ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಸುಧಾರಣೆಗೆಗಾಗಿ ಮೂಲಸೌಲಭ್ಯ ಒದಗಿಸಲಾಗುವುದು: ಮತ್ತಿಮಡು

0
106

ಶಹಾಬಾದ: ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಣದ ಸುಧಾರಣೆಗೆಗಾಗಿ ಮತ್ತು ಮೂಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಾಕಷ್ಟು ಅನುದಾನ ಒದಗಿಸಲಾಗುತ್ತಿದ್ದು, ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಅವರು ಬುಧವಾರ ನಬಾರ್ಡ ಆರ್‌ಐಡಿಎಫ್ ಯೋಜನೆಯಡಿಯಲ್ಲಿ ಹಳೆಶಹಾಬಾದನ ಶಂಕರಲಿಂಗನ ಗುಡಿಯ ಬಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ೪ ಕೊಠಡಿಗಳ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಈಗಾಗಲೇ ೪೮ ಲಕ್ಷ ರೂ. ಅನುದಾನದಲ್ಲಿ ನಾಲ್ಕು ಕೋಣೆಗಳನ್ನು ನಿರ್ಮಿಸಲಾಗಿದೆ. ಹಳೆಶಹಾಬಾದನ ಮುಖಂಡರ ನಿರಂತರ ಸಂಪರ್ಕದಲ್ಲಿದ್ದು, ನಮ್ಮೂರ ಶಾಲೆಗೆ ಕೋಣೆಗಳನ್ನು ನಿರ್ಮಾಣ ಮಾಡಬೇಕೆಂದು ಒತ್ತಾಯದ ಮೇರೆಗೆ ನಾಲ್ಕು ನೂತನ ಕೋಣೆಗಳು ಉದ್ಘಾಟನೆಗೊಂಡಿದ್ದು, ಇದಕ್ಕೆ ಇಲ್ಲಿನ ಜನರ ಶಿಕ್ಷಣದ ಮೇಲೆ ಇರುವ ಪ್ರೀತಿ ತೋರುತ್ತದೆ ಎಂದರು.

ಈ ಭಾಗದ ಎಲ್ಲಾ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಕೋಣೆಗಳು ಬೇಕಾದರೆ ಅದಕ್ಕೂ ಅನುದಾನ ಒದಗಿಸಲಾಗುತ್ತದೆ.ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು.ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಮೂಲ ಸೌಕರ್ಯ ಮಕ್ಕಳಿಗೆ ಲಭ್ಯತೆ ಇದ್ದು, ಪಾಲಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.ಅಲ್ಲದೇ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ ಎಂದು ತಿಳಿದು ಬಂದಿದ್ದು, ಶಿಕ್ಷಕರ ಕೊರತೆಯನ್ನು ನೀಗಿಸಲಾಗುವುದು ಎಂದು ಹೇಳಿದರು.

ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಉಪಾಧ್ಯಕ್ಷೆ ಸಲೀಮಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೇಕಾರ, ಅಣವೀರ ಇಂಗಿನಶೆಟ್ಟಿ, ಭಾಗಿರಥಿ ಗುನ್ನಾಪುರ, ತಹಸೀಲ್ದಾರ ಸುರೇಶ ವರ್ಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯಸ್ವಾಮಿ ರುದ್ನೂರ್, ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ಪ್ರಕಾಶ ನಾಯಕೋಡಿ, ನಾಗೇಂದ್ರ ಸುಬೇದಾರ, ವೆಂಕಟರೆಡ್ಡಿ, ಸಂತೋಷ ಕುಮಾರ, ಈರಣ್ಣ ಕೆಂಭಾವಿ, ಬಸವರಾಜ ಬಳೂಂಡಗಿ, ಸತ್ಯ ನಾಯಕ, ಶಿವಪುತ್ರ ಕರಣಿಕ, ನಗರಸಭೆಯ ಸದಸ್ಯರಾದ ಮಲ್ಲಿಕಾರ್ಜುನ ವಾಲಿ, ಇನಾಯತ್ ಖಾನ್ ಜಮಾದರ,ಶ್ವೇತಾ ನಾಟೇಕಾರ, ಸಂತೋಷ ಸಗರ,ಶಿವುಗೌಡ, ಶ್ರೀಶೈಲಪ್ಪ ಬೆಳಮಗಿ, ಗುರುರಾಜ ಮಾಲಿ ಪಾಟೀಲ, ಶಿವರಾಜ ಪಾರಾ, ಶಿವಕುಮಾರ ನಾಟೇಕಾರ,ಇಬ್ರಾಹಿಂ ಶೇಖಮದ್,ಶರಣಬಸಪ್ಪ ಕೊಡದೂರ, ದೇವೆಂದ್ರಪ್ಪ ಸಿನ್ನೂರ್ ಮತ್ತಿತರರು. ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here