತಿ ಶನಿವಾರ ಶಾಲಾ ಕೋಣೆ ಆವರಣವನ್ನು ಸ್ಯಾನಿಟೈಜರ್ ಮಾಡಿಸಬೇಕೆಂದು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ರವಿಚಂದ್ರ ರಾಠೋಡ, ಸಂತೋಷಕುಮಾರ ಶಿರವಾಳ,ಮುಖ್ಯಗುರುಮಾತೆ ಅನಿತಾ ಶರ್ಮಾ, ಶಿಕ್ಷಕ ಚನ್ನಬಸಪ್ಪ ಕೊಲ್ಲೂರ್, ಬಾಬಾಸಾಹೇಬ ಸಾಳುಂಕೆ, ರಮೇಶ ಜೋಗದನಕರ್, ಅನೀಲಕುಮಾರ ಕುಲಕರ್ಣಿ, ವಸಂತ ಪಾಟೀಲ, ವೀರಯ್ಯ ಹಿರೇಮಠ, ಸೂಗಯ್ಯ ಘಂಟಿಮಠ, ರಮೇಶ ಮಹೇಂದ್ರಕರ್,ಶರಣು ಹಲಕರ್ಟಿ ಇತರರು ಇದ್ದರು.