ಪುರಸಭೆ ಕಾಮಗಾರಿ ಕ್ರಿಯಾಯೋಜನೆಗೆ ಸಾಮಾನ್ಯ ಸಭೆ ಅನುಮೋದನೆ

0
13

ಆಳಂದ: ಸ್ಥಳೀಯ ಪುರಸಭೆಗೆ ಸಂಬಂಧಿಸಿದ ವಿವಿಧ ಯೋಜನೆಗಳ ಕಾಮಗಾರಿಯ ಕ್ರಿಯಾ ಯೋಜನೆಗೆ ಇಂದಿಲ್ಲಿ ನಡೆದ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ಕೈಗೊಳ್ಳಲಾಯಿತು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಗುರುವಾರ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ ಅವರ ಅಧ್ಯಕ್ಷತೆಯಲ್ಲಿ ಕರೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಕ್ರಿಯಾ ಯೋಜನೆಗೆ ಒಪ್ಪಿಗೆ ಸೂಚಿಸಿದರು.

Contact Your\'s Advertisement; 9902492681

ಸಭೆಯ ಆರಂಭದಲ್ಲಿ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ ಅವರು ಕ್ರಿಯಾಯೋಜನೆಗಳ ಅನುಮೋದನೆ ವಿಷಯ ಪ್ರಸ್ತಾಪಿಸಿದರು.

ಬಳಿಕ ಸದಸ್ಯರು ೨೦೨೦-೨೧ನೇ ಸಾಲಿನ ೧೫ನೇ ಕಣಕಾಸ ಯೋಜನೆ ಅಡಿಯಲ್ಲಿ ಹಂಚಿಕೆಯಾದ ಅನುದಾನದ ೨.೬೬ಕೋಟಿ ವೆಚ್ಚದ ಕ್ರಿಯಾ ಯೋಜನೆ ನ್ಯಾಯಾಲಯದ ಆದೇಶದಂತೆ ಸದಸ್ಯರು ಪುನಃ ಅನುಮೋದನೆ ಕೈಗೊಂಡರು. ಬಳಿಕೆ ೨೦೨೧-೨೨ನೇ ಸಾಲಿನ ೧೫ನೇ ಹಣಕಾಸಿನ ಯೋಜನೆ ಹಂಚಿಕೆಯಾಅದ ಅನುದಾನ ೧.೯೮ಕೋಟಿ ರೂ. ವೆಚ್ಚದ ಕಾಮಗಾರಿಯ ಕ್ರಿಯಾ ಯೋಜನೆಗೆ ಅನುಮೋದನೆ ದೊರೆಯಿತು.

೨೦೧೫-೧೬ನೇ ಸಾಲಿನಿಂದ ೨೦೧೯-೨೦ರವರೆಗಿನ ೧೪ನೇ ಹಣಕಾಸಿನ ಜೆಬಿಜಿ ಯೋಜನೆ ಅಡಿಯಲ್ಲಿ ಉಳಿತಾಯ ಅನುದಾನದ ೪೪.೫೦ಲಕ್ಷ ರೂ. ಹಾಗೂ ೨೦೨೧-೨೨ನೇ ಸಾಲಿನ ಎಸ್‌ಎಫ್‌ಸಿ ಮುಕ್ತನಿಧಿ ಶೇ ೭.೨೫ರ ಬಾಕಿ ಉಳಿತಾಯದ ೩ ಲಕ್ಷ ರೂಪಾಯಿಗೆ ಅನುಮೋದನೆ ನೀಡಿದರು.

ಸಭೆಯಲ್ಲಿ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಸದಸ್ಯ ಶ್ರೀಶೈಲ ಪಾಟೀಲ, ಸೋಮಶೇಖರ ಹತ್ತರಕಿ, ಸಂತೋಷ ಹೂಗಾರ, ಆಸ್ಮೀತಾ ಚಿಟಗುಪಕರ್, ಮೃತ್ಯುಂಜಯ ಆಲೂರೆ, ಪ್ರತಿಪಕ್ಷದ ಸದಸ್ಯ ಫೀರದೋಸ್ ಅನ್ಸಾರಿ, ಲಕ್ಷ್ಮಣ, ವೈಹಿದ್ ಜರ್ದಿ, ಅಮ್ಜದಅಲಿ ಖರ್ಜಗಿ ಮತ್ತಿತರು ಸಭೆಯಲ್ಲಿ ಚರ್ಚಿಸಿದರು.

ವ್ಯವಸ್ಥಾಪಕ ಶಂಭುಲಿಂಗ ಕೆನ್ನೆ, ಇಂಜಿನಿಯರ್ ಶರಣಯ್ಯ ಸ್ವಾಮಿ, ಅಂಬಾರಾಯ ಲೋಕಾಣೆ, ಎಸ್‌ಐ ಲಕ್ಷ್ಮಣ ತಳವಾರ ಇತರರು ಹಾಜರಿದ್ದರು ಮಾಹಿತಿ ಒದಗಿಸಿದರು. ಪ್ರಸ್ತಾಪಿತ ವಿಷಯಗಳ ಅನುಮೋದನೆ ಬಳಿಕ ಪಟ್ಟಣದಲ್ಲಿ ಬೀದಿ ಸ್ವಚ್ಛತೆ, ಚರಂಡಿ ನಿರ್ವಾಹಣೆ ಸೇರಿದಂತೆ ಇನ್ನಿತರ ಪ್ರಮುಖ ವಿಷಯಗಳ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗಳಿಗೆ ಒತ್ತಾಯಿಸಿದರು.

ಕಾರ್ಮಿಕರು ಸ್ವಚ್ಛತೆ ಕೈಗೊಳ್ಳುತ್ತಿಲ್ಲ. ಶುದ್ಧ ನೀರು ಪೂರೈಕೆ ಆಗುತ್ತಿಲ್ಲ. ಎಸ್‌ಐ ಏನು ಮಾಡುತ್ತಿದ್ದಾರೆ. ಚರಂಡಿ ತುಂಬಿ ಹರಿದರು ಸ್ಪಂದಿಸುತ್ತಿಲ್ಲ. ಕಸ ವಿಲೆವಾರಿಗೆ ತುರ್ತಾಗಿ ಕೈಗೊಳ್ಳಿ ಎಂದು ಆಡಳಿತ ಸದಸ್ಯ ಶ್ರೀಶೈಲ ಪಾಟೀಲ ಒತ್ತಾಯಿಸಿದರು. ೨೭ ವಾರ್ಡ್‌ಗಳಿಗೆ ೮೪ ಕಾರ್ಮಿಕರಿದ್ದರು ಕೆಲಸವಾಗುತ್ತಿಲ್ಲ. ಜನರ ಪ್ರಶ್ನಿಸುತ್ತಿದ್ದಾರೆ.

ಸಂಬಂಧಿತ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡು ಪ್ರಶ್ನಿಸಿದಾಗ ಸರ್ವ ಸದಸ್ಯರು ಪಕ್ಷಭೇದ ಮರೆತಿ ಧ್ವನಿಗೂಡಿಸಿದರು. ಈ ನಡುವೆ ಮುಖ್ಯಾಧಿಕಾರಿಗಳು ಮಾತನಾಡಿ, ಈ ಹಿಂದೆ ಆದ ಪ್ರಮಾದವನ್ನು ಮರುಕಳಸಿದಂತೆ ಸಂಬಂಧಿತ ಸಿಬ್ಬಂದಿಗೆ ತಾಕೀತು ಮಾಡಲಾಗುವುದು ಭರವಸೆ ನೀಡಿದ ಮೇಲೆ ಸಭೆ ಶಾಂತವಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here