ಆಳಂದನಲ್ಲಿ ವಿಶ್ವ ಹಿರಿಯರ ದಿನಾಚರಣೆ: ಹಿರಿಯರ ಪಾಲನೆ ಪೋಷಣೆ ಪ್ರತಿಯೊಬ್ಬರ ಜವಾಬ್ದಾರಿ

0
39

ಆಳಂದ: ಇಡೀ ಜೀವನವೆಲ್ಲ ಸಮಾಜ ಹಾಗೂ ಕುಂಟುಬಕ್ಕಾಗಿ ದುಡಿದು ತಮ್ಮದೆಯಾದ ಕೊಡುಗೆ ನೀಡಿದ ಹಿರಿಯ ಜೀವಿಗಳನ್ನು ಇಳಿಹೊತ್ತಿನಲ್ಲಿ ಅವರನ್ನು ನಿರ್ಲಕ್ಷಿಸಿದೆ, ಅವರ ಆರೋಗ್ಯ ಪಾಲನೆ, ಪೋಷಣೆ ಕೈಗೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ನಂದಿಕೋಲಮಠ ಅವರು ಹೇಳಿದರು.

ಪಟ್ಟಣದ ಶರಣನಗರದ ಚೌಡೇಶ್ವರಿ ಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಾಗೂ ಜಿಲ್ಲಾ ಸಮೀಕ್ಷಣಾಧಿಕಾರಿ ಕಾರ್ಯಾಲಯ ಎನ್‌ಸಿಡಿ ಘಟಕ ಕಲಬುರಗಿ ಹಾಗೂ ಸ್ಥಳೀಯ ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ’ವಿಶ್ವ ಹಿರಿಯರ’ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

Contact Your\'s Advertisement; 9902492681

ಹಿರಿಯರು ಕುಟುಂಬದ ಬಾರವೆಂದು ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸದೆ ಮನೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತ್ತಾಗಬೇಕು. ಹಿರಿಯ ಜೀವಿಗಳು ಕುಟುಂಬದ ಆಸ್ತಿಯಿದ್ದಂತೆ ಅವರನ್ನು ಗೌರವದಿಂದ ಕಂಡು ಅವರ ಮಾರ್ಗದರ್ಶನದಲ್ಲಿ ನಡೆದರೆ, ನಮ್ಮ ಕೌಟುಂಬಿಕ ಜೀವನ ಯಶಸ್ವಿ ಕಾಣಲು ಸಾಧ್ಯವ್ತಿದೆ. ಜನರ ಆಯುಷ್ಯದ ಮಿತಿ ಕುಗ್ಗುತ್ತಿರುವ ದಿನಮಾನಗಳಲ್ಲಿ ಹಿರಿಯ ಜೀವಿಗಳ ಸಿಗುವುದು ವಿರಳವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಹಿರಿಯರಿಗೆ ಮಹತ್ವದ ಸ್ಥಾನವನ್ನು ಕೊಟ್ಟಿದ್ದೇವೆ. ಅವರ ಮಾರ್ಗದರ್ಶನದಲ್ಲಿ ನಡೆಯಬೇಕಾಗಿದೆ. ಅವರ ಇಳಿ ವಯಸ್ಸಿನಲ್ಲಿ ಊಟೋಪಚಾರ ಆರೋಗ್ಯದ ಹಿತವನ್ನು ಕಾಯಬೇಕಯ ಎಂದರು.

ಸಾಂಕ್ರಮಿಕ ಹಾಗೂ ಅಸಾಂಕ್ರಮಿP ರೋಗದ ಆಪ್ತ ಸಮಾಲೋಕ ಕಲ್ಯಾಣರಾವ್ ಖಜೂರಿ, ಹಿರಿಯರ ಅನುಭವ ಸಮಾಜ ಹಾಗೂ ಕುಟುಂಬಕ್ಕೆ ಅತಿ ಮುಖ್ಯವಾಗಿದೆ. ಇಂದು ಅವರನ್ನು ಗೌರವಿಸುದರಲ್ಲೇ ಮುಂದಿನ ಸಮಾಜ ಹಾಗೂ ಜನಾಂಗದ ಭವಿಷ್ಯ ಅಡಗಿದೆ. ಪ್ರತಿಯೊಬ್ಬರು ಹಿರಿಯರನ್ನು ಗೌರವಿಸಿ ಅವರ ಆರೋಗ್ಯ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.

ಬಡಾವಣೆಯ ಹಿರಿಯ ಸಿದ್ಧರಾಮ ಯಳಮೇಲಿ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಆಳಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಪ್ರಥ್ವಿರಾಜ ಚವ್ಹಾಣ, ಆರೋಗ್ಯ ಕಾರ್ಯಕರ್ತೆ ಶಿವಮ್ಮ, ಮಂಜುಳಾ, ಇಂಧಿರಾ, ಉಮಾ, ಸೌಭಾಗ್ಯ, ವಂದನಾ ಮತ್ತು ಅನಿತಾ, ಅಂಗನವಾಡಿ ಕಾರ್ಯಕರ್ತೆ ಕವಿತಾ, ಮೀನಾಕ್ಷಿ ಮತ್ತು ಶಶಿಕಲಾ ಸೇರಿ ಆರೋಗ್ಯ ಸಹಾಯಕಿಯರು ಹಾಗೂ ಅನೇಕರು ಮಹಿಳಾ ಹಾಗೂ ಪುರುಷ ಹಿರಿಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here